

ಮುಂಬೈ: ಪ್ರಯಾಣಿಕರ ಅಭಿರುಚಿಗೆ ತಕ್ಕಂತೆ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸ್ಕೋಡಾ (Skoda) ಕಂಪನಿಯೂ ತನ್ನ ವಿನೂತನ ಹಾಗೂ 25ಕ್ಕೂ ಹೆಚ್ಚು ಸುರಕ್ಷಿತ ಸೌಲಭ್ಯಗಳಿರುವ ಕಾರ್ನ್ನು ಮಾರುಕಟ್ಟೆಗೆ ಅನಾವರಣಗೊಳಿಸುತ್ತಿರುವುದಕ್ಕೆ ಹರ್ಷವಾಗುತ್ತಿದೆ ಎಂದು ಗ್ಲೋಬಲ್ ಸ್ಕೋಡಾ ಅಟೋ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಲೌಸ್ ಝೆಲ್ಮರ್ ಸಂತಸ ವ್ಯಕ್ತಪಡಿಸಿದರು.
ನಗರದ ಜಿಯೋ ವರ್ಲ್ಡ್ ಕನ್ವೆಂಷನ್ ಸೆಂಟರ್ದಲ್ಲಿ ನಡೆದ ಅದ್ದೂರಿಯ ಸಮಾರಂಭದಲ್ಲಿ ವಿನೂತನ ಸ್ಕೋಡಾ (Skoda) ಕೈಲಾಕ್(Kylaq Petrol) ಕಾರನ್ನು ಅನಾವರಣಗೊಳಿಸಿ ಮಾತನಾಡಿದರು. ನಮ್ಮ ಗ್ರಾಹಕರ ಪ್ರಚಂಡ ಉತ್ಸಾಹ ಮತ್ತು ಬೇಡಿಕೆಗೆ ತಕ್ಕಂತೆ ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ ಎಂದರು.
ಸ್ಕೋಡಾ ಕೈಲಾಕ್ಗಾಗಿ (Skoda Kylaq) ಅಧಿಕೃತ ಬುಕಿಂಗ್ಗಳು ಡಿಸೆಂಬರ್ 2 ರಂದು ಪ್ರಾರಂಭವಾಗಲಿದ್ದು, ಜನವರಿ ಅಂತ್ಯದ ವೇಳೆಗೆ ವಾಹನಗಳು ಗ್ರಾಹಕರಿಗೆ ತಲುಪಲಿವೆ. ಸ್ವಂಚಾಲಿತ ಹಾಗೂ ಮ್ಯಾನ್ಯುವೆಲ್ ಸೇರಿದಂತೆ ೪ ಮಾದರಿಗಳಲ್ಲಿ(ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್+ಮತ್ತು ಪ್ರೇಸ್ಟಿಜ್) ಲಭ್ಯವಿರುತ್ತವೆ. ಸ್ಕೋಡಾ ಆಟೋ ಇಂಡಿಯಾ ಕೈಲಾಕ್ ಕಾಂಪ್ಯಾಕ್ಟ್ SUVಯ ಆರಂಭಿಕ ಬೆಲೆ ಸ್ಪರ್ಧಾತ್ಮಕವಾಗಿದ್ದು, ಮೂಲ ಮಾದರಿಗೆ(ಬೇಸಿಕ್ ಮಾಡೆಲ್ಗೆ) 7.89 ಲಕ್ಷ ರೂ(ಎಕ್ಸ್ ಶೋರೂಂ), ನಿಗದಿಪಡಿಸಲಾಗಿದೆ ಎಂದರು. ಜನವರಿ 27, 2025 ರಂದು 2025 ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋದಲ್ಲಿ ಸಾರ್ವಜನಿಕ ಚೊಚ್ಚಲ ಪ್ರವೇಶವಾಗಲಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಆಲಿವ್ ಗೋಲ್ಡ್, ಟ್ರೋನಾಡೋ ರೆಡ್, ಕಾರ್ಬನ್ಸ್ಟೀಲ್, ಕ್ಯಾಂಡಿ ವೈಟ್ ಹಾಗೂ ಬ್ರೀಲಿಯಂಟ್ ಸಿಲ್ವರ್ ಸೇರಿದಂತೆ ಒಟ್ಟು ಐದು ಬಣ್ಣಗಳಲ್ಲಿ ಈ ಕೈಲಾಕ್ ಕಾರು ಲಭ್ಯವಿದೆ.
