ಚಂದ್ರಬಾಬು ನಾಯ್ಡು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದಿದ್ದೇಕೆ ಜಗನ್​ ಮೋಹನ್​ ರೆಡ್ಡಿ

Untitled-design-2024-06-22T133550.749
Published on

ಅಮರಾವತಿ: ಆಂಧ್ರಪ್ರದೇಶ ಸರ್ಕಾರ ತಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿರುವ ತಮ್ಮ ಪಕ್ಷದ ಕಚೇರಿಯನ್ನು ಕೆಡವಿದ್ದಕ್ಕಾಗಿ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರವನ್ನು ತರಾಟೆಗೆ ತೆಗೆದು. ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಪಕ್ಷದ ಕಚೇರಿಯನ್ನು ಕೆಡವಲಾಗಿದೆ ಎಂದು ರೆಡ್ಡಿ ಆರೋಪಿಸಿದ್ದಾರೆ.

ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಕ್ರಮ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಕ್ಕೆ ನೋಟಿಸ್​ ಜಾರಿ ಮಾಡಿತ್ತು. ಸಿಆರ್‌ಡಿಎ ನೋಟಿಸ್ ಪ್ರಶ್ನಿಸಿ ವೈಎಸ್‌ಆರ್‌ಸಿಪಿ ಹೈಕೋರ್ಟ್​​ ಮೆಟ್ಟಿಲೇರಿತ್ತು. ಯಾವುದೇ ಡೆಮಾಲಿಷನ್​ ಚಟುವಟಿಕೆಯನ್ನು ಸ್ಥಗಿತಗೊಳಿಸುವಂತೆ ನ್ಯಾಯಾಲಯವು ಆದೇಶಿಸಿದೆ. ಈ ಆದೇಶವನ್ನು ವೈಎಸ್‌ಆರ್‌ಸಿಪಿ ವಕೀಲರು ಆಯುಕ್ತರಿಗೆ ತಿಳಿಸಲಾಗಿದೆ ಎಂದು ಪಕ್ಷವು ಹೇಳಿಕೊಂಡಿದೆ.

ಚಂದ್ರಬಾಬು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. "ಒಬ್ಬ ಸರ್ವಾಧಿಕಾರಿಯಂತೆ, ಅವರು ಬಹುತೇಕ ಸಿದ್ಧವಾಗಿದ್ದ ವೈಎಸ್ಆರ್ ಕಾಂಗ್ರೆಸ್ ಮುಖ್ಯ ಕಚೇರಿಯನ್ನು ಬುಲ್ಡೋಜರ್‌ಗಳಿಂದ ಕೆಡವಿದರು. ಈ ಕ್ರಮಗಳ ಮೂಲಕ ನಾಯ್ಡು ಅವರು ಮುಂದಿನ ಐದು ವರ್ಷಗಳ ಕಾಲ ತಮ್ಮ ಆಡಳಿತ ಹೇಗಿರುತ್ತದೆ ಎಂಬ ಸ್ಪಷ್ಟ ಸಂದೇಶ ರವಾನಿಸುತ್ತಿದ್ದಾರೆ. ಈ ಬೆದರಿಕೆ, ಹಿಂಸಾಚಾರಗಳಿಂದ ವೈಎಸ್​ಆರ್​​​ಸಿಪಿ ಹಿಂದೆ ಸರಿಯುವುದಿಲ್ಲ. ಎಂದು ಜಗನ್​​ಮೋಹನ್​ ರೆಡ್ಡಿ ಸಾಮಾಜಿಕ ಜಾಲತಾಣದ ತಮ್ಮ ಎಕ್ಸ್​ ಖಾತೆಯಲ್ಲಿ ಮಾಡಿರುವ ಪೋಸ್ಟ್​ನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net