ತಾಯಿಯನ್ನೇ ರೇಪ್​ ಮಾಡಿ ಕೊಲೆಗೈದ ಮಗ ಪೊಲೀಸರ ಬಳಿ ಹೇಳಿದ್ದನ್ನು ಕೇಳಿದ್ರೆ ಬೆಚ್ಚಿಬೀಳ್ತಿರಾ?

Mother son
Published on

ಹಾವೇರಿ: ಹೆತ್ತ ಮಗನೇ ತಾಯಿಯನ್ನು ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಿರುವ ಪೈಶಾಚಿಕ ಘಟನೆ ಶಿಗ್ಗಾವಿ ತಾಲೂಕಿನ ಗಂಗಿಭಾವಿ ಬಳಿ ಎರಡು ದಿನಗಳ ಹಿಂದೆ ನಡೆದಿದೆ ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪಾರವ್ವ ಸೋಮಲಪ್ಪ ಲಮಾಣಿ (35) ಕೊಲೆಯಾದ ಮಹಿಳೆ. ಶಿವಪ್ಪ ಸೋಮಲಪ್ಪ ಲಮಾಣಿ (21) ಆರೋಪಿ. ಮೃತ ತಾಯಿ ಮತ್ತು ಆರೋಪಿ ವನಹಳ್ಳಿ ಗ್ರಾಮದ ನಿವಾಸಿಗಳು. ಪರಪುರುಷರ ಜತೆ ಅಕ್ರಮ ಸಂಬಂಧಕ್ಕೆ ಬೆಳೆಸಿದ್ದಕ್ಕೆ ಬೇಸತ್ತು ತಾಯಿಯನ್ನೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಕಾಮತೃಷೆಗಾಗಿ ಮಗನನ್ನು ಬಳಸಿಕೊಳ್ಳುತ್ತಿದ್ದಲ್ಲದೆ, ಪರಪುರುಷರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ರೀತಿ ಮಾಡಬೇಡ ತಪ್ಪು ಎಂದು ಮೃತಳ ತಾಯಿ ಹಿಂದೊಮ್ಮೆ ಪಾರವ್ವಗೆ ಬುದ್ದಿವಾದ ಹೇಳಿದ್ದರಂತೆ. ಆದರೂ ಮಾತು ಕೇಳದ ಪಾರವ್ವ ತನ್ನ ಸಂಬಂಧ ಮುಂದುವರಿಸಿದ್ದಳು ಎನ್ನಲಾಗಿದೆ.

ತಾಯಿ ನಡೆಯಿಂದ ಬೇಸತ್ತ ಮಗ ಎಷ್ಟು ಹೇಳಿದರು ಕೇಳುವುದಿಲ್ಲ ಎಂದು ಕೊಲ್ಲಲು ಸಂಚು ರೂಪಿಸಿ, ಮದ್ಯ ಸೇವನೆ ಮಾಡಿಸಿ, ಬಳಿಕ ಬಲತ್ಕಾರ ಮಾಡಿ ಕೊಲೆಗೈದು ತಲೆ ಮರಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಇದೀಗ ಬಂಧನವಾಗಿರುವ ಆರೋಪಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು, ನಾನು ನನ್ನ ತಾಯಿಯ ಜತೆ ಸಂಬಂಧ ಹೊಂದಿದ್ದೆ. ಆದರೆ ನನ್ನ ಬಿಟ್ಟು ಬೇರೆಯವರ ಜತೆ ನಂಟು ಹೊಂದಿದ್ದಳು. ಹೀಗಾಗಿ ಊರಲ್ಲಿ ಮರ್ಯಾದೆ ಹಾಳಾಗಿತ್ತು. ಇದನ್ನು ಸಹಿಸಿಕೊಂಡು ಸಾಕಾಗಿತ್ತು. ಅದಕ್ಕೆ ಕೊಲೆ ಮಾಡಿದೆ ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಸದ್ಯ ಆರೋಪಿ ಶಿವಪ್ಪನನ್ನು ಬಂಧಿಸಿರುವ ಶಿಗ್ಗಾವಿ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net