7ನೇ ಕ್ಲಾಸ್​ಗೆ NCERT ಪರಿಚಯಿಸಿದ ಹೊಸ ಪುಸ್ತಕದಲ್ಲಿದೆ ಧೈರ್ಯ, ದೇಶಭಕ್ತಿ ಸಾರುವ ರಾಣಿ ಅಬ್ಬಕ್ಕಳ ಗ್ರಾಫಿಕ್​ ಸ್ಟೋರಿ! NEP

NEP
Published on

NEP : ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಅಡಿಯಲ್ಲಿ ಶಾಲಾ ಶಿಕ್ಷಣವನ್ನು ಮತ್ತಷ್ಟು ಸುಧಾರಿಸುವ ಪ್ರಯತ್ನದ ಭಾಗವಾಗಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) 7ನೇ ತರಗತಿಯ ವಿದ್ಯಾರ್ಥಿಗಳಿಗೆ ಪೂರ್ವಿ ಹೆಸರಿನ ಹೊಸ ಇಂಗ್ಲಿಷ್ ಪಠ್ಯಪುಸ್ತಕವನ್ನು ಪರಿಚಯಿಸಿದೆ.

ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (NCF 2023) ಅಡಿಯಲ್ಲಿ ಈ ಪೂರ್ವಿ ಪಠ್ಯಪುಸ್ತಕವನ್ನು ಅಭಿವೃದ್ಧಿಪಡಿಸಲಾಗಿದೆ. ದೇಶಾದ್ಯಂತ ಶಾಲಾ ಕಲಿಕಾ ಸಾಮಗ್ರಿಗಳ ಪರಿಷ್ಕರಣೆಯ ಭಾಗವಾಗಿ ಬಿಡುಗಡೆ ಮಾಡಲಾದ ಮೊದಲ ಪಠ್ಯಪುಸ್ತಕಗಳಲ್ಲಿ ಪೂರ್ವಿ ಒಂದಾಗಿದೆ.

ಈ ಪಠ್ಯಪುಸ್ತಕವು ಎನ್​ಇಪಿ 2020ರ ಸಂದರ್ಭೋಚಿತ, ಅಂತರ್ಗತ ಮತ್ತು ಸಾಮರ್ಥ್ಯ ಆಧಾರಿತ ಶಿಕ್ಷಣದ ಮೇಲಿನ ಒತ್ತು ನೀಡುತ್ತದೆ. ಮೌಖಿಕ ಕಲಿಕೆಯನ್ನು ಹೊರತುಪಡಿಸಿ, ಅನುಭವ ಮತ್ತು ವಿಚಾರ ಆಧಾರಿತ ಕಲಿಕೆ, ಮೂಲಭೂತ ಸಾಕ್ಷರತೆ, ವಿಮರ್ಶಾತ್ಮಕ ಚಿಂತನೆ ಮತ್ತು ಭಾರತೀಯ ಜ್ಞಾನ ವ್ಯವಸ್ಥೆಗಳ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಪೂರ್ವಿ ಪಠ್ಯಪುಸ್ತಕ ಹೊಂದಿದೆ.

ಸಂಘಟಿತ ಕಲಿಕೆ, ಬುದ್ಧಿ ಮತ್ತು ಹಾಸ್ಯ, ಕನಸುಗಳು ಮತ್ತು ಆವಿಷ್ಕಾರಗಳು, ಪ್ರಯಾಣ ಮತ್ತು ಸಾಹಸ ಹಾಗೂ ಧೈರ್ಯಶಾಲಿಗಳಿಗೆ ಗೌರವ ಸಲ್ಲಿಕೆ... ಈ ಐದು ವಿಷಯಾಧಾರಿತ ಘಟಕಗಳಾಗಿ ರಚಿಸಲಾಗಿರುವ ಪೂರ್ವಿ ಪಠ್ಯಪುಸ್ತಕವು ಭಾರತೀಯ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಭೌಗೋಳಿಕ ಹಿನ್ನೆಲೆಯೊಂದಿಗೆ ಡಿಸೈನ್​ ಮಾಡಕಲಾದ ಸಾಹಿತ್ಯ ಕೃತಿಗಳ ಮಿಶ್ರಣವನ್ನೂ ಒಳಗೊಂಡಿದೆ.

ಪೂರ್ವಿ ಪಠ್ಯಪುಸ್ತಕವು ರವೀಂದ್ರನಾಥ ಟ್ಯಾಗೋರ್, ರಸ್ಕಿನ್ ಬಾಂಡ್, ಹಗ್ ಲಾಫ್ಟಿಂಗ್, ಎಲಿಜಾ ಕುಕ್ ಮತ್ತು ಹೆಲೆನ್ ಕೆಲ್ಲರ್ ಅವರ ಬರಹಗಳನ್ನು ಒಳಗೊಂಡಿದೆ. ಭಾಷಾ ಕೌಶಲ್ಯಗಳನ್ನು ಮಾತ್ರವಲ್ಲದೆ ಸಹಾನುಭೂತಿ ಮತ್ತು ಪರಿಸರ ಜಾಗೃತಿಯಂತಹ ಮೌಲ್ಯಗಳನ್ನು ಸಹ ಇದು ಒಳಗೊಂಡಿದೆ. ಉದಾಹರಣೆಗೆ, "ದಿ ಡೇ ದಿ ರಿವರ್ ಸ್ಪೋಕ್" ಎಂಬ ಕಥೆಯು ಪರಿಸರ ಜಾಗೃತಿಯನ್ನು ಒತ್ತಿಹೇಳುತ್ತದೆ. ಅದೇ ವೇಳೆ "ಟ್ರೈ ಅಗೇನ್​ (ಮತ್ತೆ ಪ್ರಯತ್ನಿಸಿ)" ಎಂಬ ಪಾಠವೂ ಪರಿಶ್ರಮವನ್ನು ಪ್ರೋತ್ಸಾಹಿಸುತ್ತದೆ. ಧೈರ್ಯಶಾಲಿ ಹೃದಯಗಳಿಗೆ ನಮನ ಎಂಬ ಘಟಕದ ಅಡಿಯಲ್ಲಿ ಭಾರತೀಯ ಸೈನಿಕರನ್ನು ಗೌರವಿಸುವ ಕವಿತೆಯಾದ ಮೈ ಡಿಯರ್ ಸೋಲ್ಜರ್ಸ್ ಮತ್ತು ಧೈರ್ಯ ಮತ್ತು ದೇಶಭಕ್ತಿಯನ್ನು ಸಂಭ್ರಮಿಸಲು ರಾಣಿ ಅಬ್ಬಕ್ಕನ ಕುರಿತಾದ ಒಂದು ಗ್ರಾಫಿಕ್ ಕಥೆಯನ್ನು ಪೂರ್ವಿ ಪಠ್ಯಪುಸ್ತಕ ಒಳಗೊಂಡಿದೆ.

ಸಮಗ್ರ ಭಾಷಾ ಅಭಿವೃದ್ಧಿಯನ್ನು ಬೆಂಬಲಿಸಲು, ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವ ಕೌಶಲ್ಯಗಳನ್ನು ಹೆಚ್ಚಿಸುವ ಪಠ್ಯೇತರ ಚಟುವಟಿಕೆಗಳನ್ನು ಪೂರ್ವಿ ಪುಸ್ತಕ ಒಳಗೊಂಡಿದೆ. ಕಲಿಕೆಯನ್ನು ಹೆಚ್ಚು ಸಂಬಂಧಿತ ಮತ್ತು ಭಾವನಾತ್ಮಕವಾಗಿ ತೊಡಗಿಸಿಕೊಳ್ಳುವಂತೆ ಮಾಡಲು ನಿಜ ಜೀವನದ ಸನ್ನಿವೇಶಗಳು ಮತ್ತು ರೋಮಾಂಚಕ ವಿವರಣೆಗಳನ್ನು ಇದರಲ್ಲಿ ಬಳಸಲಾಗಿದೆ ಎಂದು ಎನ್‌ಸಿಇಆರ್‌ಟಿಯ ಶಿಕ್ಷಕರೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net