ಪಾಕ್​ ಅಥ್ಲೀಟ್​​​ ಅರ್ಷದ್​ ನದೀಮ್​ ಬಯೋಪಿಕ್​ ತೆಗೆದ್ರೆ ನಾಯಕ ಇವರಾಗ್ಬೇಕಂತೆ; ನೀರಜ್​ ಹೇಳಿದ್ದು ಈ ನಟನ ಬಗ್ಗೆ..

Untitled-design-2024-08-18T142827.972
Published on

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​​ 2024ರಲ್ಲಿ ಜಾವೆಲಿನ್​ ಥ್ರೋ ಸ್ಪರ್ಧೆಯಲ್ಲಿ ಅರ್ಷದ್​ ನದೀಮ್​​ ಚಿನ್ನದ ಪದಕವನ್ನು ಹಾಗೂ ನೀರಜ್​ ಚೋಪ್ರಾ ಬೆಳ್ಳಿ ಪದಕವನ್ನು ಗೆದ್ದಿರುವುದು ಎಲ್ಲರಿಗೂ ತಿಳಿದಿದೆ. ಈ ಸ್ಪರ್ಧೆಯ ಬಳಿಕ ನೀರಜ್​ ಚೋಪ್ರಾ ಹಾಗೂ ಅರ್ಷದ್​ ನದೀಮ್​ ಅವರ ನಡುವಿನ ಸ್ನೇಹದ ಬಗ್ಗೆ ಪ್ರಸ್ತುತ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಇಬ್ಬರು ಕ್ರೀಡಾಪಟುಗಳ ನಡುವೆ ಕ್ರೀಡೆಯಲ್ಲಿ ಪರಸ್ಪರ ಟಫ್​ ಫೈಟ್​ ಇದ್ದರೂ, ಕ್ರೀಡಾ ಜಗತ್ತಿನಿಂದ ಹೊರಗೆ ಇಬ್ಬರ ನಡುವೆ ಆತ್ಮೀಯ ಸ್ನೇಹವಿದೆ. ಒಬ್ಬರಿಗೊಬ್ಬರು ಸಾಕಷ್ಟು ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದಾರೆ. ​​ಇವರಿಬ್ಬರ ಸ್ನೇಹದ ವಿಚಾರವಾಗಿ ಚರ್ಚೆ ನಡೆಯುತ್ತಿರುವಾಗಲೇ ಪಾಕಿಸ್ತಾನದ ಅಥ್ಲೀಟ್​ ಅರ್ಷದ್​ ನದೀಮ್​ ಮತ್ತು ಭಾರತದ ನೀರಜ್​ ಚೋಪ್ರಾರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಇಬ್ಬರಿಗೂ ಬಯೋಪಿಕ್​ ವಿಚಾರವಾಗಿ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಇಬ್ಬರು ಆಸಕ್ತಿದಾಯಕವಾಗಿ ಉತ್ತರಿಸಿದ್ದಾರೆ. ನೀರಜ್​ ಚೋಪ್ರಾ ಅವರನ್ನು, ಅರ್ಷದ್​ ಅವರ ಬಯೋಪಿಕ್​ ಮಾಡಿದರೆ ಅವರ ಪಾತ್ರವನ್ನು ಯಾರು ಮಾಡಬೇಕು ಎಂದು ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ನೀರಜ್​ ಚೋಪ್ರಾ, ಅರ್ಷದ್​ ಪಾತ್ರ ಮಾಡುವವರು ಅವರಷ್ಟೆ ಎತ್ತರವಾಗಿ ಇರಬೇಕು. ಹಾಗಾಗಿ ಅರ್ಷದ್​ ನದೀಮ್​ ಜೀವನ ಚರಿತ್ರೆಯಲ್ಲಿ ಹಿಂದಿನ ಅಮಿತಾಭ್​ ಬಚ್ಚನ್​ ಅವರು ನಟಿಸುವುದು ಒಳ್ಳೆಯದು ಎಂದಿದ್ದಾರೆ.

ಅರ್ಷದ್​ ಅವರಿಗೂ ಇದೇ ಪ್ರಶ್ನೆಯನ್ನು ಕೇಳಲಾಗಿದೆ. ನೀರಜ್​ ಅವರ ಜೀವನಚರಿತ್ರೆಯನ್ನು ತೆಗೆದರೆ ಅವರ ಪಾತ್ರವನ್ನು ಯಾರು ನಿರ್ವಹಿಸಬೇಕು ಎಂದಾಗ, ಕ್ಷಣಮಾತ್ರವು ಯೋಚಿಸದೆ ಅರ್ಷದ್​ ಅವರು ಥಟ್​​ ಅಂಥಾ ಶಾರೂಖ್​​ ಖಾನ್​​ ಎಂದು ಉತ್ತರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net