ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಭಕ್ತರೆಲ್ಲರ ಸಹಕಾರ, ದೇಣಿಗೆಯೊಂದಿಗೆ ನಿರ್ಮಾಣಗೊಳ್ಳುವ ದೇವಸ್ಥಾನಗಳಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಬಳಿಕವೂ ಪುರಾತನ ಧಾರ್ಮಿಕತೆ ಮತ್ತು ಪರಂಪರೆ ಉಳಿಸಿಕೊಂಡು ಬರುವುದು ಇಂದಿನ ಅಗತ್ಯವಾಗಿದೆ. ಮನುಷ್ಯನ ದೇಹದಷ್ಟೇ ದೇವಸ್ಥಾನಕ್ಕೂ ಮಹತ್ವವಿದೆ ಎಂದು ವಾಸ್ತು ತಜ್ಞ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಹೇಳಿದರು.
ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಅಂಗವಾಗಿ ಸೋಮವಾರ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.
ಆಯಕ್ಕೆ ಅನುಗುಣವಾಗಿ ಮೂಡಿಬಂದ ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಾದರಿಯಾಗಿದೆ ಎಂದರು.
ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಮಂಜಿತ್ತಾಯ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು. ಜೀರ್ಣೋದ್ಧಾರ ಕಾರ್ಯಗಳಲ್ಲಿ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪಾಂಡುರಂಗ ಶಾನುಭಾಗ್ ಕರಂದಾಡಿ ಅಧ್ಯಕ್ಷತೆ ವಹಿಸಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತ್ಯಜಿತ್ ಶೆಟ್ಟಿ ಕರಂದಾಡಿಗುತ್ತು, ಎಂ.ದಿವಾಕರ ಶೆಟ್ಟಿ, ಮಜೂರು ಗ್ರಾಪಂ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು, ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲಕ್ಷ್ಮೀಶ ಭಟ್, ಗೌರವ ಸಲಹೆಗಾರ ಶಿಬರೂರು ಯಾದವಕೃಷ್ಣ ಶೆಟ್ಟಿ, ರಮೇಶ್ ಕೋಟಿ ಹಾಡಿಮನೆ, ವಿಜಯ ಶೆಟ್ಟಿ ಕಾರ್ಕಳ, ಶಶಿಧರ ಶೆಟ್ಟಿ, ಕಾಪು ಶ್ರೀ ವೆಂಕಟರಮಣ ಮತ್ತು ಶ್ರೀ ಹಳೇ ಮಾರಿಗುಡಿ ದೇವಸ್ಥಾನ ಮಾಜಿ ಮೊಕ್ತೇಸರ ಶ್ರೀಧರ ಶೆಣೈ, ದಯಾನಂದ ಶೆಟ್ಟಿ ಬೋಳ, ರತ್ನಾಕರ ಶೆಟ್ಟಿ ಕರಂದಾಡಿ, ವಿಠಲ ಶೆಟ್ಟಿ ಪಡುಬರ್ಪಾಣಿ, ಮೋಹನ ಶೆಟ್ಟಿ ಬರ್ಪಾಣಿ, ಪ್ರೇಮನಾಥ್ ಶೆಟ್ಟಿ ಗುಡ್ಡಶೆಟ್ರ ಮನೆ, ಧರ್ಮೇಂದ್ರ ಶೆಟ್ಟಿ ಸಾಂಗ್ಲಿ, ನಿರಂಜನ್ ಶೆಟ್ಟಿ, ರವಿರಾಜ್ ಶೆಟ್ಟಿ, ಶರ್ಮಿಳಾ ಜೆ.ಆಚಾರ್ಯ ಉಪಸ್ಥಿತರಿದ್ದರು.
ಕೆ.ವಾಸುದೇವ ರಾವ್ ಕರಂದಾಡಿ ಸ್ವಾಗತಿಸಿದರು. ಪದ್ಮನಾಭ ಶಾನುಭಾಗ್ ಕರಂದಾಡಿ ಪ್ರಸ್ತಾವನೆಗೈದರು. ನಾಗಭೂಷಣ ರಾವ್ ವಂದಿಸಿದರು. ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.