

ನವದೆಹಲಿ: ಇತ್ತೀಚೆಗೆ ನಿಧನರಾದ ಬಾಲಿವುಡ್ನ ದಿಗ್ಗಜ ನಟ ರಿಷಿ ಕಪೂರ್ ಅವರ ಮೂರನೇ ದಿನದ ಶ್ರಾದ್ಧ ಕಾರ್ಯಕ್ರಮದಲ್ಲಿ ಅವರ ಪತ್ನಿ ನೀತೂ ಕಪೂರ್, ಪುತ್ರ ರಣಬೀರ್ ಕಪೂರ್ ಮತ್ತು ಪುತ್ರಿ ರಿದ್ಧಿಮಾ ಕಪೂರ್ ಅಲ್ಲದೆ, ಕಪೂರ್ ಕುಟುಂಬದವರೆಲ್ಲರೂ ಸೇರಿ ಹಲವರು ನಮನ ಸಲ್ಲಿಸಿದರು.
ಮುಂಬೈನ ನಿವಾಸದಲ್ಲಿ ಭಾನುವಾರ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ರಿಷಿ ಕಪೂರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ನೀತೂ ಮತ್ತು ರಣಬೀರ್ ಕಪೂರ್ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ನೀತೂ ಕಪೂರ್ ಬಿಳಿ ವಸ್ತ್ರ ಧರಿಸಿದ್ದರೆ, ರಣಬೀರ್ ಕಪೂರ್ ಕೆಂಪು ಪೇಟ ಧರಿಸಿದ್ದರು. ಈ ಚಿತ್ರವೀಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ರಿಷಿ ಕಪೂರ್ ಮುಂಬೈನ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದರು. ಬಾಲಿವುಡ್ನ ದಿಗ್ಗಜ ನಟ, ನಟಿಯರು ಟ್ವಿಟರ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದರು.