

Cinema | ಮ್ಯಾನ್ ಆಫ್ ದಿ ಮಾಸ್ ಎಂದು ಕರೆಯಲ್ಪಡುವ ಜೂನಿಯರ್ NTR ಇದೇ ಏಪ್ರಿಲ್ 22 ರಿಂದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ ಎಂಬ ಅಪ್ಡೇಟ್ ಸಿಕ್ಕಿದೆ. ಈ ಚಿತ್ರವನ್ನು ಈ ಹಿಂದೆ ಕೆಜಿಎಫ್ ಮತ್ತು ಸಲಾರ್ ಚಿತ್ರಗಳನ್ನು ನಿರ್ದೇಶಿಸಿದ್ದ ಬ್ಲಾಕ್ಬಸ್ಟರ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ನಿರ್ಮಾಪಕರು, ತಮ್ಮ 'ಎಕ್ಸ್' ಖಾತೆಯಲ್ಲಿ ಜೂನಿಯರ್ ಎನ್ಟಿಆರ್ ಏಪ್ರಿಲ್ 22, 2025 ರಂದು ಚಿತ್ರದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.
ಈ ಚಿತ್ರಕ್ಕೆ ಸದ್ಯಕ್ಕೆ NTR 31 ಎಂದು ಹೆಸರಿಡಲಾಗಿದೆ, ವರದಿಗಳ ಪ್ರಕಾರ, ನಿರ್ಮಾಪಕರು ಚಿತ್ರಕ್ಕೆ ಡ್ರ್ಯಾಗನ್ ಎಂದು ಹೆಸರಿಡಲು ಆಸಕ್ತಿ ಹೊಂದಿದ್ದಾರಂತೆ. ಚಿತ್ರದ ಚಿತ್ರೀಕರಣವು ಕೆಲವು ವಾರಗಳ ಹಿಂದೆ ಜೂನಿಯರ್ NTR ಇಲ್ಲದೆ ಪ್ರಾರಂಭವಾಗಿದ್ದು, ಇದೀಗ ಚಿತ್ರದ ನಿರ್ಮಾಣ ವೇಳಾಪಟ್ಟಿಯಲ್ಲಿ ಅವರ ಆಗಮನದ ದಿನಾಂಕವನ್ನು ನಿಗದಿಪಡಿಸಲಾಗಿದೆ.
ಜೂನಿಯರ್ NTR ಮತ್ತು ಪ್ರಶಾಂತ್ ನೀಲ್ ಚಿತ್ರಕ್ಕೆ ಅಪಾರ ಕ್ರೇಜ್ ಇದೆ. ನಿರ್ದೇಶಕರು ಕೆಜಿಎಫ್ ಚಾಪ್ಟರ್ 1, ಕೆಜಿಎಫ್ ಚಾಪ್ಟರ್ 2, ಸಲಾರ್ ನಂತಹ ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಸಲಾರ್ ಕೆಜಿಎಫ್ ಚಾಪ್ಟರ್ 2 ರಂತೆ ಸಕ್ಸಸ್ ಕಾಣದಿದ್ದರೂ ಸಹ ಚಿತ್ರದ ಡೈರೆಕ್ಷನ್ ಸದ್ದು ಮಾಡಿತ್ತು. ಹಾಗಾಗಿ ಪ್ರಶಾಂತ್ ನೀಲ್ ಅವರ ಈ ಚಿತ್ರವು ಸಹ ಬ್ಲಾಕ್ಬಸ್ಟರ್ ಹಿಟ್ ಆಗುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.
(ಏಜೆನ್ಸೀಸ್)
ಇನ್ನೂ ಈಗ ಆರಂಭವಾಗುವ ಚಿತ್ರ ಏಪ್ರಿಲ್ 9, 2026 ರಂದು ಬಹು ಭಾಷೆಗಳಲ್ಲಿ ದೊಡ್ಡ ಪರದೆಯ ಮೇಲೆ ಬರಲಿದೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ ಚಿತ್ರದ ಚಿತ್ರೀಕರಣ ನವೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮಲಯಾಳಂ ಸ್ಟಾರ್ ಹೀರೋ ಟೋವಿನೋ ಥಾಮಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ.
NTR, WAR 2 ಸಿನಿಮಾಗಾಗಿ ತಮ್ಮ ಕಮಿಟ್ಮೆಂಟ್ಗಳನ್ನು ಪೂರ್ಣಗೊಳಿಸಿದ್ದು, ಏಪ್ರಿಲ್ 22 ರಿಂದ ಪ್ರಶಾಂತ್ನೀಲ್ ಚಿತ್ರದ ಸೆಟ್ಗೆ ಬಂದು ಸೇರಲಿದ್ದಾರೆ.