ಹೊಸ ಜಿಲ್ಲಾ ಪಂಚಾಯತ್ ಸಿಇಒ ನೇಮಕದ ಬೆನ್ನಿಗೇ ಎತ್ತಂಗಡಿ; ಅಧಿಕಾರ ಸ್ವೀಕಾರಕ್ಕೂ ಮೊದಲೇ ಆದೇಶ ಬದಲು

Gayathri
Published on

ವಿಜಯನಗರ: ಮೊನ್ನೆಮೊನ್ನೆಯಷ್ಟೇ ರಾಜ್ಯದ 31ನೇ ಜಿಲ್ಲೆಯಾಗಿ ಅಧಿಕೃತವಾಗಿ ಅನಾವರಣಗೊಂಡಿರುವ ವಿಜಯನಗರಕ್ಕೆ ಇತ್ತೀಚೆಗಷ್ಟೇ ಹೊಸ ಜಿಲ್ಲಾಧಿಕಾರಿ ನೇಮಕವಾಗಿದ್ದರು. ಅಲ್ಲದೆ ಆ ಬಳಿಕ ಹೊಸ ಜಿಲ್ಲಾ ಪಂಚಾಯತ್​ ಸಿಇಒ ಕೂಡ ನೇಮಕಗೊಂಡಿದ್ದರು.

ಆದರೆ ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಹೊಸ ಜಿಲ್ಲಾ ಪಂಚಾಯತ್ ಸಿಇಒ ಅಧಿಕಾರ ಸ್ವೀಕಾರಕ್ಕೂ ಮೊದಲೇ ಎತ್ತಂಗಡಿಗೊಂಡಿದ್ದಾರೆ. ವಿಜಯನಗರ ಜಿಲ್ಲಾ ನೂತನ ಹಾಗೂ ಪ್ರಪ್ರಥಮ ಸಿಇಒ ಆಗಿ ಕೆ.ಎಂ. ಗಾಯತ್ರಿ ಅವರನ್ನು ನೇಮಿಸಲಾಗಿತ್ತು.

ಅಕ್ಟೋಬರ್ 2ರಂದು ನೂತನ ಜಿಲ್ಲಾ ಪಂಚಾಯತ್ ಸಿಇಒ ಆಗಿ ನೇಮಕಗೊಂಡಿದ್ದ ಕೆ.ಎಂ.ಗಾಯತ್ರಿ ಇನ್ನೇನು ಅಧಿಕಾರ ಸ್ವೀಕರಿಸುವುದಷ್ಟೇ ಬಾಕಿ ಇತ್ತು. ಅಷ್ಟರಲ್ಲಿ ಅವರನ್ನು ಎತ್ತಂಗಡಿ ಮಾಡಲಾಗಿದೆ. ಏಕೆ ಏನು ಎಂಬ ಕುರಿತ ನಿಖರ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಇದೀಗ ಸದ್ಯಕ್ಕೆ ಜಿಲ್ಲಾಧಿಕಾರಿ ಅನಿರುದ್ಧ್​ ಶ್ರವಣ್ ಅವರೇ ಹೆಚ್ಚುವರಿಯಾಗಿ ಸಿಇಒ ಜವಾಬ್ದಾರಿಯನ್ನೂ ನಿಭಾಯಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net