ಗೋದಾಮಿನಲ್ಲಿ ಕೊಳೆತು ನಾರುತ್ತಿತ್ತು ಮಹಿಳೆಯ ಮೃತ ದೇಹ! ಮನೆಕೆಲಸದವಳ ಕೊಲೆಗೆ ಕಾರಣವೇನು?

crime
Published on

ಮುಂಬೈ: ನೇಪಾಳಿ ಮೂಲದ ಮಹಿಳೆಯೊಬ್ಬಳ ಮೃತದೇಹ ಮಹಾರಾಷ್ಟ್ರದ ಮುಂಬೈನ ಚೆಂಬೂರಿನ ಗೋದಾಮೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಕರಣದಲ್ಲಿ ಓರ್ವನನ್ನು ಬಂಧಿಸಲಾಗಿದ್ದರೂ ಕೊಲೆಯ ರಹಸ್ಯ ಮಾತ್ರ ಹೊರಬಿದ್ದಿಲ್ಲ.

ಮೃತಳನ್ನು ದುರ್ಗಾ ಖಢ್ಕಾ ಎಂದು ಗುರುತಿಸಲಾಗಿದೆ. ಈಕೆ ಹತ್ತಿರದ ಮನೆಗಳಿಗೆ ಮನೆ ಕೆಲಸಕ್ಕೆ ಹೋಗುತ್ತಿದ್ದಳು ಎನ್ನಲಾಗಿದೆ. ಅದೇ ಏರಿಯಾದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮನ್​ಸಿಂಗ್​ ಮೊಹ್ತಾ, ಮಹಿಳೆಯ ದೇಹವನ್ನು ಟಾರ್ಪಲ್​ ಒಂದರಲ್ಲಿ ಸುತ್ತಿ ಗೋದಾಮಿನಲ್ಲಿ ಎಸೆಯಲು ಸಹಾಯ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಿಳೆಯ ಕೊಲೆ ಮಾಡಿದವರು ಯಾರು ಎನ್ನುವುದು ಇನ್ನೂ ಪತ್ತೆಯಾಗಿಲ್ಲ. ಆರೋಪಿಯು ತಲೆ ಮರೆಸಿಕೊಂಡಿದ್ದು, ಸಿಕ್ಕನಂತರ ಕೊಲೆಗೆ ನಿಖರ ಕಾರಣ ತಿಳಿದುಬರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net