ನೀಟ್​​​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; 13 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

Untitled-design-2024-06-22T151203.975
Published on

ಪಾಟ್ನಾ: ನೀಟ್​​ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಿಹಾರ ಪೋಲೀಸ್‌ನ ಆರ್ಥಿಕ ಅಪರಾಧಗಳ ಘಟಕ(EOU) ಪರೀಕ್ಷಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ 13 ಜನರನ್ನು ಬಂಧಿಸಿದೆ. ಬಿಹಾರದಿಂದ ಏಳು, ಉತ್ತರ ಪ್ರದೇಶದ ಒಬ್ಬರು ಮತ್ತು ಮಹಾರಾಷ್ಟ್ರದ ಒಬ್ಬರೊಂದಿಗೆ ತನಿಖೆಗೆ ಸೇರಲು ಇತರ ಒಂಬತ್ತು ಅಭ್ಯರ್ಥಿಗಳಿಗೆ ಆರ್ಥಿಕ ಅಪರಾಧಗಳ ಘಟಕ ನೋಟಿಸ್ ನೀಡಿದೆ ಎಂದು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಮಾನವಜಿತ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.

ಬಂಧನಕ್ಕೊಳಗಾದವರಲ್ಲಿ ನೀಟ್ ಅಭ್ಯರ್ಥಿ ಅನುರಾಗ್ ಯಾದವ್ ಮತ್ತು ಅವರ ಚಿಕ್ಕಪ್ಪ ಸಿಕಂದರ್ ಯಡ್ವೆಂದು ಮತ್ತು ನಿತೀಶ್ ಕುಮಾರ್, ಆನಂದ್ ಎಂಬುವವರು ಸೇರಿದ್ದಾರೆ. ಪರೀಕ್ಷೆಯ ಮೊದಲು ಪ್ರಶ್ನೆಪತ್ರಿಕೆ ನೀಡುವುದಾಗಿ ಸಿಕಿಂದರ್​​ ಭರವಸೆ ನೀಡಿದ್ದರು ಎಂದು ಅನುರಾಗ್ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ನೀಟ್​​ ಯುಜಿ-2024ರ ಫಲಿತಾಂಶಗಳನ್ನು ಜೂನ್ 4ರಂದು ಪ್ರಕಟಿಸಲಾಯಿತು, ವರದಿಗಳ ಪ್ರಕಾರ, ಬಂಧಿತ ನಾಲ್ವರು ಪರೀಕ್ಷಾರ್ಥಿಗಳೊಂದಿಗೆ ಒಂಬತ್ತು ಅಭ್ಯರ್ಥಿಗಳು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ಮೇ 5 ರಂದು ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಪಾಟ್ನಾ ಬಳಿಯ ಮನೆಯೊಂದರಲ್ಲಿ ಪಡೆದರು ಎಂದು ಹೇಳಲಾಗಿದೆ.

ಪ್ರಶ್ನೆಪತ್ರಿಕೆಗಳನ್ನು ಮುಂಗಡವಾಗಿ ಪಡೆಯಲು ಅವರ ಪಾಲಕರು ತಲಾ 30 ಲಕ್ಷ ರೂಪಾಯಿಗೂ ಹೆಚ್ಚು ಪಾವತಿಸಿದ್ದಾರೆ ಎಂದು ಅಭ್ಯರ್ಥಿಗಳು ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ. ಈ ಅಭ್ಯರ್ಥಿಗಳನ್ನು ಪಾಟ್ನಾದ ರಾಮಕೃಷ್ಣನಗರದಲ್ಲಿರುವ ಬಾಡಿಗೆ ಮನೆಗೆ ಕರೆತಂದು ಅಲ್ಲಿ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳನ್ನು ನೀಡಲಾಯಿತು. ಪೊಲೀಸರು ಆವರಣವನ್ನು ಪರಿಶೀಲಿಸಿದಾಗ ಮೊಬೈಲ್ ಫೋನ್‌ಗಳು, ಪ್ರವೇಶ ಪತ್ರಗಳು ಮತ್ತು ಇತರ ದೋಷಾರೋಪಣೆಯ ದಾಖಲೆಗಳು ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net