ಚೆನ್ನೈ: 2023ರಲ್ಲಿ ಸನಾತನ ಧರ್ಮದ ಕುರಿತು ಹೇಳಿಕೆ ಕೊಡುವ ರಾಷ್ಟ್ರವ್ಯಾಪಿ ವಿವಾದದ ಕಿಡಿ ಹೊತ್ತಿಸಿದ್ದ ತಮಿಳುನಾಡು ಸಿಎಂ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಸದಾ ತಮ್ಮ ಹೇಳಿಕೆಗಳ ಮೂಲಕವೇ ಸುದ್ದಿಯಾಗುತ್ತಿರುತ್ತಾರೆ. ಇದೀಗ ಪ್ರಾದೇಶಿಕ (Regional) ಹಾಗೂ ಹಿಂದಿ ಸಿನಿಮಾಗಳ (Hindi Cinemas) ಬಗ್ಗೆ ಮಾತನಾಡುವ ಮೂಲಕ ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಕೇರಳದ ಕೋಯಿಕ್ಕೋಡ್‌ನಲ್ಲಿ ನವೆಂಬರ್ 02ರಂದು ನಡೆದ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಉದಯನಿಧಿ (Udhayanidhi Stalin), ಮುಂಬೈನಲ್ಲಿ ಹಿಂದಿ ಚಿತ್ರಗಳಿಗೆ ಸಿಗುವಷ್ಟು ಹೆಚ್ಚು ಬೆಲೆ ಮರಾಠಿ, ಭೋಜ್‌ಪುರಿ, ಬಿಹಾರಿ, ಹರ್ಯಾನ್ವಿ ಮತ್ತು ಗುಜರಾತಿ ಸಿನಿಮಾಗಳಿಗೆ ಸಿಗುವುದಿಲ್ಲ. ಉತ್ತರ ಭಾರತದ ಅನೇಕ ರಾಜ್ಯಗಳು ತಮ್ಮದೇ ಆದ ಚಲನಚಿತ್ರೋದ್ಯಮವನ್ನು ಹೊಂದಿಲ್ಲ.
ಬಾಲಿವುಡ್ ಹೊರತುಪಡಿಸಿ ಉತ್ತರ ಭಾರತದ ಯಾವ ರಾಜ್ಯವೂ ದಕ್ಷಿಣ ಭಾರತದ ಚಿತ್ರರಂಗದಂತೆ (South Cinema Industry) ಮುನ್ನೆಲೆಗೆ ಬರುತ್ತಿಲ್ಲ. ತಮಿಳು ಸಿನಿಮಾ ರಂಗವು ಸಾವಿರಾರು ಕೋಟಿ ರೂ ಆದಾಯ ಸೃಷ್ಟಿಸುತ್ತಿದೆ. ಕೇರಳ, ತೆಲುಗು ಮತ್ತು ಕನ್ನಡ ಸಿನಿಮಾಗಳು ಸಹ ಬೆಳೆಯುತ್ತಿವೆ. ಆದರೆ ಉತ್ತರ ಭಾರತದಲ್ಲಿ (North India) ಯಾವುದೇ ಭಾಷೆಯು ನಮ್ಮ ರೀತಿಯ ಉದ್ಯಮವನ್ನು ಹೊಂದಿಲ್ಲ. ಈ ಪ್ರಶ್ನಿಸಿದರೂ ಅದಕ್ಕೆ ಉತ್ತರ ಸಿಗುವುದಿಲ್ಲ. ಉತ್ತರ ಭಾರತದ ರಾಜ್ಯಗಳಲ್ಲಿ ಸಣ್ಣಪುಟ್ಟ ಸಿನಿಮಾ ಉದ್ಯಮಗಳನ್ನು ಬಾಲಿವುಡ್ ಮೂಲೆಗುಂಪು ಮಾಡಿದೆ ಎಂದುಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಹೇಳಿದ್ದಾರೆ.
ಇತ್ತ ಉದಯನಿಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷ ನಾರಾಯಣನ್ ತಿರುಪತಿ (Narayanan Thirupathy), ಉದಯನಿಧಿ ಸ್ಟಾಲಿನ್ ಒಬ್ಬ ವಿಫಲ ನಟ (Failed Hero). ಅವರು ತಮ್ಮ ಅಪ್ರಬುದ್ಧತೆ ಮತ್ತು ಜ್ಞಾನದ ಕೊರತೆಯಿಂದಾಗಿ ಈ ರೀತಿ ಮಾತನಾಡುತ್ತಾರೆ. ತಮ್ಮ ಹೇಳಿಕೆಗಳಿಂದಲೇ ದೇಶವನ್ನು ವಿಭಜಿಸಲು ಮುಂದಾಗುತ್ತಿದ್ದಾರೆ. ಉದಯನಿಧಿ (Udhayanidhi Stalin) ಅವರು ತಮ್ಮ ನಿರ್ಮಾಣ ಸಂಸ್ಥೆಯಿಂದ ತಮಿಳು ಚಿತ್ರಗಳ ಹಿಂದಿ ಅವತರಣಿಕೆಗಳನ್ನು ತೆಗೆದುಕೊಂಡು ಭಾರಿ ಹಣ ಮಾಡುತ್ತಿದ್ದಾರೆ. ಹಣ ಸಂಪಾದಿಸಲು, ಅವರಿಗೆ ಹಿಂದಿ ಬೇಕು ಮತ್ತು ಅಧಿಕಾರದಲ್ಲಿರಲು, ಜನರು ಹಿಂದಿ ಕಲಿಯುವುದು ಅವರಿಗೆ ಇಷ್ಟವಿಲ್ಲ ಎಂದು ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷ ನಾರಾಯಣನ್ ತಿರುಪತಿ (Narayanan Thirupathy) ಕಿಡಿಕಾರಿದ್ದಾರೆ.
NZ ಸರಣಿ ಸೋಲಿನ ಹಿನ್ನಡೆಯ ನಡುವೆಯೇ Gautam Gambhir ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಶಾರುಖ್ ಖಾನ್
ನಟ Darshan ವಿರುದ್ಧ ದೂರು ದಾಖಲಿಸಿದ Bigg Boss ಸ್ಫರ್ಧಿ ಜಗದೀಶ್; ಹೀಗಿದೆ ಕಾರಣ