ನೆಲ್ಲಿಯಡ್ಕ ಶಾಲೆ ಅಸೆಂಬ್ಲಿ ಸಭಾಂಗಣ ಉದ್ಘಾಟನೆ

New Project (19)
Published on

ಕಾಸರಗೋಡು: ಪನಯಾಲ್ ನೆಲ್ಲಿಯಡ್ಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ಸಿಎಸ್‌ಆರ್ ನಿಧಿಯಿಂದ ಮಂಜೂರು ಮಾಡಿರುವ ಅಸೆಂಬ್ಲಿ ಸಭಾಂಗಣವನು ಪಳ್ಳಿಕ್ಕರ ಗ್ರಾಪಂ ಅಧ್ಯಕ್ಷ ಎಂ.ಕುಮಾರನ್ ಉದ್ಘಾಟಿಸಿದರು.

ಪಳ್ಳಿಕ್ಕರ ಗ್ರಾಪಂ ಉಪಾಧ್ಯಕ್ಷ ನಾಸ್ನಿನ್ ವಹಾಬ್ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಎ.ರಾಕೇಶ್, ನಿವೃತ್ತ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ನಂದಿಕೇಶನ್, ಪಳ್ಳಿಕೆರೆ ಗ್ರಾಪಂ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಿ.ಜಯಶ್ರೀ, ಎಸ್‌ಬಿಐ ಮುಖ್ಯ ವ್ಯವಸ್ಥಾಪಕ ಎಂ.ವಿ.ರೆಜಿ, ಎಸ್‌ಬಿಐ ಉದುಮ ಶಾಖಾ ವ್ಯವಸ್ಥಾಪಕ ಎನ್.ಜಿ.ಸಶಿಕುಮಾರ್, ಜಿ.ಎಲ್.ಪಿ.ಎಸ್. ನಿವೃತ್ತ ಮುಖ್ಯ ಶಿಕ್ಷಕ ಕೆ.ವಿ.ಜಯರಾಜನ್, ಎಸ್‌ಎಂಸಿ ಅಧ್ಯಕ್ಷೆ ವಿದ್ಯಾ ಕುಮಾರಿ, ಜಿಎಚ್‌ಎಸ್‌ಎಸ್ ಚಂದ್ರಗಿರಿಯ ಶಿಕ್ಷಕಿ ನವೀನ್ ಕುಮಾರ್ ಮತ್ತು ಸಿಬ್ಬಂದಿ ಕಾರ್ಯದರ್ಶಿ ಗುರುವಯ್ಯ ಉಪಸ್ಥಿತರಿದ್ದರು.

ಪಿಟಿಎ ಮಾಜಿ ಅಧ್ಯಕ್ಷ ಕಮಲಾಕ್ಷ ಡಿ., ಇಂಜಿನಿಯರ್ ಅನುರಾಜ್ ಎನ್. ಹಾಗೂ ಗೋಪಿನಾಥನ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಕೆ.ಟಿ.ಬಾಬು ಸ್ವಾಗತಿಸಿದರು. ಪಿಟಿಎ ಅಧ್ಯಕ್ಷ ಬಿ.ಆರ್.ದಿನೇಶ್ ಕುಮಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net