

ಸುಬ್ರಹ್ಮಣ್ಯ: ಪಂಜ ಸೀಮೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಶ್ರೀ ದೇವರಿಗೆ ರಂಗಪೂಜೆ ನಡೆಯಿತು. ಬಳಿಕ ಪರಿವಾರ ದೈವಗಳಿಗೆ ನೇಮೋತ್ಸವ, ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಸಂಪನ್ನವಾಯಿತು. ಶ್ರೀ ದೇವರ ಬಲಿ ಉತ್ಸವ ಆರಂಭವಾಗಿ ದೈವ ದೇವರ ಭೇಟಿ, ಸಾರ್ವಜನಿಕ ಅನ್ನಸಂರ್ಪಣೆ ನೆರವೇರಿತು.
ಪರಿವಾರ ದೈವಗಳಾದ ಕಾಚುಕುಜುಂಬ, ಉಳ್ಳಾಕುಲು, ಮಹಿಷಂತಾಯ, ವ್ಯಾಘ್ರ ಚಾಮುಂಡಿ, ಕುಪ್ಪೆ ಪಂಜುರ್ಲಿ, ವರ್ಣಾರ ಪಂಜುರ್ಲಿ, ಪುರುಷ ದೈವ, ಪೊಟ್ಟ ಭೂತ ದೈವಗಳಿಗೆ ನೇಮೋತ್ಸವ ನಡೆಯಿತು. ದೈವಗಳು ನರ್ತನ ಸೇವೆ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಿತು. ಶಿಶ್ರ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.