More

    ಹುಬ್ಬಳ್ಳಿ ಗಲಭೆಗೆ ಪ್ರಚೋದನೆ ಕೊಟ್ಟಿದ್ಯಾರು? ಇಲ್ಲಿದೆ ಸುಳಿವು..

    ಹುಬ್ಬಳ್ಳಿ: ವಾಟ್ಸ್​ಆ್ಯಪ್​ ಸ್ಟೇಟಸ್​ವೊಂದನ್ನೇ ಮೂಲಕಾರಣವಾಗಿ ಇಟ್ಟುಕೊಂಡು ಮೊನ್ನೆ ರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಪ್ರಚೋದನೆ ಕೊಟ್ಟಿದ್ಯಾರು ಎಂಬ ಪ್ರಶ್ನೆ ಕುರಿತು ಬಹಳಷ್ಟು ಚರ್ಚೆ ಆಗುತ್ತಿದ್ದು, ಆ ಸಂಬಂಧ ವಿಡಿಯೋ ಒಂದು ವೈರಲ್ ಆಗಿದೆ.

    ಗಲಭೆ ದಿನದ ದೃಶ್ಯಾವಳಿಯನ್ನು ಹೊಂದಿರುವ ವಿಡಿಯೋ ತುಣುಕೊಂದು ಹರಿದಾಡುತ್ತಿದ್ದು, ಧರ್ಮಾಧಾರಿತವಾಗಿ ನಡೆದಿರುವ ಸಂಘರ್ಷಕ್ಕೆ ಧರ್ಮಗುರುವೊಬ್ಬರೇ ಕಾರಣವೇ ಎಂಬ ಕುತೂಹಲ ಕೆರಳಿದೆ.

    ಅಂದು ಪೊಲೀಸ್ ಠಾಣೆ ಮುಂದೆ ಒಂದು ಕೋಮಿನ ಜನರು ಜಮಾಯಿಸಿದ್ದ ಸಂದರ್ಭದಲ್ಲಿ ಹುಬ್ಬಳ್ಳಿಯ ದರ್ಗಾ ಒಂದರ ಮೌಲ್ವಿ ಎನ್ನಲಾಗಿರುವ ವಸೀಂ ಮೊಬಲಿಕ್ ಅಲಿಯಾಸ್ ಪಠಾಣ್ ಎಂಬ ವ್ಯಕ್ತಿಯೊಬ್ಬ ಪೊಲೀಸ್ ಕಮಿಷನರ್ ಅವರ ಕಾರಿನ ಮೇಲೆ ನಿಂತುಕೊಂಡು ಜನರನ್ನು ಪ್ರಚೋದಿಸುತ್ತಿರುವಂಥ ದೃಶ್ಯ ಇರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಅದೇ ಗಲಭೆ ಉಂಟಾಗಲು ಕಾರಣವೇ ಎಂಬ ಪ್ರಶ್ನೆ ಮೂಡಿದೆ. ಪೊಲೀಸರು ಆ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದು, ನಿನ್ನೆಯಿಂದ ಆತ ನಾಪತ್ತೆ ಆಗಿದ್ದಾನೆ.

    ಇನ್ನೊಂದೆಡೆ ಗಲಭೆಗೆ ಸಂಬಂಧಿಸಿದ ಆರೋಪಿಗಳನ್ನು 14 ದಿನಗಳ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಟ್ಟು 89 ಆರೋಪಿಗಳನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಹುಬ್ಬಳ್ಳಿಯ ನಾಲ್ಕನೇ ಎಸಿಜೆ, ಜೆಎಂಎಫ್​ಸಿ ನ್ಯಾಯಾಲಯ ಅವರಿಗೆ ಏಪ್ರಿಲ್ 30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

    ಮತ್ತೆ ಬಿಡುಗಡೆ ಆಗಲಿದೆ ಅಪ್ಪು ಅಭಿನಯದ ಕೊನೇ ಚಿತ್ರ ಜೇಮ್ಸ್​; ಕಾರಣವಿದು…

    ನುಗ್ಗಿಕೇರಿ ಗಲಾಟೆ ಪ್ರಕರಣ; ಆರೋಪಿಗಳಿಗೆ ಕಲ್ಲಂಗಡಿ ಹಣ್ಣಿಂದಲೇ ಸ್ವಾಗತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts