18 ಜಿಲ್ಲೆಗಳಲ್ಲಿ ನೂರು ದಾಟಿದ ಹೊಸ ಸೋಂಕಿತರ ಪ್ರಮಾಣ; ರಾಜ್ಯದಲ್ಲಿ ಮುಂದುವರಿದ ಕರೊನಾ ಏರುಗತಿ

Coronadeath
Published on

ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ಕರೊನಾಗೆ ಕಡಿವಾಣವೇ ಇಲ್ಲದಂತಾಗಿದೆ. ದಿನವೂ 5 ಸಾವಿರಕ್ಕಿಂತಲೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇಂದು ಕೂಡ ಅದೇ ಟ್ರೆಂಡ್​ ಮುಂದುವರಿದಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 5,536 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 1,07,001ಕ್ಕೆ ತಲುಪಿದೆ. ಇದರಲ್ಲಿ ಸಕ್ರಿಯ ಪ್ರಕರಣಗಳು 64,434 ಆಗಿದೆ.

ಚೇತರಿಸಿಕೊಂಡವರ ಸಂಖ್ಯೆ ಕೂಡ ಹೆಚ್ಚಾಗಿರುವುದು ಕೊಂಚ ಸಮಾಧಾನದ ವಿಷಯ. ಇಂದು ಒಟ್ಟು 2,819 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಈವರೆಗೆ ಗುಣವಾದವರ ಒಟ್ಟು ಸಂಖ್ಯೆ 40, 404ಕ್ಕೆ ತಲುಪಿದೆ.

ಇನ್ನು, ಕೋವಿಡ್​ನಿಂದ ಸಾವಿಗೀಡಾದವ ಸಂಖ್ಯೆ 2 ಸಾವಿರ ದಾಟಿದ್ದು, ಒಟ್ಟು 2,055 ಜನರು ಮೃತಪಟ್ಟಿದ್ದಾರೆ. ಮತ್ತೊಮ್ಮೆ ಒಂದೇ ದಿನ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿಯೂ 1898 ಹೊಸ ಕರೊನಾ ಪ್ರಕರಣಗಳು ವರದಿಯಾಗಿವೆ. ಒಟ್ಟು ಕೇಸ್​ಗಳು 48,821. ಚೇತರಿಸಿಕೊಂಡವರು 572 ಹಾಗೂ ಮೃತಪಟ್ಟವರ ಸಂಖ್ಯೆ 40 ಆಗಿದ್ದು, ಈವರೆಗಿನ ಒಟ್ಟು ಸಾವು 957 ಕ್ಕೆ ಏರಿದೆ.

ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಇಂದಿನ ಕರೊನಾ ಪೀಡಿತರ ಸಂಖ್ಯೆ ನೂರು ದಾಟಿದೆ.

ಜಿಲ್ಲೆಗಳ ಕೋವಿಡ್​ ಅಂಕಿ-ಅಂಶಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net