More

    ತನಿಖೆ ತೀವ್ರಗೊಳಿಸಲು ಆಗ್ರಹಿಸಿ ಪ್ರತಿಭಟನೆ

    ಶಿರಸಿ: ಸ್ವರ್ಣ ಉದ್ಯಮಿಯ ಪುತ್ರ ಪ್ರೀತಮ್ ಪ್ರಕಾಶ ಪಾಲನಕರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ತೀವ್ರಗೊಳಿಸಬೇಕು ಎಂದು ಆಗ್ರಹಿಸಿ ದೈವಜ್ಞ ಬ್ರಾಹ್ಮಣ ಸಮಾಜ, ದೈವಜ್ಞ ಬ್ರಾಹ್ಮಣ ಸರಾಫರ ಹಾಗೂ ಆಭರಣ ತಯಾರಕರ ಸಂಘದ ವತಿಯಿಂದ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

    ನಗರದ ಸಿಂಪಿಗಲ್ಲಿಯಿಂದ ಸಿಪಿ ಬಜಾರ್ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಅಪರ್ಣಾ ಅವರಿಗೆ ಮನವಿ ಸಲಾಯಿತು.
    ದೈವಜ್ಞ ಸಮಾಜದ ಸದಸ್ಯ ಪ್ರೀತಮ ಪ್ರಕಾಶ ಪಾಲನಕರ ಮೇ 15ರಂದು ನೇಣಿಗೆ ಶರಣಾಗಿದ್ದಾನೆ. ವ್ಯಾಪಾರ ಮತ್ತು ವ್ಯವಹಾರದಿಂದ ಸಮಾಜದಲ್ಲಿ ಉತ್ತಮ ಬಾಂಧವ್ಯ, ಸ್ಥಾನಮಾನ ಹೊಂದಿದ್ದರು. ಬಂಗಾರ ವ್ಯಾಪಾರದ ಜತೆ ಹಲವು ಉದ್ಯಮವನ್ನು ನಡೆಸಿಕೊಂಡು ಸ್ಥಿತಿವಂತನಾಗಿದ್ದನು. ಇಷ್ಟೆಲ್ಲ ಅನುಕೂಲ ಇದ್ದರೂ ಪ್ರೀತಮ ನೇಣಿಗೆ ಶರಣಾಗಿರುವುದು ದೈವಜ್ಞ ಸಮಾಜದಲ್ಲಿ ಮತ್ತು ಸಾರ್ವಜನಿಕರಲ್ಲಿ ಅನೇಕ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ಸಾವು ಬ್ಲಾಕ್‌ಮೇಲ್‌ನಿಂದಾಗಿರಬಹುದು ಎಂಬ ಸಂಶಯವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ. ಸಮಗ್ರ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿ, ಮೃತರ ಕುಟುಂಬಸ್ಥರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

    ದೈವಜ್ಞ ಸಮಾಜದ ಮಂಜುನಾಥ ಶೆಟ್ಟಿ, ಸಂತೋಷ ದೈವಜ್ಞ, ಪ್ರದೀಪ, ಸಂತೋಷ ರೇವಣಕರ, ಸುಧಾಕರ ರಾಯ್ಕರ, ವಿನೋದ ಬನವಾಸಿ, ಮಂಜುನಾಥ ರಾಯ್ಕರ, ವಿನೋದ ಬನವಾಸಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts