

PM Modi: ಮಣಿಪುರದ ಬೆಟ್ಟ ಮತ್ತು ಕಣಿವೆ ಜನರ ನಡುವೆ ವಿಶ್ವಾಸದ ಸೇತುವೆ ನಿರ್ಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ (ಸೆಪ್ಟೆಂಬರ್,13) ಹೇಳಿದ್ದಾರೆ.
ಈ ಬಗ್ಗೆ ಇಂಫಾಲ್‌ನ ಕಾಂಗ್ಲಾ ಕೋಟೆಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ತಮ್ಮ ಸರ್ಕಾರ ಗಾಯಗಳನ್ನು ಗುಣಪಡಿಸಲು, ಆತ್ಮವಿಶ್ವಾಸವನ್ನು ಪುನಃಸ್ಥಾಪಿಸಲು ಮತ್ತು ಯಾವುದೇ ಕುಟುಂಬವು ಹಿಂದುಳಿಯದಂತೆ ನೋಡಿಕೊಳ್ಳಲು ಬದ್ಧವಾಗಿದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಮೋದಿ, ಮಣಿಪುರವು ಭಾರತ ಮಾತೆಯ ಕಿರೀಟವನ್ನು ಅಲಂಕರಿಸುವ ರತ್ನವಾಗಿದೆ. ಇಲ್ಲಿ ಯಾವುದೇ ರೀತಿಯ ಹಿಂಸಾಚಾರ ಖಂಡನೀಯ ಎಂದು ಹೇಳಿದ್ದಾರೆ. ಈ ಹಿಂಸಾಚಾರವು ದುರದೃಷ್ಟಕರ ಮಾತ್ರವಲ್ಲದೆ ನಮ್ಮ ಪೂರ್ವಜರು ಮತ್ತು ನಮ್ಮ ಭವಿಷ್ಯದ ಪೀಳಿಗೆಗೆ ಗಂಭೀರ ಅನ್ಯಾಯವಾಗಿದೆ. ನಾವು ಮಣಿಪುರವನ್ನು ಶಾಂತಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಬೇಕು ಎಂದು ಮೋದಿ ತಿಳಿಸಿದರು.
ಮಣಿಪುರದಲ್ಲಿ ಶಾಂತಿ ಮಾತುಕತೆಗೆ ಅವಕಾಶವಿಲ್ಲ. ಮಾತುಕತೆ ಮತ್ತು ಏಕತೆಯಿಂದ ಮಾತ್ರ ಸಾಧಿಸಬಹುದು. ಅಲ್ಲದೆ, ಮಣಿಪುರವು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಜನಾಂಗೀಯ ಹಿಂಸಾಚಾರವು ನಮ್ಮ ಸಾಮಾಜಿಕ ರಚನೆಯನ್ನು ದುರ್ಬಲಗೊಳಿಸುತ್ತದೆ. ಶಾಂತಿ ಮತ್ತು ಸಾಮರಸ್ಯ ಮಾತ್ರ ಭಾರತದ ಪೂರ್ವ ಕಿರೀಟದ ರತ್ನವಾಗಿ ರಾಜ್ಯಕ್ಕೆ ಇರುವ ಸರಿಯಾದ ಸ್ಥಾನವನ್ನು ಪುನಃಸ್ಥಾಪಿಸಬಹುದು ಎಂದು ಮೋದಿ ಹೇಳಿದ್ದಾರೆ.
ಹಿಂಸಾಚಾರದಿಂದ ಸಾವಿಗೀಡದವರಿಗೆ 7,000 ಹೊಸ ಮನೆಗಳ ನಿರ್ಮಾಣಕ್ಕೆ ಕೇಂದ್ರ ಅನುಮೋದನೆ ನೀಡಿದೆ. ಸುಮಾರು 3,000 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಅನ್ನು ನೀಡಿದೆ ಎಂದು ಮೋದಿ ತಿಳಿಸಿದ್ದಾರೆ.
ಮಣಿಪುರವು ಭಾರತದ ಸ್ವಾತಂತ್ರ್ಯದ ದ್ವಾರ ಎಂದು ನೇತಾಜಿ ಸುಭಾಷ್ ಚಂದ್ರಬೋಸ್ರನ್ನು ಮೋದಿ ಸ್ಮರಿಸಿದ್ದಾರೆ. ಅಲ್ಲದೆ,ಈ ಮಣ್ಣು ಐಎನ್ಎ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸುವುದನ್ನು ಕಂಡಿತು. ಮಣಿಪುರ ರಾಷ್ಟ್ರಕ್ಕೆ ಅನೇಕ ಹುತಾತ್ಮರನ್ನು ನೀಡಿದೆ. ನಮ್ಮ ಸರ್ಕಾರ ನೇತಾಜಿ ಅವರ ತ್ಯಾಗದಿಂದ ಪ್ರೇರಿತವಾಗಿ ಮುಂದುವರಿಯುತ್ತಿದೆ ಎಂದು ಮೋದಿ ಹೇಳಿದರು.
ಇಲ್ಲಿನ ತಾಯಂದಿರು ಮತ್ತು ಸಹೋದರಿಯರು ಯಾವಾಗಲೂ ಆರ್ಥಿಕತೆಯ ಮುಂಚೂಣಿಯಲ್ಲಿದ್ದಾರೆ. ಮಹಿಳಾ ಶಕ್ತಿಯು ಭಾರತದ ಅಭಿವೃದ್ಧಿ ಮತ್ತು ಸ್ವಾವಲಂಬನೆಯ ಪ್ರೇರಕ ಶಕ್ತಿ ಎಂದು ನಾನು ಪರಿಗಣಿಸುತ್ತೇನೆ. ಈ ಮನೋಭಾವವನ್ನು ಸಾಕಾರಗೊಳಿಸುತ್ತದೆ. ರಾಷ್ಟ್ರೀಯ ಭದ್ರತೆಯಲ್ಲಿ ಮಣಿಪುರದ ಸೈನಿಕರ ಪಾತ್ರವನ್ನು ಶ್ಲಾಘಿಸಿದ ಮೋದಿ, ಭಾರತದ ಯಶಸ್ವಿ ಆಪರೇಷನ್ ಸಿಂಧೂರ್‌ನಲ್ಲಿ, ಮಣಿಪುರದ ಧೀರ ಪುತ್ರರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.
ನಮ್ಮ ಸರ್ಕಾರವು ಅಗತ್ಯ ವಸ್ತುಗಳು ಮತ್ತು ಸೇವೆಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡುವ ಮೂಲಕ ಜನರ ಜೀವನವನ್ನು ಸುಲಭಗೊಳಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದರು. ಇದು ಸಿಮೆಂಟ್, ಆಹಾರ ಮತ್ತು ಹೋಟೆಲ್ ವಾಸ್ತವ್ಯಗಳ ಬೆಲೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಟ್ಯಾಕ್ಸಿ ಸೇವೆಗಳು, ಧಾಬಾಗಳು ಮತ್ತು ಅತಿಥಿ ಗೃಹಗಳಂತಹ ಸ್ಥಳೀಯ ವ್ಯವಹಾರಗಳನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದ್ದಾರೆ.
ತಮ್ಮ ಸರ್ಕಾರ ರಾಜ್ಯದ ಜನರೊಂದಿಗೆ ದೃಢವಾಗಿ ಇದೆ. ಮಣಿಪುರವು ಸಾವಿರಾರು ವರ್ಷಗಳಷ್ಟು ಹಳೆಯದಾದ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ಆಳವಾದ ಸಾಂಸ್ಕೃತಿಕ ಬೇರುಗಳನ್ನು ಹೊಂದಿದೆ. ಇದರ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಭಿವೃದ್ಧಿ ಮತ್ತು ಪ್ರಗತಿಯ ಭೂಮಿಯೆಂಬ ಇದರ ಇಮೇಜ್ ಆನ್ನು ಬಲಪಡಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಮೋದಿ ಹೇಳಿದರು.
ಮೈತೈ ಸಮುದಾಯದ ಜನರು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದರೆ, ಕುಕಿಗಳು ಪಕ್ಕದ ಬೆಟ್ಟಗಳಲ್ಲಿ ವಾಸಿಸುತ್ತಾರೆ. (ಏಜೆನ್ಸೀಸ್)