More

    ಆರ್​ಸಿಬಿ ತಂಡಕ್ಕೆ ದುಬೈ ಹೋಟೆಲ್​ನಲ್ಲಿ 155 ಕೋಣೆಗಳು ಬುಕ್​, ಆರೋಗ್ಯ-ಸುರಕ್ಷತೆಗೆ ಅಗ್ರ ಆದ್ಯತೆ

    ಬೆಂಗಳೂರು: ವಿರಾಟ್​ ಕೊಹ್ಲಿ ನೇತೃತ್ವದ ಆರ್​ಸಿಬಿ ತಂಡ ಶುಕ್ರವಾರ ಬೆಂಗಳೂರಿನಿಂದ ದುಬೈಗೆ ಪ್ರಯಾಣ ಬೆಳೆಸಲಿದೆ. ಬಳಿಕ ಅಲ್ಲಿ ಆಗಸ್ಟ್​ 29ರಿಂದ 3 ವಾರಗಳ ಕಾಲ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದೆ. ತಂಡದ ಕ್ರಿಕೆಟ್​ ನಿರ್ದೇಶಕ ಮೈಕ್​ ಹೆಸ್ಸನ್​ ಮತ್ತು ಮುಖ್ಯ ಕೋಚ್​ ಸೈಮನ್​ ಕಾಟಿಚ್​ ಶಿಬಿರದ ಮೇಲ್ವಿಚಾರಣೆ ವಹಿಸಲಿದ್ದಾರೆ. ದೇವದತ್​ ಪಡಿಕಲ್​ ಮತ್ತು ಪವನ್​ ದೇಶಪಾಂಡೆ ತಂಡದಲ್ಲಿರುವ ಇಬ್ಬರು ಕರ್ನಾಟಕದ ಆಟಗಾರರಾಗಿದ್ದಾರೆ. ಕನ್ನಡಿಗ ಪ್ರವಿಣ್​ ದುಬೆ ಸಹಿತ ಐವರು ನೆಟ್​ ಬೌಲರ್​ಗಳನ್ನೂ ಆರ್​ಸಿಬಿ ತಂಡ ದುಬೈಗೆ ಕರೆದೊಯ್ಯಲಿದೆ.

    ಆರ್​ಸಿಬಿ ತಂಡ ಟೂನಿರ್ಯ ವೇಳೆ ದುಬೈನ ವಲ್​ಡಾರ್ಫ್​ ಹೋಟೆಲ್​ನಲ್ಲಿ ಉಳಿದುಕೊಳ್ಳಲಿದ್ದು, 155 ಕೋಣೆ ಒಳಗೊಂಡ ಹೋಟೆಲ್​ನ ಒಂದು ಬ್ಲಾಕ್​ ಪೂರ್ತಿ ತಂಡಕ್ಕೆ ಬುಕ್​ ಮಾಡಲಾಗಿದೆ. ಇದರಲ್ಲಿ ಜಿಮ್​ ಮತ್ತು ಊಟದ ಕೋಣೆಯ ವ್ಯವಸ್ಥೆಯೂ ಇದೆ. ಈ ಬ್ಲಾಕ್​ಗೆ ಪ್ರತ್ಯೇಕವಾದ ಹವಾನಿಯಂತ್ರಣ ವ್ಯವಸ್ಥೆ ಇರುತ್ತದೆ. ಸುರತೆಯ ದೃಷ್ಟಿಯಿಂದ ಹೋಟೆಲ್​ನ ಎಲ್ಲ ಸಿಬ್ಬಂದಿ ಕೂಡ ಕೋವಿಡ್​-19 ಪರೀಕ್ಷೆಗೆ ಒಳಪಡಲಿದ್ದಾರೆ ಎಂದು ಆರ್​ಸಿಬಿ ಚೇರ್ಮನ್​ ಸಂಜೀವ್​ ಚುರಿವಾಲಾ ತಿಳಿಸಿದ್ದಾರೆ.

    ತಂಡದ ಆಟಗಾರರು ಮತ್ತು ಸಿಬ್ಬಂದಿಯ ಕುಟುಂಬ ಸದಸ್ಯರು ಕೂಡ ಟೂನಿರ್ಯ ವೇಳೆ ಜೈವಿಕ-ಸುರಕ್ಷಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ ತಂಡದ ಹೆಚ್ಚಿನ ಆಟಗಾರರು ಈ ಬಾರಿ ಕುಟುಂಬ ಸದಸ್ಯರನ್ನು ಕರೆದೊಯ್ಯುತ್ತಿಲ್ಲ ಎಂದು ತಿಳಿಸಿದ್ದಾರೆ. ಎಲ್ಲರ ಆರೋಗ್ಯ-ಸುರಕ್ಷೆಯನ್ನು ಕಾಪಾಡುವುದು ತಂಡದ ಪ್ರಮುಖ ಆದ್ಯತೆಯಾಗಿದೆ ಎಂದವರು ತಿಳಿಸಿದ್ದಾರೆ. 21 ಆಟಗಾರರು ಮತ್ತು ವೈದ್ಯರನ್ನೂ ಒಳಗೊಂಡ ಒಟ್ಟು 40 ಸದಸ್ಯರ ತಂಡವನ್ನು ಆರ್​ಸಿಬಿ ಗುರುವಾರ ಪ್ರಕಟಿಸಿದೆ.

    ಇದನ್ನೂ ಓದಿ: ಸಚಿನ್​, ಕೊಹ್ಲಿ ಬ್ಯಾಟ್​ ಸರಿಮಾಡಿಕೊಡುತ್ತಿದ್ದ ವ್ಯಕ್ತಿಯ ಬದುಕು ಬಿಗಡಾಯಿಸಿದ ಕರೊನಾ!

    ದಕ್ಷಿಣ ಆಫ್ರಿಕಾದ ಆಟಗಾರರು ಆಗಸ್ಟ್​ 22ರಂದು ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಚುರಿವಾಲಾ ತಿಳಿಸಿದ್ದಾರೆ. ಆರ್​ಸಿಬಿ ತಂಡ ದಣ ಆಫ್ರಿಕಾದ ಎಬಿ ಡಿವಿಲಿಯರ್ಸ್​, ಕ್ರಿಸ್​ ಮಾರಿಸ್​ ಮತ್ತು ಡೇಲ್​ ಸ್ಟೈನ್​ ಅವರನ್ನೊಳಗೊಂಡಿದೆ.

    ಟ್ರೋಲ್​ಗಳಿಗೆ ದಿಟ್ಟ ಉತ್ತರ ನೀಡಿದ ಸಾನಿಯಾ ತಂಗಿ ಅನಮ್​ ಮಿರ್ಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts