ನೇಪಾಳದಲ್ಲಿ ಬಹುಮತ ಕಳೆದುಕೊಂಡ ಸರ್ಕಾರ

Nepal Prime 28 June 20
Published on

ಕಾಠ್ಮಂಡು: ರಾಜಕೀಯ ಅಸ್ಥಿರತೆ ಎದುರಿಸುತ್ತಿರುವ ನೇಪಾಳದಲ್ಲಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ನೇತೃತ್ವದ ಸರ್ಕಾರ ಹೌಸ್ ಆಫ್ ರೆಪ್ರಸೆಂಟೆಟಿವ್ಸ್ ನಲ್ಲಿ ಬಹುಮತ ಕಳೆದುಕೊಂಡಿದೆ.

ಪ್ರಚಂಡ ಎಂದೇ ಪ್ರಸಿದ್ಧರಾದ ಪುಷ್ಪಕುಮಾಲ್ ದಹಾಲ್ ನೇತೃತ್ವದ ಸಿಪಿಎನ್ (ಮಾವೋಯಿಸ್ಟ್ ಸೆಂಟರ್) ಬುಧವಾರ ತನ್ನ ಬೆಂಬಲವನ್ನು ಹಿಂಪಡೆದ ಕಾರಣ ಓಲಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಪಾರ್ಲಿಮೆಂಟ್ ಸೆಕ್ರೆಟೇರಿಯೆಟ್​ಗೆ ಈ ಸಂಬಂಧ ಪತ್ರವನ್ನು ಪಕ್ಷದ ಚೀಫ್ ವಿಪ್ ದೇವ್ ಗುರಂಗ್ ಅವರು ಹಸ್ತಾಂತರಿಸಿದ್ದು, ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆದಿರುವುದಾಗಿ ಪಕ್ಷದ ಹಿರಿಯ ನಾಯಕ ಗಣೇಶ್ ಶಾ ತಿಳಿಸಿದ್ದಾರೆ.

ಓಲಿ ಸರ್ಕಾರ ಸಂವಿಧಾನದ ಚೌಕಟ್ಟನ್ನು ಉಲ್ಲಂಘಿಸಿದೆ. ಸರ್ಕಾರದ ಇತ್ತೀಚಿನ ನಡವಳಿಕೆ ಮತ್ತು ಚಟುವಟಿಕೆಗಳು ದೇಶದ ಸಾರ್ವಭೌಮತೆ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಗೆ ಧಕ್ಕೆ ತರುವಂಥದ್ದಾದ ಕಾರಣ ಮಾವೋಯಿಸ್ಟ್ ಸೆಂಟರ್ ಈ ತೀರ್ಮಾನ ತೆಗೆದುಕೊಂಢಿದೆ ಎಂದು ಗುರಂಗ್ ಹೇಳಿದ್ದಾರೆ. ಮೇ 10ರಂದು ವಿಶ್ವಾಸಮತ ಯಾಚಿಸುವುದಾಗಿ ಓಲಿ ಘೋಷಿಸಿದ ಬೆನ್ನಿಗೆ ಈ ಬೆಳವಣಿಗೆ ಆಗಿದೆ. ಸಂಸತ್​ನ ಕೆಳಮನೆಯಲ್ಲಿ ಮಾವೋಯಿಸ್ಟ್ ಸೆಂಟರ್​ಗೆ 49 ಸದಸ್ಯ ಬಲವಿದೆ. ಸಿಪಿಎನ್-ಯುಎಂಎಲ್ ಮೈತ್ರಿಯ ಬಲ 121. ಕೆಳಮನೆಯ 275 ಸದಸ್ಯ ಬಲದ ಪೈಕಿ ಒಲಿಗೆ ಸರ್ಕಾರ ಬಚಾವ್ ಮಾಡಲು 15 ಸದಸ್ಯಬಲದ ಕೊರತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net