

ನವದೆಹಲಿ: ಸ್ಮಾರ್ಟ್ಫೋನ್ ಬಳಕೆದಾರರನ್ನು ಈಗ ಕಾಡುತ್ತಿರುವ ದೊಡ್ಡ ಭಯ ಎಂದರೆ ಹ್ಯಾಕ್ನದ್ದು. ಯಾರಿಗಾದರೂ ತಮ್ಮ ಪಾಸ್ವರ್ಡ್ ಗೊತ್ತಾಗಿ ದುರ್ಬಳಕೆ ಮಾಡಿಕೊಂಡರೆ ಎಂಬ ಆತಂಕ ಒಂದಲ್ಲ ಒಂದು ಸಲ ಕೆಲವರಿಗಾದರೂ ಆಗಿಯೇ ಇರುತ್ತದೆ. ಅಂಥ ಆತಂಕಗಳಿಗೆಲ್ಲ ಪರಿಹಾರ ಎಂಬಂತೆ ಈಗ ಗೂಗಲ್ ಹೊಸ ಫೀಚರ್ ತರಲು ಮುಂದಾಗಿದೆ. ಇದು ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರಿಗೆ ಶೀಘ್ರದಲ್ಲೇ ಲಭಿಸಲಿದೆ.
ಪಾಸ್ವರ್ಡ್ ಚೆಕಪ್ ಟೂಲ್ ಎಂದು ಕರೆಯಲಾಗುವ ಈ ಫೀಚರ್, ಆ್ಯಂಡ್ರಾಯ್ಡ್ 9 ಹಾಗೂ ಅದಕ್ಕೂ ಮೇಲ್ಪಟ್ಟ ವರ್ಷನ್ನ ಬಳಕೆದಾರರಿಗೆ ಆಟೋಮ್ಯಾಟಿಕ್ ಆಗಿ ಲಭಿಸಲಿದೆ. ಇದರಿಂದ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರಿಗೆ ಹ್ಯಾಕ್ನಿಂದ ಹೆಚ್ಚಿನ ಸುರಕ್ಷತೆ ಲಭಿಸಲಿದೆ. ಈ ಸೌಲಭ್ಯದ ಪ್ರಯೋಜನ ಪಡೆಯಲು ಬಳಕೆದಾರರು ಪಾಸ್ವರ್ಡ್ ಬಳಸುವಾಗ ಆಟೋಫಿಲ್ ಆಯ್ಕೆ ಮಾಡಿಕೊಳ್ಳಬೇಕು. ಇದು ಪಾಸ್ವರ್ಡ್ ಬೇರೆ ಯಾರಿಗಾದರೂ ಗೊತ್ತಾಗಿದ್ದರೆ ಅಲರ್ಟ್ ನೀಡುತ್ತದೆ.
ಈ ಹೊಸ ಫೀಚರ್ ಎನೇಬಲ್ ಮಾಡಿಕೊಳ್ಳಲು ಈ ಎಲ್ಲ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. Go to your phone Settings > System > Languages & Input > Advanced, the tap Autofill. Tap Google to ensure the setting is enabled. ಗೂಗಲ್ ಅಕೌಂಟ್ನಲ್ಲಿ ಸೇವ್ ಆಗಿರುವ ಪಾಸ್ವರ್ಡ್ಗಳು ಬೇರೆಯವರಿಗೆ ಎಕ್ಸ್ಪೋಸ್ ಆಗಿದ್ದರೆ, ದುರ್ಬಲವಾಗಿದ್ದರೆ ಅಥವಾ ಇತರ ಖಾತೆಗಳಲ್ಲಿ ಬಳಕೆ ಆಗುತ್ತಿದ್ದರೆ ಎಚ್ಚರಿಕೆ ನೀಡುತ್ತದೆ. ಇನ್ನು ಗೂಗಲ್ ಐಡಿ ಮೂಲಕ ಈ ಮುಂದಿನ https://passwords.google.com/ ಲಿಂಕ್ಗೆ ಲಾಗಿನ್ ಆಗಿ ಕೂಡ ಪಾಸ್ವರ್ಡ್ ಸುರಕ್ಷತೆಯನ್ನು ಪರಿಶೀಲಿಸಬಹುದು. ಲಾಗಿನ್ ಬಳಿಕ ಪಾಸ್ವರ್ಡ್ ಚೆಕಪ್ ಟೂಲ್ ಬಳಸಿದರೆ ಅದು ಪಾಸ್ವರ್ಡ್ ಸುರಕ್ಷತೆಯ ಮಾಹಿತಿ ನೀಡುತ್ತದೆ. ಸುರಕ್ಷಿತವಲ್ಲ ಎಂದಾಗಿದ್ದರೆ ಪಾಸ್ವರ್ಡ್ ಬದಲಿಸುವಂತೆ ಸೂಚನೆಯನ್ನೂ ನೀಡುತ್ತದೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