ನವದೆಹಲಿ: ನೀಟ್-ಯುಜಿ 2024ರ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಸುಪ್ರೀಂಕೊರ್ಟ್ ನೀಡಿದ ತೀರ್ಪಿನ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶುಕ್ರವಾರ(ಆಗಸ್ಟ್ 2) ಪ್ರತಿಕ್ರಿಯಿಸಿದ್ದಾರೆ. ವಿವಾದಿತ ಪರೀಕ್ಷೆಯ ಪಾವಿತ್ರ್ಯತೆಗೆ ಯಾವುದೇ ಧಕ್ಕೆಯಾಗದ ಕಾರಣ ಪರೀಕ್ಷೆಯನ್ನು ರದ್ದುಗೊಳಿಸಿಲ್ಲ. ಮರುಪರೀಕ್ಷೆ ಬೇಡ ಎಂದಿರುವ ನ್ಯಾಯಾಲಯದ ತೀರ್ಪು ಕೇಂದ್ರ ಸರ್ಕಾರದ ನಿಲುವು ಸರಿಯಾಗಿದೆ ಎಂದು ಸಾಬೀತಾಗಿದೆ ಎಂದು ಅವರು ಹೇಳಿದರು.
ಇದನ್ನು ಓದಿ: ಆ.8ರವರೆಗೆ ಇಸ್ರೇಲ್ನ ಈ ಸ್ಥಳಕ್ಕೆ ವಿಮಾನ ಹಾರಾಟ ರದ್ದು; ಏರ್ಇಂಡಿಯಾ ಕೊಟ್ಟ ಕಾರಣ ಇದು
ಸರ್ಕಾರವು ಪಾರದರ್ಶಕ ಮತ್ತು ದೋಷ-ಮುಕ್ತ ಪರೀಕ್ಷಾ ವ್ಯವಸ್ಥೆಗೆ ಬದ್ಧವಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಉನ್ನತ ಮಟ್ಟದ ತಜ್ಞರ ಸಮಿತಿಯ ಶಿಫಾರಸುಗಳನ್ನು ಸಲ್ಲಿಸಿದ ನಂತರ ಅವುಗಳನ್ನು ಜಾರಿಗೆ ತರುತ್ತೇವೆ ಎಂದು ತಿಳಿಸಿದರು.
ನ್ಯಾಯಾಲಯದ ತೀರ್ಪು ಸುಳ್ಳು ಪ್ರಚಾರವನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ನ್ಯಾಯ ಒದಗಿಸಿದ ಮತ್ತು ಲಕ್ಷಾಂತರ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಕಾಪಾಡಿದ್ದಕ್ಕಾಗಿ ಸುಪ್ರೀಂಕೋರ್ಟ್ಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿವಾದಿತ ಪರೀಕ್ಷೆಯ ರದ್ದತಿ ಮತ್ತು ಮರುಪರೀಕ್ಷೆಯನ್ನು ಕೋರಿ ಸಲ್ಲಿಸಲಾದ ಮನವಿಗಳನ್ನು ಸುಪ್ರೀಂಕೋರ್ಟ್ ಜುಲೈ 23 ರಂದು ವಜಾಗೊಳಿಸಿತು. ದಾಖಲೆಯಲ್ಲಿರುವ ದತ್ತಾಂಶವು ಪ್ರಶ್ನೆಪತ್ರಿಕೆಯ ವ್ಯವಸ್ಥಿತ ಸೋರಿಕೆಗೆ ಸಾಕ್ಷಿಯಲ್ಲ ಎಂದು ತಿಳಿಸಿತ್ತು. (ಏಜೆನ್ಸೀಸ್)
ಹಿಮಾಚಲದಲ್ಲಿ ಮೇಘಸ್ಫೋಟ: 50 ಮಂದಿ ನಾಪತ್ತೆ.. ರೆಡ್ ಅಲರ್ಟ್ ಘೋಷಣೆ