More

    ಶಾರುಖ್ ಜತೆಗೆ ನಯನತಾರಾ; ಬಾಲಿವುಡ್​ಗೆ ಮೊದಲ ಬಾರಿಗೆ ಎಂಟ್ರಿ

    ಲೇಡಿ ಸೂಪರ್​ಸ್ಟಾರ್ ಎಂದೇ ಕರೆಸಿಕೊಳ್ಳುವ ದಕ್ಷಿಣ ಭಾರತದ ಟಾಪ್ ನಟಿ ನಯನತಾರಾ, ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿ ಎರಡು ದಶಕ ಆಗುತ್ತ ಬಂತು. ಇಲ್ಲಿಯವರೆಗೂ ಸೌತ್ ಸಿನಿಮಾಗಳಲ್ಲಿ ಮಾತ್ರ ಅವರು ನಟಿಸಿದ್ದರು. ಒಂದೇ ಒಂದು ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಬಾಲಿವುಡ್​ಗೆ ಅವರನ್ನು ಕರೆತರುವ ತಯಾರಿ ತೆರೆಮರೆಯಲ್ಲಿ ನಡೆಯುತ್ತಿದೆ. ಅದೂ ಶಾರುಖ್ ಖಾನ್​ಗೆ ಜೋಡಿಯೆಂಬುದು ವಿಶೇಷ! ಹೌದು, ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಕುಮಾರ್ ಜತೆಗೆ ಶಾರುಖ್ ಸಿನಿಮಾ ಮಾಡಲಿದ್ದಾರೆ ಎಂಬುದು ಈಗಾಗಲೇ ಗೊತ್ತಿರುವ ವಿಚಾರ.

    ಕಳೆದ ವರ್ಷದಿಂದಲೇ ಆ ಪ್ರಾಜೆಕ್ಟ್ ಮೇಲೆ ಕೆಲಸ ಮಾಡುತ್ತಿರುವ ಅಟ್ಲಿ, ಇನ್ನೇನು ಶೀಘ್ರದಲ್ಲಿ ಸಿನಿಮಾ ಸಂಬಂಧಿ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ಈ ನಡುವೆಯೇ ಹೊಸ ಸುದ್ದಿಯೊಂದು ಕಾಲಿವುಡ್ ಅಂಗಳದಿಂದ ತೇಲಿ ಬಂದಿದೆ. ಈ ಚಿತ್ರದಲ್ಲಿ ಶಾರುಖ್​ಗೆ ನಯನತಾರಾ ನಾಯಕಿಯಾಗಿ ನಟಿಸಲಿದ್ದಾರಂತೆ. ಈ ಹಿಂದೆ ಅಟ್ಲಿ ನಿರ್ದೇಶನದ ‘ರಾಜ ರಾಣಿ’ ಮತ್ತು ‘ಬಿಗಿಲ್’ ಸಿನಿಮಾದಲ್ಲಿ ನಯನತಾರಾ ನಟಿಸಿದ್ದರು. ಈಗ ಮತ್ತೆ ಈ ನಿರ್ದೇಶಕ ಮತ್ತು ನಟಿ ಜೋಡಿ ಒಂದಾಗಲಿದೆಯಂತೆ. ಶಾರುಖ್ ಮತ್ತು ಕರಣ್ ಜೋಹರ್ ಜಂಟಿಯಾಗಿ ನಿರ್ಮಾಣ ಮಾಡಲಿರುವ ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಲಿರುವುದು ಅಧಿಕೃತವಾಗಿದ್ದು, ಇನ್ನುಳಿದ ಪಾತ್ರವರ್ಗದ ಆಯ್ಕೆಯೂ ನಡೆಯುತ್ತಿದೆ. -ಏಜೆನ್ಸೀಸ್

    ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    ಪ್ಯಾನ್​​ ಕಾರ್ಡ್​ಗೆ ಆಧಾರ್ ನಂಬರ್​​ ಲಿಂಕ್​ ಮಾಡಿಲ್ಲವೇ? ಹಾಗಿದ್ದರೆ ನಿಮಗಿದು ಬಹುಶಃ ಕಡೇ ಅವಕಾಶ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts