More

    ಟಿಎಸ್‌ಎಸ್‌ ಅಧಿಕಾರ ಮತ್ತೆ ಬದಲು-ಹೊಸ ಆಡಳಿತ ಮಂಡಳಿಗೆ ದಿಗಿಲು

    ಶಿರಸಿ: ತಾಲೂಕಿನ ಪ್ರಸಿದ್ಧ ಟಿಎಸ್‌ಎಸ್ ಸಂಸ್ಥೆಯ ಹಾಲಿ ಆಡಳಿತ ಮಂಡಳಿಯ ಚುನಾವಣೆಯನ್ನು ರದ್ದು ಮಾಡಿ ಕಾರವಾರದ ಸಹಕಾರ ಸಂಘಗಳ ಉಪ ನಿಬಂಧಕ ಎಸ್.ಜಿ.ಮಂಜುನಾಥ ಸಿಂಗ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಶಿರಸಿ ಡಿಡಿಪಿಐ ಕಚೇರಿಯ ಬಿಇಒ ಎಂ.ಎಚ್.ನಾಯ್ಕ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಿದ್ದು, ಶುಕ್ರವಾರವೇ ಆಡಳಿತಾಧಿಕಾರಿ ಅಧಿಕಾರ ಸ್ವೀಕರಿಸಿದರು.
    2023 ರ ಆಗಸ್ಟ್ 20 ರಂದು ಚುನಾವಣೆ ನಡೆದು 2023-24 ರಿಂದ 2027-28 ರ ಅವಽಗೆ ಹೊಸ ನಿರ್ದೇಶಕರ ಆಯ್ಕೆಯಾಗಿತ್ತು. ಆದರೆ, ಚುನಾವಣೆ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ, ಸಂಘದ ಸದಸ್ಯರಾದ ಗಣಪತಿ ಶೇಷಗಿರಿ ರಾಯ್ಸದ್ ಮತ್ತು ವಿನಾಯಕ ದತ್ತಾತ್ರೆಯ ಭಟ್ ಅವರು ಸಹಕಾರ ಸಂಘಗಳ ಉಪ ನಿಬಂಧಕರ ನ್ಯಾಯಾಲಯದಲ್ಲಿ ಚುನಾವಣಾ ದಾವಾ ಹೂಡಿದ್ದರು.
    ಸಾಕಷ್ಟು ವಿಚಾರಣೆ ನಡೆಸಿದ ಬಳಿಕ, ಆಡಳಿತ ಮಂಡಳಿ ಚುನಾವಣೆಯಲ್ಲಿ ಗಂಭೀರ ಲೋಪವಾಗಿರುವುದು ಸಾಬೀತಾಗಿರುವುದರಿಂದ ಸಹಕಾರ ಸಂಘಗಳ ಅಽನಿಯಮ 1959 ರಂತೆ ಆಡಳಿತ ಮಂಡಳಿ ಚುನಾವಣೆ ಫಲಿತಾಂಶವನ್ನು ರದ್ದು ಮಾಡಿ ಮೇ 24 ರಂದು ಆದೇಶಿಸಿದ್ದಾರೆ. ಅಲ್ಲದೆ, ಈ ಆದೇಶದಿಂದ ಉಂಟಾಗುವ ಆಡಳಿತ ಮಂಡಳಿಯ ಶೂನ್ಯತೆಯನ್ನು ತುಂಬಲು ಮುಂದಿನ 6 ತಿಂಗಳ ಅವಽಗೆ ಆಡಳಿತಾಽಕಾರಿ ನೇಮಿಸಿದ್ದು, ಅಲ್ಲಿನವರೆಗೆ ಮತ್ತೊಮ್ಮೆ ಚುನಾವಣೆ ನಡೆಸಿ, ಹೊಸ ಆಡಳಿತ ಮಂಡಳಿಯನ್ನು ಆಯ್ಕೆ ಮಾಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

    ಹೊಸ ಆಡಳಿತ ಮಂಡಳಿಗೆ ಶಾಕ್

    ಉಪ ನಿಬಂಧಕರ ಆದೇಶದಿಂದ ಹೊಸ ಆಡಳಿತ ಮಂಡಳಿಗೆ ಶಾಕ್ ಉಂಟಾಗಿದ್ದು, ನಮಗೆ ಆದೇಶ ಬಂದಿಲ್ಲ. ನಮ್ಮ ಅಧಿಕಾರವೇಕೆ ಮೊಟಕಾಯಿತು ಎಂದು ಉಪಾಧ್ಯಕ್ಷ ಎಂ.ಎನ್. ಭಟ್ಟ ಪ್ರಶ್ನಿಸಿದರು. ಆದರೆ, ನ್ಯಾಯಾಲಯದ ಆದೇಶ ತಾವು ಪಾಲಿಸುತ್ತಿರುವುದಾಗಿ ತಿಳಿಸಿದ ಆಡಳಿತಾಽಕಾರಿ ಎಂ.ಎಚ್.ನಾಯ್ಕ ಸಾಕಷ್ಟು ಪೊಲೀಸ್ ಭದ್ರತೆಯಲ್ಲಿ ಅಧಿಕಾರ ಸ್ವೀಕರಿಸಿದರು. ನಂತರ ಸಿಬ್ಬಂದಿ ಸಭೆ ನಡೆಸಿದರು.
    ಆಗಸ್ಟ್ನಲ್ಲಿ ನಡೆದ ಚುನಾವಣೆಯಲ್ಲಿ ಹಿಂದೆ ಹಲ ವರ್ಷಗಳಿಂದ ಅಽಕಾರದಲ್ಲಿದ್ದ ನಿರ್ದೇಶಕರಿಗೆ ಸೋಲುಂಟಾಗಿತ್ತು. ಮುಂಡಗನಮನೆ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ನೇತೃತ್ವದ ತಂಡಕ್ಕೆ ಜಯವಾಗಿತ್ತು. ಅವರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಽಕಾರಕ್ಕೆ ಬಂದ ಹೊಸ ಆಡಳಿತ ಮಂಡಳಿಯು ಹಿಂದಿನ ಆಡಳಿತ ಮಂಡಳಿಯ ನಿರ್ದೇಶಕರು, ಆಡಳಿತ ಸಲಹೆಗಾರರ ವಿರುದ್ಧ ಗುರುತರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿತ್ತು. ಮಾತ್ರವಲ್ಲದೇ ತನಿಖೆ ಆರಂಭಿಸಿ ಸೊಸೈಟಿಗೆ ಕೋಟ್ಯಂತರ ರೂ. ನಷ್ಟ ಮಾಡಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಈ ಹಂತದಲ್ಲಿ ಉಪ ನಿಬಂಧಕರ ಆದೇಶ ಹಾಲಿ ಆಡಳಿತ ಮಂಡಳಿಗೆ ಶಾಕ್ ನೀಡಿದೆ.

    See also  ದಾಖಲೆ ಮೊತ್ತಕ್ಕೆ ಐಪಿಎಲ್​ ಪ್ರಾಯೋಜಕತ್ವ ಉಳಿಸಿಕೊಂಡ ಟಾಟಾ ಗ್ರೂಪ್ಸ್
    https://www.vijayavani.net/protest-demanding-investigation-to-be-intensified

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts