ಮಹಾಕಾಳಿ ದೇವಸ್ಥಾನದಲ್ಲಿ ನೇಮೋತ್ಸವ

New Project
Published on

ಉಪ್ಪಿನಂಗಡಿ: ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಮಹಾಕಾಳಿ ಅಮ್ಮನವರಿಗೆ ಶುಕ್ರವಾರ ನೇಮೋತ್ಸವ ನಡೆಯಿತು. ಸಾವಿರಾರು ಭಕ್ತರು ಚೆಂಡು ಮಲ್ಲಿಗೆ ಹೂವನ್ನು ಸಮರ್ಪಿಸಿದರು.

ಧರ್ಣಪ್ಪ ಪರವ ಮತ್ತವರ ಕುಟುಂಬ ಸದಸ್ಯರ ಪಾಲ್ಗೊಳ್ಳುವಿಕೆಯಿಂದ ಮಹಾಕಾಳಿ ಅಮ್ಮನವರ ಮೆಚ್ಚಿಯ ನಡಾವಳಿಗಳು ನಡೆದವು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಮಲ್ಲಿಕಾ ಪಕಳ, ಮಾಜಿ ಶಾಸಕ ಸಂಜೀವ ಮಟಂದೂರು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಕ್, ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ, ಸಮಿತಿ ಸದಸ್ಯರಾದ ಕೆ ಹರೀಶ್ ಉಪಾಧ್ಯಾಯ, ಬಿ ಗೋಪಾಲ ಕೃಷ್ಣ ರೈ, ಸೋಮನಾಥ, ಕೃಷ್ಣರಾವ್ ಅರ್ತಿಲ, ದೇವಿದಾಸ್ ರೈ ಬಿ, ವೆಂಕಪ್ಪ ಪೂಜಾರಿ, ಅನಿತಾ ಕೇಶವ ಗೌಡ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಮಾಜಿ ಸದಸ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಸುನಿಲ್ ಅನಾವು, ಸುನಿಲ್ ನಾಯ್ಕಿ, ಹರಿರಾಮಚಂದ್ರ, ಕಂಗ್ವೆ ವಿಶ್ವನಾಥ ಶೆಟ್ಟಿ, ಸುಂದರ ಗೌಡ, ಪ್ರಮುಖರಾದ ಎನ್ ಉಮೇಶ್ ಶೆಣೈ, ರಾಮಚಂದ್ರ ಮಣಿಯಾಣಿ, ಸುಜಾತಕೃಷ್ಣ ಆಚಾರ್ಯ, ಎನ್.ಗೋಪಾಲ ಹೆಗ್ಡೆ, ಐ ಚಂದ್ರಶೇಖರ್ ನಾಯಕ್, ಡಾ. ಎಂ.ಎನ್.ಭಟ್, ಡಾ.ನಿರಂಜನ್ ರೈ, ಡಾ.ಸುಪ್ರಿತ್ ಲೋಬೋ, ಪ್ರಶಾಂತ್ ಡಿಕೋಸ್ತಾ, ಕೈಲಾರ್ ರಾಜಗೋಪಾಲ ಭಟ್, ಕೃಷ್ಣ ಶೈಣೈ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net