More

    ಐಪಿಎಲ್​ ಟ್ರೋಫಿ ಗೆಲ್ಲದಿದ್ದರೂ ವಿರಾಟ್ ಕೊಹ್ಲಿಯ ಆರ್​​ಸಿಬಿ ನಾಯಕತ್ವಕ್ಕೆ ಆಪತ್ತು ಇಲ್ಲ!

    ಬೆಂಗಳೂರು: ಐಪಿಎಲ್​ ಮೊದಲ ಆವೃತ್ತಿಯಿಂದಲೂ ಆರ್​ಸಿಬಿ ತಂಡ ಪ್ರಶಸ್ತಿ ಹೋರಾಟದಲ್ಲಿದೆ. ಆದರೆ ಇದುವರೆಗೆ ಒಮ್ಮೆಯೂ ಪ್ರಶಸ್ತಿ ಜಯಿಸಲು ಸಾಧ್ಯವಾಗಿಲ್ಲ. 3 ಬಾರಿ ಫೈನಲ್​ಗೇರಿದ್ದರೂ, ಆರ್​ಸಿಬಿ ತಂಡ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಈ ನಡುವೆಯೂ ಅಭಿಮಾನಿಗಳಿಂದ ‘ಈ ಸಲ ಕಪ್​ ನಮ್ದೇ’ ಎಂಬ ಘೋಷವಾಕ್ಯ ಮೊಳಗುತ್ತಲೇ ಇದೆ. ಇದರಿಂದ ಈ ಬಾರಿಯಾದರೂ ಅರಬರ ನೆಲದಲ್ಲಿ ಆರ್​ಸಿಬಿ ತಂಡ ಐಪಿಎಲ್​ ಟ್ರೋಫಿ ಗೆಲ್ಲಬಹುದೆಂಬ ನಿರೀಕ್ಷೆ ಮೂಡಿದೆ. ಹಾಗಾದರೆ ಈ ಬಾರಿ ಆರ್​ಸಿಬಿ ತಂಡ ಪ್ರಶಸ್ತಿ ಜಯಿಸದಿದ್ದರೆ ವಿರಾಟ್​ ಕೊಹ್ಲಿ ನಾಯಕತ್ವ ಕಳೆದುಕೊಳ್ಳುವರೇ ಎಂಬ ಪ್ರಶ್ನೆಗೆ ಫ್ರಾಂಚೈಸಿಯಿಂದ ನಕಾರಾತ್ಮಕ ಉತ್ತರ ಬಂದಿದೆ.

    ಪ್ರಶಸ್ತಿ ಗೆಲುವಿನ ಬಗ್ಗೆ ನಾಯಕ ವಿರಾಟ್​ ಕೊಹ್ಲಿ ಅವರ ಮೇಲೆ ಒತ್ತಡ ಹೇರುವುದಿಲ್ಲ ಎಂದು ಆರ್​ಸಿಬಿ ತಂಡದ ಚೇರ್ಮನ್​ ಸಂಜೀವ್​ ಚುರಿವಾಲಾ ತಿಳಿಸಿದ್ದಾರೆ. ‘ವಿರಾಟ್​ ಕೊಹ್ಲಿ ಭಾರತ ತಂಡದ ನಾಯಕರೂ ಆಗಿದ್ದಾರೆ. ಅವರು ಅಪಾರವಾದ ಅಭಿಮಾನಿಗಳು-ಹಿಂಬಾಲಕರನ್ನು ಹೊಂದಿದ್ದಾರೆ. ನಾವೆಲ್ಲರೂ ವಿರಾಟ್​ ಕೊಹ್ಲಿ ಅವರನ್ನು ಪ್ರೀತಿಸುತ್ತೇವೆ. ವಿರಾಟ್​ ಜತೆಗೆ ಕೆಲಸ ಮಾಡುವುದನ್ನು ಆನಂದಿಸುತ್ತೇವೆ’ ಎಂದು ಚುರಿವಾಲಾ ಅವರು ತಿಳಿಸಿದ್ದಾರೆ. ವಿರಾಟ್​ ಕೊಹ್ಲಿ ಕಳೆದ 7 ವರ್ಷಗಳಿಂದ ಆರ್​ಸಿಬಿ ತಂಡದ ನಾಯಕರಾಗಿದ್ದಾರೆ. ನಾಯಕರಾಗಿ ಒಮ್ಮೆಯೂ ಐಸಿಸಿ ಟ್ರೋಫಿ ಗೆಲ್ಲದಿರುವಂತೆ ಐಪಿಎಲ್​ ಟ್ರೋಫಿಯ ಕೊರತೆ ಕೂಡ ಅವರನ್ನು ಕಾಡುತ್ತಿದೆ.

