ಈ 2 ಗುಣಗಳಿರುವ ವ್ಯಕ್ತಿಗಳು S*x ಮತ್ತು ಅಶ್ಲೀಲ ವಿಡಿಯೋಗಳಿಗೆ ಹೆಚ್ಚು ಅಡಿಕ್ಟ್​ ಆಗಿರುತ್ತಾರಂತೆ! New Study

New Study
Published on

ಮಾನವರಲ್ಲಿನ ಕೆಲವು ವ್ಯಕ್ತಿತ್ವ ಗುಣಲಕ್ಷಣಗಳು ಲೈಂಗಿಕ ಆಸಕ್ತಿಗೆ ಸಂಬಂಧಿಸಿರಬಹುದು ಎಂದು ಹೊಸ ಅಧ್ಯಯನವೊಂದು ( New Study ) ಸೂಚಿಸಿದೆ. ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯನವು ಸ್ವಪ್ರಶಂಸೆ ( Narcissism ) ಮತ್ತು ಕ್ರೌರ್ಯ ಅಥವಾ ಕಾಮವಿಕಾರ ( Sadism ) ದಂತಹ ಮಾನಸಿಕ ಸ್ಥಿತಿಗಳನ್ನು ಹೊಂದಿರುವ ಜನರು ಲೈಂಗಿಕ ಆಸಕ್ತಿ ಮತ್ತು ಅಶ್ಲೀಲತೆಯ ಬಳಕೆಯನ್ನು ಹೆಚ್ಚಿಸಿದ್ದಾರೆ ಎಂದು ಕಂಡುಹಿಡಿದಿದೆ.

ಅಂದಹಾಗೆ ನಾರ್ಸಿಸಿಸ್ಟ್‌ಗಳು ಯಾವಾಗಲೂ ತಮ್ಮದೇ ಆದ ಚಿತ್ರದ ಬಗ್ಗೆ ಗೀಳನ್ನು ಹೊಂದಿರುತ್ತಾರೆ. ಅವರು ಯಾವಾಗಲೂ ಇತರರ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಇವರು ಸ್ವಪ್ರಶಂಸೆ ಮಾಡಿಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ. ಇನ್ನು ಸ್ಯಾಡಿಸ್ಟ್‌ಗಳು ಇತರರನ್ನು ನೋಯಿಸುವುದರಲ್ಲಿ ಆನಂದ ಪಡುವವರಾಗಿರುತ್ತಾರೆ ಮತ್ತು ಕ್ರೌರ್ಯ ಹಾಗೂ ಕಾಮವಿಕಾರವನ್ನು ಹೊಂದಿರುತ್ತಾರೆ.

ಹೊಸ ಅಧ್ಯಯನದ ಪ್ರಕಾರ, ಈ ಮೇಲಿನ ಎರಡು ರೀತಿಯ ಮಾನಸಿಕ ಸ್ಥಿತಿಗಳನ್ನು ಹೊಂದಿರುವವರು ಹೆಚ್ಚು ಲೈಂಗಿಕ ಆಸಕ್ತಿಯನ್ನು ಹೊಂದಿರುತ್ತಾರೆ ಮತ್ತು ಹೆಚ್ಚಾಗಿ ಅಶ್ಲೀಲತೆಯನ್ನು ವೀಕ್ಷಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ.

ಇನ್ನೂ ಈ ಹಿಂದಿನ ಅಧ್ಯಯನಗಳ ಪ್ರಕಾರ ವ್ಯಕ್ತಿತ್ವದ ಲಕ್ಷಣಗಳು ಮತ್ತು ಲೈಂಗಿಕ ನಡವಳಿಕೆಗಳ ನಡುವೆ ನೇರ ಸಂಬಂಧವಿದೆ ಎಂದು ಸೂಚಿಸಿವೆ. ಮನೋರೋಗವು ಲೈಂಗಿಕ ನಡವಳಿಕೆಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ಭಾವಿಸಲಾಗಿದ್ದರೂ, ನಾರ್ಸಿಸಿಸಮ್ ಮತ್ತು ಸ್ಯಾಡಿಸಮ್​ ಹೆಚ್ಚು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೊಸ ಸಂಶೋಧನೆಯಲ್ಲಿ ಕಂಡುಬಂದಿದೆ.

ಇನ್ನು ಈ ಅಧ್ಯಯನದ ಮೊದಲ ಭಾಗದಲ್ಲಿ 701 ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಎರಡು ವಿಭಿನ್ನ ಗುಂಪುಗಳಲ್ಲಿ ಅಧ್ಯಯನ ಮಾಡಲಾಯಿತು. ಅಧ್ಯಯನದ ಎರಡನೇ ಭಾಗದಲ್ಲಿ 400 ಜನರು ಭಾಗವಹಿಸಿದ್ದರು. ಐದು ತಿಂಗಳ ನಂತರ 196 ಮಂದಿಯನ್ನು ಮರುಪರೀಕ್ಷೆಗೆ ಒಳಪಡಿಸಲಾಯಿತು. ಈ ಮೇಲಿನ ಮನೋಭಾವ ಅಥವಾ ಗುಣಗಳು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ವ್ಯಕ್ತವಾಗುತ್ತದೆ ಎಂದು ಅಧ್ಯಯನವು ಕಂಡುಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net