ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಸ್ಪರ್ಧೆಯಲ್ಲಿ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದ ಬಳಿಕ ಅವರ ಸಾಧನೆಯನ್ನು ಪಾಕಿಸ್ತಾನದಲ್ಲಿ ಕೊಂಡಾಡುತ್ತಿದ್ದಾರೆ. ಅಲ್ಲದೆ ನದೀಮ್ ಅವರಿಗೆ ಉಡುಗೊರೆಗಳ ಮಹಾಪೂರವೆ ಹರಿದು ಬರುತ್ತಿದೆ. ಇತ್ತೀಚೆಗೆ ಅವರ ಮಾನ ನದೀಮ್ ಅವರಿಗೆ ಎಮ್ಮೆಯನ್ನು ಗಿಫ್ಟ್ ಆಗಿ ನೀಡಿದ್ದು ಎಲ್ಲರಿಗೂ ಗೊತ್ತೆ ಇದೆ. ಈ ರೀತಿಯ ತಮಾಷೆಯ ಉಡುಗೊರೆ ಪಡೆದುಕೊಂಡು ಹಾಸ್ಯಾಸ್ಪದವಾಗಿ ಅದಕ್ಕೆ ನದೀಮ್ ಪ್ರತಿಕ್ರಿಯಸಿದ್ದರು.
ಇದನ್ನು ಓದಿ: ಮಾನಸಿಕವಾಗಿ ಸಿದ್ಧನಿದ್ದೆ ಆದ್ರೆ…. ಒಲಿಂಪಿಕ್ಸ್ನಲ್ಲಿನ ಪ್ರದರ್ಶನದ ಕುರಿತು ನೀರಜ್ ಚೋಪ್ರಾ ಹೇಳಿದಿಷ್ಟು
ಇದೇ ರೀತಿಯ ತಮಾಷೆಯ ಉಡುಗೊರೆಯನ್ನು ನೀವು ಪಡೆದಿದ್ದೀರಾ ಎಂದು ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರನ್ನು ಇತ್ತೀಚೆಗೆ ಸಂದರ್ಶವೊಂದರಲ್ಲಿ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅವರು, ನಾನು ಹರಿಯಾಣದವನು. ಅಲ್ಲಿ ಕುಸ್ತಿ ಮತ್ತು ಕಬಡ್ಡಿಯಂತಹ ಆಟಗಳನ್ನು ಆಡಲಾಗುತ್ತದೆ, ಅದನ್ನು ಪವರ್ ಗೇಮ್ಗಳೆಂಳದು ಪರಿಗಣಿಸಲಾಗಿದೆ. ಅಲ್ಲಿ ಕೆಲವರು ತುಪ್ಪ ಮತ್ತು ಕೆಲವು ಎಮ್ಮೆಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಇದಲ್ಲದೇ ಬುಲೆಟ್ ಅಥವಾ ಟ್ರ್ಯಾಕ್ಟರ್ಗಳನ್ನೂ ಉಡುಗೊರೆಯಾಗಿ ನೀಡುತ್ತಾರೆ ಎಂದು ಹೇಳಿದ್ದಾರೆ.
ಅಂದ್ಹಾಗೆ ನಾನು ತುಪ್ಪವನ್ನು ಉಡುಗೊರೆಯಾಗಿ ಸ್ವೀಕರಿಸಿದ್ದೇನೆ. ಆದ್ದರಿಂದ ನಾನು ಅದನ್ನು ತಮಾಷೆಯಾಗಿ ಸ್ವೀಕರಿಸಿದ ಉಡುಗೊರೆ ಎಂದು ಪರಿಗಣಿಸಬಹುದು ಎಂದು ನೀರಜ್ ಹೇಳಿದರು. ಹರಿಯಾಣದ ಸಂಸ್ಕೃತಿಯು ಹೀಗಿದೆ, ಏಕೆಂದರೆ ಅಲ್ಲಿ ತುಪ್ಪ ತಿನ್ನುವುದು ಶಕ್ತಿ ನೀಡುತ್ತದೆ ಮತ್ತು ಕ್ರೀಡಾಪಟುಗಳು ಅದನ್ನು ತಿನ್ನುವುದರಿಂದ ಉತ್ತಮವಾಗಿ ಆಟ ಆಡಬಹುದು ಎಂದು ನಂಬಲಾಗಿದೆ ಎಂದು ತಿಳಿಸಿದರು. ನೀರಜ್ ಚೋಪ್ರಾ ತಮ್ಮ ಮುಂದಿನ ಸ್ಪರ್ಧೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಗಸ್ಟ್ 22ರಂದು ಪ್ರಾರಂಭವಾಗಲಿರುವ ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ ಭಾಗವಹಿಸುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್)
ಸೇತುವೆ ಹಾರಿ ಸೂಸೈಡ್ ಮಾಡಿಕೊಳ್ಳಲು ಮುಂದಾದ ಮಹಿಳೆ; ಕಾರು ಚಾಲಕನ ಸಮಯಪ್ರಜ್ಞೆಯಿಂದ ಉಳಿದ ಪ್ರಾಣ