    ‘ಟಿ20 ಕ್ರಿಕೆಟ್​ ಆಟವೇ ಇರುವುದು ಹಾಗೆ. ಕೆಲವೊಮ್ಮೆ ಗೆಲ್ಲುತ್ತೇವೆ. ಮತ್ತೆ ಕೆಲವೊಮ್ಮೆ ಸೋಲುತ್ತೇವೆ. ಆದರೆ ಎಂದೂ ವಿಷಾದಿಸುವುದಿಲ್ಲ. ವಿರಾಟ್​ ಕೊಹ್ಲಿ ಎಂಥ ವ್ಯಕ್ತಿ ಮತ್ತು ಅವರ ದಾಖಲೆಗಳೇನು ಎಂಬುದನ್ನು ಮರೆಯಬಾರದು’ ಎಂದು ಚುರಿವಾಲಾ ತಿಳಿಸಿದ್ದಾರೆ. ವಿರಾಟ್​ ಕೊಹ್ಲಿ ಬದಲಿಗೆ ಬೇರೆಯವರನ್ನು ನಾಯಕರಾಗಿ ನೇಮಿಸುವ ಬಗ್ಗೆ ಎಂದು ಕೂಡ ಆಲೋಚಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: 113 ಎಸೆತಗಳಲ್ಲಿ 316 ರನ್​ ಸಿಡಿಸಿದರೂ ಟೀಕೆ ಎದುರಿಸಿದ ಇಂಗ್ಲೆಂಡ್​ ಕ್ಲಬ್​ ಕ್ರಿಕೆಟಿಗ!

    ಇಂಗ್ಲೆಂಡ್​, ಆಸೀಸ್​ ಕ್ರಿಕೆಟಿಗರಿಗೆ ಕ್ವಾರಂಟೈನ್​ ಇಲ್ಲ
    ಐಪಿಎಲ್​ ಟೂನಿರ್ಯಲ್ಲಿ ಆಡಲು ಇಂಗ್ಲೆಂಡ್​ ಮತ್ತು ಆಸ್ಟ್ರೆಲಿಯಾ ಆಟಗಾರರು 6 ದಿನಗಳ ಕ್ವಾರಂಟೈನ್​ಗೆ ಒಳಪಡುವ ಅಗತ್ಯ ಇಲ್ಲ. ಇಂಗ್ಲೆಂಡ್​ನಲ್ಲಿ ಜೈವಿಕ-ಸುರಕ್ಷಾ ವಾತಾವರಣದಲ್ಲಿಯೇ ಆಡಿ ಅವರು ಬರುವುದರಿಂದ ಅವರಿಗೆ ಯುಎಇಯಲ್ಲಿ ಕ್ವಾರಂಟೈನ್​ ಇರುವುದಿಲ್ಲ ಎಂದು ಆರ್​ಸಿಬಿ ಚೇರ್ಮನ್​ ಸಂಜೀವ್​ ಚುರಿವಾಲಾ ಗುರುವಾರ ತಿಳಿಸಿದ್ದಾರೆ. ಇದರಿಂದ ಇಂಗ್ಲೆಂಡ್​-ಆಸೀಸ್​ ಆಟಗಾರರು ಟೂನಿರ್ಯ ಮೊದಲ ಪಂದ್ಯದಿಂದಲೇ ಎಲ್ಲ ತಂಡಗಳಿಗೆ ಲಭ್ಯರಾಗಲಿದ್ದಾರೆ. ಇಂಗ್ಲೆಂಡ್​-ಆಸೀಸ್​ ಸೀಮಿತ ಓವರ್​ ಸರಣಿ ಸೆಪ್ಟೆಂಬರ್​ 4ರಿಂದ 16ರವರೆಗೆ ನಡೆಯಲಿದೆ. ಬಳಿಕ ಉಭಯ ತಂಡಗಳ ಆಟಗಅರರು ಸೆಪ್ಟೆಂಬರ್​ 17ರಂದು ಬಾಡಿಗೆ ವಿಮಾನದ ಮೂಲಕ ಯುಎಇಗೆ ಆಗಮಿಸಲಿದ್ದಾರೆ. ಆರ್​ಸಿಬಿ ತಂಡ ಆಸೀಸ್​ ನಾಯಕ ಆರನ್​ ಫಿಂಚ್​ ಮತ್ತು ಇಂಗ್ಲೆಂಡ್​ ಆಲ್ರೌಂಡರ್​ ಮೊಯಿನ್​ ಅಲಿ ಅವರನ್ನೊಳಗೊಂಡಿದೆ.

    ಆರ್​ಸಿಬಿ ತಂಡಕ್ಕೆ ದುಬೈ ಹೋಟೆಲ್​ನಲ್ಲಿ 155 ಕೋಣೆಗಳು ಬುಕ್​, ಆರೋಗ್ಯ-ಸುರಕ್ಷತೆಗೆ ಅಗ್ರ ಆದ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts