

ಕಡಬ: ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಇತ್ತೀಚೆಗೆ ಶ್ರೀ ಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ ನಡೆಯಿತು.
ಏ.22ರಂದು ಬೆಳಗ್ಗೆ ಮುಂಡ್ಯೆ ಆರೋಹಣ, 23ರಂದು ಬೆಳಗ್ಗೆ ತಳಿರು ತೋರಣ, ರಾತ್ರಿ ದೈವಗಳ ಭಂಡಾರ ತೆಗೆದು, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ಪಾಲ್ತಾಡಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್‌ನ 16ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
24ರಂದು ಬೆಳಗ್ಗೆ ಉಳ್ಳಾಕುಲು ದೈವದ ನೇಮ, ಸಿರಿಮುಡಿ ಗಂಧಪ್ರಸಾದ ವಿತರಣೆ, ಕೊಳ್ಳಿ ಕುಮಾರ ದೈವದ ನೇಮ, ಮಹಿಷಂತಾಯ ದೈವದ ನೇಮ, ಕೊಡಮಣಿತ್ತಾಯ ದೈವದ ಒಲಸರಿ ನೇಮೋತ್ಸವ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ, ಪುರುಷ ದೈವದ ನೇಮೋತ್ಸವ, ಪಂಜುರ್ಲಿ ದೈವದ ನೇಮೋತ್ಸವ, ಸಂಜೆ ವ್ಯಾಘ್ರ ಚಾಮುಂಡಿ ದೈವದ ಒಲಸರಿ ನೇಮೋತ್ಸವ, ರಾತ್ರಿ ಅವರೋಹಣ ನಡೆಯಿತು. ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ರೈ ನಳೀಲು, ಅಧ್ಯಕ್ಷ ವಿನಯಚಂದ್ರ ಕೆಳಗಿನಮನೆ, ಉಪಾಧ್ಯಕ್ಷರಾದ ರಘುನಾಥ ರೈ ನಡುಕೂಟೇಲು, ವಿಠಲ ಶೆಟ್ಟಿ ಪಾಲ್ತಾಡಿ, ದಿವಾಕರ ಬಂಗೇರ ಬೊಳಿಯಾಲ, ಪದ್ಮಪ್ರಸಾದ್ ಕಲಾಯಿ, ಕೃಷ್ಣಪ್ರಸಾದ್ ಪಾರ್ಲ, ಪ್ರವೀಣ್ ರೈ ನಡುಕೂಟೇಲು, ಕಾರ್ಯದರ್ಶಿ ಜಯರಾಮ ಗೌಡ ದೊಡ್ಡ ಮನೆ, ಜತೆ ಕಾರ್ಯದರ್ಶಿಗಳಾದ ತಾರಾನಾಥ ಬೊಳಿಯಾಲ, ಖಜಾಂಚಿ ಪುರುಷೋತ್ತಮ ಅಂಗಡಿಹಿತ್ಲು ಮೊದಲಾದವರು ಉಪಸ್ಥಿತರಿದ್ದರು.