ಡ್ರೀಮ್​11 ಒಳಗೊಂಡ ಐಪಿಎಲ್​ ಹೊಸ ಲಾಂಛನ ಬಿಡುಗಡೆ

ipl dream11 logo
Published on

ನವದೆಹಲಿ: ಆನ್​ಲೈನ್​ ಫ್ಯಾಂಟಸಿ ಸ್ಪೋರ್ಟ್ಸ್​ ಕಂಪನಿ ಡ್ರೀಮ್​11ಗೆ ಶೀರ್ಷಿಕೆ ಪ್ರಾಯೋಜಕತ್ವ ನೀಡಿದ ಬೆನ್ನಲ್ಲೇ ಬಿಸಿಸಿಐ, ಐಪಿಎಲ್​ 13ನೇ ಆವೃತ್ತಿಯ ವೇಳೆ ಬಳಸಲಾಗುವ ಹೊಸ ಲಾಂಛನವನ್ನು ಬಿಡುಗಡೆಗೊಳಿಸಿದೆ.

ಹೊಸ ಲಾಂಛನವನ್ನು ಇನ್​ಸ್ಟಾಗ್ರಾಂನಲ್ಲಿ 'ಡ್ರೀಮ್​11ಐಪಿಎಲ್​' ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಐಪಿಎಲ್​ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಈ ಹಿಂದಿನ ಚೀನಾ ಮೂಲದ ಮೊಬೈಲ್​ ಕಂಪನಿ ವಿವೋ ಇದ್ದ ಜಾಗಕ್ಕೆ ಈಗ ಡ್ರೀಮ್​11 ಲಾಂಛನ ಬಂದಿದೆ. ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್ ತಂಡ ಕೂಡ ಈ ಹೊಸ ಲಾಂಛನವನ್ನು ಷೇರ್​ ಮಾಡಿದೆ.

ಡ್ರೀಮ್​11 ಕಂಪನಿ ಗರಿಷ್ಠ 222 ಕೋಟಿ ರೂ. ಬಿಡ್​ ಮಾಡುವ ಮೂಲಕ 2020ರ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆದುಕೊಂಡಿತ್ತು. ಐಪಿಎಲ್​ ಟೂರ್ನಿ ಸೆಪ್ಟೆಂಬರ್​ 19ರಿಂದ ನವೆಂಬರ್​ 10ರವರೆಗೆ ಯುಎಇಯಲ್ಲಿ ನಡೆಯಲಿದೆ. ಡ್ರೀಮ್​11 ಒಟ್ಟು 3 ಆವೃತ್ತಿಯ ಐಪಿಎಲ್​ ಟೂರ್ನಿಗೆ ಒಪ್ಪಂದ ಮಾಡಿಕೊಳ್ಳಲು ಬಯಸಿತ್ತು. ಆದರೆ 2021-22ರ ಟೂರ್ನಿಗಳಿಗೆ ಬಿಡ್​ ಮಾಡಿದ ಮೊತ್ತ ಕಡಿಮೆ ಆಯಿತು ಎಂದು ಬಿಸಿಸಿಐ ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಅದನ್ನು ತಿರಸ್ಕರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net