ಹಳೆ ಆಧಾರ್​ ಕಾರ್ಡ್​ಗೆ ಹೇಳಿ ಗುಡ್​ಬೈ ; ಫೇಸ್ ಐಡಿ, QR ಕೋಡ್ ವೈಶಿಷ್ಟ್ಯಗಳೊಂದಿಗೆ ಹೊಸ ಆಧಾರ್ ಅಪ್ಲಿಕೇಶನ್ ಬಿಡುಗಡೆ| Aadhar

aadhar
Published on

ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರೇ ಈ ಬಗ್ಗೆ ಎಕ್ಸ್​ನಲ್ಲಿ ಮಾಹಿತಿ ನೀಡುವ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

Aadhar | ಇನ್ಮುಂದೆ ಬಳಕೆದಾರರು ಹೋದಲೆಲ್ಲಾ ತಮ್ಮ ಆಧಾರ್ ಕಾರ್ಡ್ ಕೊಂಡೊಯ್ಯಬೇಕು ಎನ್ನುವ ಅಗತ್ಯವಿಲ್ಲ. ಏಕೆಂದರೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಬಹು ನಿರೀಕ್ಷಿತ ಆಧಾರ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದು ಹೆಚ್ಚು ಸುಲಭವಾಗಿ ಮತ್ತು ಸುರಕ್ಷಿತವಾಗಿಸಲು ಸಹಾಯ ಮಾಡುತ್ತದೆ. ಹೊಸ ಅಪ್ಲಿಕೇಶನ್ ಫೇಸ್ ಐಡಿ ದೃಢೀಕರಣ ಮತ್ತು ಕೃತಕ ಬುದ್ಧಿಮತ್ತೆ (AI) ಅನ್ನು ಬಳಸಿ ಮೊಬೈಲ್ ಅಪ್ಲಿಕೇಶನ್ ಮೂಲಕ ಭಾರತೀಯ ನಾಗರಿಕರಿಗೆ ಡಿಜಿಟಲ್ ಆಧಾರ್ ಸೇವೆಯನ್ನು ತರಲು ಸರ್ಕಾರ ಮುಂದಾಗಿದೆ.

ಏನಿದು ಆಧಾರ್ ಅಪ್ಲಿಕೇಶನ್?

ಕೇಂದ್ರ ಸರ್ಕಾರ ಡಿಜಿಟಲ್ ಪರಿಶೀಲನೆಗಾಗಿ ಹೊಸ ಆಧಾರ್ ಅಪ್ಲಿಕೇಶನ್ (Aadhaar App) ಅನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಗೌಪ್ಯತೆಯನ್ನು ಹೆಚ್ಚಿಸುವ ಮೂಲಕ ಆಧಾರ್ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಹಂಚಿಕೊಳ್ಳುವ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಬಳಕೆದಾರರ ನಿಯಂತ್ರಣ ಮತ್ತು ಅನುಕೂಲಕ್ಕೆ ಪ್ರಾಮುಖ್ಯತೆ ನೀಡುವ ಅದರ ವೈಶಿಷ್ಟ್ಯಗಳನ್ನು ಜನರಿಗೆ ತೋರಿಸುವ ನಿಟ್ಟಿನಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಎಕ್ಸ್​ನಲ್ಲಿ ವೀಡಿಯೊ ಮೂಲಕ ಅಪ್ಲಿಕೇಶನ್ ಅನ್ನು ಅನಾವರಣಗೊಳಿಸಿದ್ದಾರೆ. ಪ್ರಸ್ತುತ ಈ ಅಪ್ಲಿಕೇಶನ್, ಫೇಸ್ ಐಡಿ ದೃಢೀಕರಣವನ್ನು ಒಳಗೊಂಡಿದೆ. ಈ ಆ್ಯಪ್​ನಿಂದಾಗಿ ಭೌತಿಕ ಕಾರ್ಡ್‌ಗಳು ಮತ್ತು ಜೆರಾಕ್ಸ್ ಕಾಪಿಗಳ ಅಗತ್ಯ ಇರುವುದಿಲ್ಲ.

ಈ ಹೊಸ ಅಪ್ಲಿಕೇಶನ್ ಆಧಾರ್ ಪರಿಶೀಲನೆಯನ್ನು UPI ಪಾವತಿಗಳಂತೆ ಕಾರ್ಯನಿರ್ವಹಿಸಲಿದೆ. ಬಳಕೆದಾರರಿಗೆ ಡಿಜಿಟಲ್ ದೃಢೀಕರಣಕ್ಕಾಗಿ ತಡೆರಹಿತ ಅನುಭವವನ್ನು ನೀಡುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ಹೊಸ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ಕ್ಯೂಆರ್​ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅಪ್ಲಿಕೇಶನ್ ಅನ್ನು ಬಳಕೆ ಮಾಡಿ ಅಗತ್ಯ ಡೇಟಾವನ್ನು ಮಾತ್ರ ಸುರಕ್ಷಿತವಾಗಿ ಹಂಚಿಕೊಳ್ಳಬಹುದು. ಈ ತಂತ್ರಜ್ಞಾನ ಗೌಪ್ಯತೆಯನ್ನು ಖಚಿತಪಡಿಸುತ್ತದೆ ಎಂದು ಸರ್ಕಾರ ತಿಳಿಸಿದೆ.

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net