ಸಾವಯವ ಗೊಬ್ಬರದ ಮಾಹಿತಿ

New Project (13)
Published on

ಬಂಟ್ವಾಳ: ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಹಾಗೂ ರೋಟರಿ ಕ್ಲಬ್ ಸಿದ್ದಕಟ್ಟೆ ಘಟಕದ ಆಶ್ರಯದಲ್ಲಿ ಸಾವಯವ ಗೊಬ್ಬರದ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಸಿದ್ದಕಟ್ಟೆಯಲ್ಲಿ ಗುರುವಾರ ನಡೆಯಿತು.

ಅಮುಲ್ ಕಂಪನಿಯ ಕರ್ನಾಟಕ ವಲಯದ ಮ್ಯಾನೇಜಿಂಗ್ ಡೈರೆಕ್ಟರ್ ರಂಗರಾಜು ಸಾವಯುವ ಗೊಬ್ಬರದ ಮಹತ್ವ ಹಾಗೂ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.

ಫಲ್ಗುಣಿ ರೋಟರಿ ಕ್ಲಬ್‌ನ ಅಧ್ಯಕ್ಷ ದುರ್ಗಾದಾಸ್ ಅಧ್ಯಕ್ಷತೆ ವಹಿಸಿದ್ದರು. ಟೀನಾ ಡಿ ಕೋಸ್ತಾ, ಮೈಕಲ್ ಡಿ ಕೋಸ್ತಾ ಉಪಸ್ಥಿತರಿದ್ದರು.

ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಫರ್ನಾಂಡಿಸ್ ಸ್ವಾಗತಿಸಿದರು. ಅಮುಲ್ ಸಾವಯವ ಗೊಬ್ಬರದ ಜಿಲ್ಲೆಯ ಅಧಿಕೃತ ಮಾರಾಟಗಾರ ರಾವೇಂದ್ರ ಭಟ್ ಪ್ರಸ್ತಾವಿಸಿದರು. ಗಣೇಶ್ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net