More

    ಸ್ಟಾರ್ ಸುವರ್ಣದಲ್ಲಿ ಬರ್ತಿದೆ ರಾಜಿಯ ಕಥೆ; ಇವಳು ಶಾನುಭೋಗ ಮನೆತನದ ಪ್ರೀತಿಯ ಆಸ್ತಿ..

    ಬೆಂಗಳೂರು: ಒಂದಕ್ಕಿಂತ ಒಂದು ವೈವಿಧ್ಯಮಯ ರಿಯಾಲಿಟಿ ಕಾರ್ಯಕ್ರಮಗಳು ಮತ್ತು ಧಾರಾವಾಹಿಗಳಿಗೆ ಜನಪ್ರಿಯವಾದ ಸ್ಟಾರ್ ಸುವರ್ಣ, ಸೋಮವಾರದಿಂದ (ಏಪ್ರಿಲ್ 18) ಒಂದು ಹೊಸ ಮತ್ತು ವಿಭಿನ್ನ ಧಾರಾವಾಹಿಯನ್ನು ಪ್ರಾರಂಭಿಸಿದೆ. ಅದೇ ‘ರಾಜಿ’. ಕರ್ಣ ಮತ್ತು ರಾಜೇಶ್ವರಿಯ ಪ್ರೀತಿ ಮತ್ತು ಸ್ನೇಹದ ಕುರಿತಾದ ಈ ಧಾರಾವಾಹಿಯ ವಿಭಿನ್ನ ಕಥೆ ಮತ್ತು ಖ್ಯಾತ ಕಲಾವಿದರಿಂದಾಗಿ ಕನ್ನಡ ಕಿರುತೆರೆ ವೀಕ್ಷಕರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಮೊದಲ ಕಂತಿನಲ್ಲೇ ಜನಪ್ರಿಯವಾಗಿದೆ.

    ತಂದೆ-ತಾಯಿ ಇಲ್ಲದ ಮುಗ್ಧ ಹುಡುಗಿ ರಾಜಿಯನ್ನು ಭಾಸ್ಕರ್ ಶಾನುಭೋಗ ತಮ್ಮ ಮನೆಯಲ್ಲೇ ಬೆಳೆಸಿರುತ್ತಾರೆ. ಭಾಸ್ಕರ್ ಶಾನುಭೋಗರು ರಾಜಿಯನ್ನು ತಮ್ಮ ಮನೆಮಗಳಂತೆ ಕಾಣುತ್ತಿರುತ್ತಾರೆ. ಅವರ ಪತ್ನಿ ಸರಸ್ವತಿ ಮತ್ತು ಕಿರಿಮಗ ಕರ್ಣನನ್ನು ಹೊರತುಪಡಿಸಿ ಕುಟುಂಬದ ಮಿಕ್ಕ ಸದಸ್ಯರಿಗೆ ಆಕೆ ಮನೆಕೆಲಸದಾಕೆ ಮಾತ್ರ. ಕರ್ಣ ಮತ್ತು ರಾಜಿ ಬಾಲ್ಯದ ಗೆಳೆಯರು. ರಾಜಿಯನ್ನು ಕರ್ಣ ಸ್ನೇಹಿತನಂತೆ ಕಂಡರೂ, ಆಕೆಗೆ ಮಾತ್ರ ಅವನ ಬಗ್ಗೆ ಸ್ನೇಹಕ್ಕೂ ಮಿಗಿಲಾದ ಭಾವವಿರುತ್ತದೆ. ಇವರಿಬ್ಬರ ಸ್ನೇಹ, ಪ್ರೀತಿಯಾಗಿ ಬದಲಾಗುತ್ತಾ ಎನ್ನುವುದೇ ‘ರಾಜಿ’ ಧಾರಾವಾಹಿಯ ಕಥಾಹಂದರ. ರಾಜಿಯ ಪಾತ್ರದಲ್ಲಿ ಸೌಂದರ್ಯ ಕಾಣಿಸಿಕೊಳ್ಳುತ್ತಿದ್ದರೆ, ಕರ್ಣನಾಗಿ ಕಾರ್ತಿಕ್ ನಟಿಸುತ್ತಿದ್ದಾರೆ. ಇದಲ್ಲದೆ ಮುಖ್ಯಮಂತ್ರಿ ಚಂದ್ರು, ವೈಜಯಂತಿ ಕಾಶಿ, ನೀನಾಸಂ ಅಶ್ವತ್ಥ್, ನದಾಫ್, ರಜನಿ, ಛಾಯಾ ಮುಂತಾದವರು ಅಭಿನಯಿಸುತ್ತಿದ್ದಾರೆ. ಶಾನುಭೋಗರ ಕುಟುಂಬದ ಪ್ರೀತಿಯ ಆಸ್ತಿ ‘ರಾಜಿ’ಯು ಪ್ರತಿ ರಾತ್ರಿ 7.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

    ಕರ್ನಾಟಕದಲ್ಲಿ ಯುಪಿ ಮಾಡೆಲ್​; ರಾಜ್ಯದ 50 ವಿಧಾನಸಭಾ ಕ್ಷೇತ್ರಗಳಲ್ಲಿ ಸಂತರ ಸ್ಪರ್ಧೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts