More

    ಕರ್ನಾಟಕದಲ್ಲಿ ಯುಪಿ ಮಾಡೆಲ್​; ರಾಜ್ಯದ 50 ವಿಧಾನಸಭಾ ಕ್ಷೇತ್ರಗಳಲ್ಲಿ ಸಂತರ ಸ್ಪರ್ಧೆ..

    ಉತ್ತರಕನ್ನಡ: ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಉತ್ತರಪ್ರದೇಶ ಮಾದರಿಯಲ್ಲೂ ಸ್ಪರ್ಧೆ ಇರಲಿದ್ದು, ರಾಜ್ಯದ ಐವತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಸಂತರು ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಅದರಲ್ಲೂ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರದಲ್ಲೇ ಮೊದಲ ಪ್ರಯೋಗ ನಡೆಯಲಿದೆ.

    ಭಟ್ಕಳದಲ್ಲಿ ಹೇಳಿಕೆ ನೀಡಿದ ಉಜಿರೆ ಶ್ರೀರಾಮ ಕ್ಷೇತ್ರದ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಇಂದು ಭಟ್ಕಳದಲ್ಲಿ ಮಾತನಾಡುತ್ತ ಇಂಥದ್ದೊಂದು ವಿಷಯವನ್ನು ಬಹಿರಂಗಪಡಿಸಿದರು. ಕರ್ನಾಟಕದ ಐವತ್ತು ಕ್ಷೇತ್ರದಿಂದ ಸಂತರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಭಟ್ಕಳದಿಂದಲೇ ಮೊದಲ ಪ್ರಯೋಗ ಮಾಡಲಾಗುವುದು. ನನಗೆ ರಾಜಕೀಯ ಆಸೆ ಇಲ್ಲ. ಆದರೂ ನಾನೇ ಭಟ್ಕಳ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನಾನು ಸ್ಪರ್ಧೆಗೆ ಇಳಿದರೆ ಉಳಿದವರೆಲ್ಲ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ ಎಂದು ಅವರು ಹೇಳಿದರು.

    ರಾಮರಾಜ್ಯದ ಪರಿಕಲ್ಪನೆಯಲ್ಲಿ ಹೊಸ ಸಂಸ್ಥೆಯೊಂದನ್ನು ಹುಟ್ಟು ಹಾಕುತ್ತೇವೆ. ಚುನಾವಣಾ ಪ್ರಚಾರಕ್ಕೆ ನೀವ್ಯಾರೂ ಬೇಡ, ನನ್ನ 5 ಲಕ್ಷ ನಾಗಾಸಾಧುಗಳು ಬರಲಿದ್ದಾರೆ. ನಾವು ಸನ್ಯಾಸಿಗಳೆಲ್ಲ ತಯಾರಾಗಿದ್ದೇವೆ,‌ ನಮಗೆ ಯೋಗಿ ಆದಿತ್ಯನಾಥರ ಪ್ರೇರಣೆ ಇದೆ ಎಂದು ಇಂದು ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಸಾರದಹೊಳೆ ಹಳೆಕೋಟೆ ಹನುಮಂತ ದೇವರ ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು.

    ಈ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಭಟ್ಕಳ ಶಾಸಕ‌ ಸುನೀಲ್ ನಾಯ್ಕ, ಮಾಜಿ ಶಾಸಕರಾದ ಜೆ.ಡಿ. ನಾಯ್ಕ, ಆರ್.ಎನ್. ನಾಯ್ಕ ಅವರು ಉಪಸ್ಥಿತರಿದ್ದು, ಅವರೆಲ್ಲರ ಎದುರಲ್ಲೇ ಸ್ವಾಮೀಜಿ ಈ ಹೇಳಿಕೆ ನೀಡಿದ್ದಾರೆ.

    ಹುಬ್ಬಳ್ಳಿ ಗಲಭೆಗೆ ಪ್ರಚೋದನೆ ಕೊಟ್ಟಿದ್ಯಾರು? ಇಲ್ಲಿದೆ ಸುಳಿವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts