ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಅಂಗವಾಗಿ ಸಾನ್ನಿಧ್ಯಾಭಿವೃದ್ಧಿ ಮತ್ತು ನವದುರ್ಗಾ ಲೇಖನ ಯಜ್ಞ ಪ್ರಯುಕ್ತ ನವಚಂಡಿ ಯಾಗ ಪೂರ್ಣಾಹುತಿಯೊಂದಿಗೆ ಮಂಗಳವಾರ ಸಂಪನ್ನಗೊಂಡಿತು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರಧಾನ ತಂತ್ರಿ ವಿದ್ವಾನ್ ಕೊರಂಗ್ರಪಾಡಿ ಕುಮಾರಗುರು ತಂತ್ರಿ ನೇತೃತ್ವದಲ್ಲಿ, ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯಾ ಉಪಸ್ಥಿತಿಯಲ್ಲಿ ನವಚಂಡಿಯಾಗ ಆರಂಭಗೊಂಡು, ಕಲ್ಪೋಕ್ತ ಪೂಜೆ, ಮಹಾಮಂಗಳಾರತಿ, ಪೂರ್ಣಾಹುತಿ, ಮಹಾಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಿತು.
ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ದೀಪ ಪ್ರಜ್ವಲನೆಗೈದು ನವಚಂಡಿಯಾಗದ ಸಂಕಲ್ಪ ನೆರವೇರಿಸಿದರು. ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮತ್ತು ಮಾಣಿಲ ಶ್ರೀ ಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ದಂಪತಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ದಂಪತಿ, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ.ರಘುಪತಿ ಭಟ್ ದಂಪತಿ, ಸಹಸ್ರಾರು ಭಕ್ತರು ನವಚಂಡಿಯಾಗದ ಸಂಕಲ್ಪದಲ್ಲಿ ಪಾಲ್ಗೊಂಡಿದ್ದರು. ನವದುರ್ಗಾ ಲೇಖನ ಬರೆದು ಸಮರ್ಪಿಸಿದ ಪುಸ್ತಕಗಳಿಗೆ ಶ್ರೀ ವಾಗೀಶ್ವರಿ ಪೂಜೆ ಸಲ್ಲಿಸಲಾಯಿತು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಎಸ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ತಹಸೀಲ್ದಾರ್ ಪ್ರತಿಭಾ ಆರ್., ರಜತ ರಥದ ದಾನಿ ತೋನ್ಸೆ ಆನಂದ ಶೆಟ್ಟಿ ಮುಂಬೈ, ಪ್ರಭಾಕರ ಶೆಟ್ಟಿ ಮಂಡಗದ್ದೆ, ಪ್ರಮುಖರಾದ ಉದಯ ಸುಂದರ್ ಶೆಟ್ಟಿ, ಕೃಷ್ಣ ವೈ.ಶೆಟ್ಟಿ, ಇನ್ನಾ ಕುರ್ಕಿಲ್‌ಬೆಟ್ಟು ಸಂತೋಷ್ ಶೆಟ್ಟಿ, ಮಲ್ಲಾರು ಶಶಿಧರ ಶೆಟ್ಟಿ ಮಸ್ಕತ್, ದಿವಾಕರ ಶೆಟ್ಟಿ, ಮನೋಹರ ಎಸ್.ಶೆಟ್ಟಿ, ಮಾಧವ ಆರ್.ಪಾಲನ್, ಕಾಪು ದಿವಾಕರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ರಮೇಶ್ ಹೆಗ್ಡೆ ಕಲ್ಯ, ಕೆ.ರವಿಕಿರಣ್, ಯೋಗೀಶ್ ಶೆಟ್ಟಿ ಬಾಲಾಜಿ, ಕೃಷ್ಣ ಪ್ರಸಾದ್ ಅಡ್ಯಂತಾಯ, ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಹರಿಯಪ್ಪ ಕೋಟ್ಯಾನ್, ಅಶೋಕ್ ಕುಮಾರ್ ಶೆಟ್ಟಿ, ಕೆ.ವಿಶ್ವನಾಥ್, ಸಂದೀಪ್ ಕುಮಾರ್ ಮಂಜ, ಸುವರ್ಧನ ನಾಯಕ್, ಗೀತಾಂಜಲಿ ಎಂ.ಸುವರ್ಣ, ಸಾವಿತ್ರಿ ಗಣೇಶ್, ವ್ಯವಸ್ಥಾಪನಾ ಸಮಿತಿ, ಅಭಿವೃದ್ಧಿ ಸಮಿತಿ, ಮುಂಬಯಿ ಸಮಿತಿ ಸಹಿತ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.