ಕೈರುಚಿ ತೋರಲು ಕಿರುತೆರೆಗೆ ಕಾಲಿಟ್ಟ ಬೆಳ್ಳುಳ್ಳಿ ಕಬಾಬ್​ ಚಂದ್ರು

Saviruchi
Published on

ಬೆಂಗಳೂರು: ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸೌಂಡ್ ಮಾಡುತ್ತಿರುವ ಬೆಳ್ಳುಳ್ಳಿ ಕಬಾಬ್​ ಖ್ಯಾತಿಯ ನಿಮ್ಮನೆ ಚಂದ್ರು ಅವರ ಸರಳ ಅಡುಗೆ ರೆಸಿಪಿಗಳು ಸಖತ್ ವೈರಲ್ ಆಗುತ್ತಿದೆ. ಬೆಂಗಳೂರು ಮಾತ್ರವಲ್ಲದೇ ದೇಶ ವಿದೇಶಗಳಲ್ಲಿ ಚಂದ್ರು ಅವರು ಮಾಡಿರುವ ರೆಸಿಪಿಗಳನ್ನು ಜನ ಟ್ರೈ ಮಾಡುತ್ತಿದ್ದಾರೆ. ಹೋಟೆಲ್​ ಮಾತ್ರವಲ್ಲದೇ ಸಿನಿಮಾಗಳ ಪ್ರಮೋಷನ್​ನಲ್ಲಿ ಬ್ಯುಸಿ ಇರುವ ಚಂದ್ರು ಅವರು ತಮ್ಮ ಸವಿರುಚಿಯನ್ನು ತೋರಲು ಖುದ್ದು ನಿಮ್ಮ ಮುಂದೆ ಬರಲಿದ್ಧಾರೆ.

ಕನ್ನಡದ ಕಿರುತೆರೆಯ ಪ್ರೇಕ್ಷಕರಿಗೆ ಬಗೆಬಗೆಯ ಮನರಂಜನೆ ನೀಡಿರುವ ‘ಕಲರ್ಸ್​ ಕನ್ನಡ’ ವಾಹಿನಿ ಈಗ ಮತ್ತೆ ಸವಿರುಚಿ ಕಾರ್ಯಕ್ರಮವನ್ನು ಆರಂಭಿಸಲು ಸಜ್ಜಾಗಿದೆ. ಯುಗಾದಿ ಹಬ್ಬದ ಪ್ರಯುಕ್ತ ಸಚಿರುಚಿ ಸೀಸನ್​-3ರ ಕಾರ್ಯಕ್ರಮದ ಹೊಸ ಎಪಿಸೋಡ್​ಗಳು ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಬೆಳ್ಳುಳ್ಳಿ ಕಬಾಬ್​ ಖ್ಯಾತಿಯ ಚಂದ್ರು ಕೂಡ ಇರಲಿದ್ದಾರೆ ಎಂಬುದು ಮತ್ತಷ್ಟು ವಿಶೇಷವಾಗಿಸಿದೆ.

ಕಲರ್ಸ್​​ ಕನ್ನಡದಲ್ಲಿ ಈ ಬಗ್ಗೆ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಐಟಮ್‌ ವೆರೈಟಿ ಸ್ಟೈಲು ಪಕ್ಕಾ ನಾಟಿ, ಹೊಸ ಗ್ಯಾಂಗ್‌ ಸವಿರುಚಿ, ಏಪ್ರಿಲ್‌ 9ರಿಂದ ಮಧ್ಯಾಹ್ನ 12 ಎಂದು ಪ್ರೊಮೋ ಬಿಡುಗಡೆ ಮಾಡಲಾಗಿದೆ.  "ಮಟಮಟ ಮಧ್ಯಾಹ್ನ ಚಟಪಟ ಒಗರಣೆ ಪಟಪಟ ಮಾತು ಎಂದು ಬಿಡುಗಡೆ ಮಾಡಲಾಗಿರುವ ಪ್ರೋಮೋದಲ್ಲಿ ಹೇಳಲಾಗಿದೆ.

ಹೊಸ ಸೀಸನ್ ಸವಿರುಚಿಯಲ್ಲಿ ಹಲವು ಹೊಸ ಅಂಶಗಳು ಇರಲಿವೆ. ಕರ್ನಾಟಕದ ಮೂಲೆಮೂಲೆಗಳ ಪಾಕಪ್ರವೀಣರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಮೂಲೆಮೂಲೆಗಳಿಗೆ ತೆರಳಿ ಅಲ್ಲಿನ ಸಾಂಪ್ರದಾಯಿಕ ಅಡುಗೆಯನ್ನು ಪರಿಚಯಿಸುವುದರಿಂದಾಗಿ ಈ ಸೀಸನ್ನು ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದೆ. ನನ್ನಮ್ಮ ಸೂಪರ್​ಸ್ಟಾರ್​ ಖ್ಯಾತಿಯ ಜಾಹ್ನವಿ ಸವಿರುಚಿ ಸೀಸನ್​-3ರ ನಿರೂಪಣೆಯನ್ನು ಮಾಡಲಿದ್ದಾರೆ. ಏಪ್ರಿಲ್​ 09ರಂದು ಕಾರ್ಯಕ್ರಮ ಪ್ರಸಾರವಾಗಲಿದ್ದು, ಈ ಹೊಸ ಆವೃತ್ತಿಯನ್ನು ವೀಕ್ಷಕರು ಸೋಮವಾರದಿಂದ ಶನಿವಾರದ ತನಕ ಪ್ರತಿ ಮಧ್ಯಾಹ್ನ 12 ಗಂಟೆಗೆ ವೀಕ್ಷಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net