ಕಾಫಿ ಡೇಗೆ ಮಾಳವಿಕಾ ಹೊಸ ಸಿಇಒ; ಮಾಜಿ ಸಿಎಂ ಪುತ್ರಿ ಕೈಗೆ ಅಧಿಕಾರ...

Coffe Day
Published on

ಬೆಂಗಳೂರು: ದೇಶ-ವಿದೇಶದಲ್ಲೂ ಜನಜನಿತವಾಗಿರುವ ಕಾಫಿ ಡೇ ಸಂಸ್ಥೆಯ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ ಅಗಲಿಕೆ ಬಳಿಕ, ಇದೀಗ ಆ ಸಂಸ್ಥೆಗೆ ಹೊಸ ಸಿಇಒ ನೇಮಕವಾಗಿದ್ದಾರೆ. ಈ ಮೂಲಕ ಕಾಫಿ ಡೇ ಎಂಟರ್​ಪ್ರೈಸಸ್​ ಚುಕ್ಕಾಣಿಯನ್ನು ಮಹಿಳೆಯೊಬ್ಬರು ಹಿಡಿದಿದ್ದಾರೆ.

ಹೌದು.. 'ಕಾಫಿ ಡೇ ಎಂಟರ್​ಪ್ರೈಸಸ್​ ಲಿಮಿಟೆಡ್​'ನ ನೂತನ ಸಿಇಒ ಆಗಿ ಮಾಳವಿಕಾ ಹೆಗ್ಡೆ ನೇಮಕವಾಗಿದ್ದಾರೆ. ಅಂದಹಾಗೆ ಈ ಮಾಳವಿಕಾ ಬೇರೆ ಯಾರೂ ಅಲ್ಲ.. ಸಿದ್ಧಾರ್ಥ ಹೆಗ್ಡೆ ಅವರ ಪತ್ನಿ, ಅರ್ಥಾತ್ ಮಾಜಿ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ಅವರ ಪುತ್ರಿ. ಕಂಪನಿಯ ನಿರ್ದೇಶಕ ಮಂಡಳಿಯು ಸಿ.ಎಚ್​.ವಸುಂಧರಾ ದೇವಿ, ಗಿರಿ ದೇವನೂರ್, ಮೋಹನ್ ರಾಘವೇಂದ್ರ ಕೊಂಡಿ ಅವರನ್ನು ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಿಸಿದೆ.

ಸಿದ್ಧಾರ್ಥ ಅವರು 2019ರ ಆಗಸ್ಟ್​ನಲ್ಲಿ ಮಂಗಳೂರಿನಲ್ಲಿ ನೇತ್ರಾವತಿ ಸೇತುವೆ ಮೇಲೆ ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದು, ಬಳಿಕ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಸಿದ್ಧಾರ್ಥ ಅಗಲಿಕೆಯ ಸಮಯದಲ್ಲಿ ಕಂಪನಿ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ದೊಡ್ಡ ಮಟ್ಟದ ಸಾಲವೂ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net