25ಕ್ಕೂ ಅಧಿಕ ಸುರಕ್ಷಿತ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ಪ್ರಮುಖವಾಗಿ ಆರು ಏರ್ ಬ್ಯಾಗ್ಗಳಿವೆ. 12 ವೋಲ್ಡ್ ಚಾರ್ಜಿಂಗ್, 17 ಇಂಚಿನ್ ಆಲೈ ವ್ಹೀಲ್ಗಳನ್ನು ಹೊಂದಿರುವುದರಿಂದ ಆರಾಮದಾಯಕ ಪ್ರಯಾಣಕಕ್ಕೆ ಅನುಕೂಲವಾಗಲಿದೆ. ಹಿಂಭಾಗದಲ್ಲಿ ಲಗೇಜ್ಗಾಗಿ 446 ಲೀಟರ್ ವಿಶಾಲವಾದ ಸ್ಥಳಾವಕಾಶವಿದೆ ಎಂದರು. ನಮ್ಮ ಅಂತರಾಷ್ಟ್ರೀಯ ಯೋಜನೆಗಳಿಗೆ ಭಾರತವು ಪ್ರಮುಖವಾಗಿದ್ದು, ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಾರು ಮಾರುಕಟ್ಟೆಯಾಗಿದೆ. ಇದರಲ್ಲಿ SUV ಗಳು ಹೊಸ ವಾಹನಗಳ ಮಾರಾಟದಲ್ಲಿ 50% ಅನ್ನು ಪಾಲನ್ನು ಹೊಂದಿವೆ. ಈ ಜನಪ್ರಿಯ ಮತ್ತು ವೇಗವಾಗಿ ಬೆಳೆಯುತ್ತಿರುವ ವಿಭಾಗದಲ್ಲಿ ಹುಡುಕುತ್ತಿರುವ ಹೊಸ ಗ್ರಾಹಕರನ್ನು ಸೆಳೆಯಲು ಸ್ಕೋಡಾ Kylaq ಮೂಲಕ ಸ್ವಾಗತಿಸಲು ಬಯಸುತ್ತೇವೆ ಎಂದರು.
ಭಾರತದ ಸ್ಕೋಡಾ ಅಟೋ ವ್ಯವಸ್ಥಾಪಕ ನಿರ್ದೇಶಕ ಪಿಯುಷ್ ಅರೋರಾ ಮಾತನಾಡಿ, ಕೈಲಾಕ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ 10.5 ಸೆಕೆಂಡುಗಳಲ್ಲಿ 100kph ವೇಗವನ್ನು ಪಡೆಯಲಿದೆ. ಗಂಟೆಗೆ 188(kph)ವೇಗವನ್ನು ಹೊಂದಿದೆ. ಇದರ 1.0 TSI ಎಂಜಿನ್ 85kW ಪವರ್ ಮತ್ತು 178Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆರು ಗೇರ್ಗಳಿರುವ ಈ ಕಾರ್ ಸ್ವಯಂಚಾಲಿತ ಮತ್ತು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಗೇರ್ಗಳಲ್ಲಿ ಲಭ್ಯವಿದೆ ಜನವರಿ 2025ರ ಮಾಸಾಂತ್ಯದಲ್ಲಿ ಗ್ರಾಹಕರಿಗೆ ಡಿಲಿವರಿ ಮಾಡಲಾಗುವುದು ಎಂದರು. ಸ್ಕೋಡಾ ಕೈಲಾಕ್ ಪೆಟ್ರೋಲ್ ಆಧಾರಿತ 999 ಸಿಸಿ ಎಂಜಿನ್ವಿರುವ ಈ ಕಾರ್ನ ಮೈಲೇಜ್ ಕುರಿತು ಇನ್ನೂ ಯಾವುದೇ ಮಾಹಿತಿಯನ್ನೂ ನೀಡದೆ ಕಂಪನಿಯೂ ಗೌಪ್ಯವಾಗಿಟ್ಟಿದೆ.