ಯೂಕ್ರೇನ್​ ನೆರವಿಗೆ ಬಂದ ನ್ಯಾಟೋ, ಮಹಾಸಮರ ತುರುಸು: ಆಪರೇಷನ್​ ಗಂಗಾ ಶುರು

ganga
Published on

ರಷ್ಯಾ ಮಾರಕ ದಾಳಿಯಿಂದ ತತ್ತರಿಸಿರುವ ಯೂಕ್ರೇನ್​ ಬೆಂಬಲಕ್ಕೆ ನ್ಯಾಟೋ ಪಡೆ ಸೇರಿದಂತೆ 27 ರಾಷ್ಟ್ರಗಳು ಧಾವಿಸಿವೆ. ಇದರಿಂದ ಸಮರ ಇನ್ನಷ್ಟು ತುರುಸುಗೊಂಡಿದೆ. ಹಲವು ಯೋಧರು, ನಾಗರಿಕರ ಸಾವು ಹಾಗೂ ಆಸ್ತಿಪಾಸ್ತಿ ಹಾನಿ ಬಳಿಕ ಕದನ ವಿರಾಮದ ಮಾತನಾಡಿದ್ದ ಯೂಕ್ರೇನ್​ ವಿವಿಧ ದೇಶಗಳ ಬೆಂಬಲದಿಂದಾಗಿ ಯುದ್ಧೋತ್ಸಾಹ ಪ್ರದಶಿರ್ಸಿದೆ. ಇನ್ನು ಯುದ್ಧಪಿಡಿತ ಯೂಕ್ರೇನ್​ನಿಂದ ಭಾರತೀಯರ ಏರ್​ಲಿಫ್ಟ್‌ ಕಾರ್ಯಾಚರಣೆಗೆ ಚಾಲನೆ ಸಿಕ್ಕಿದ್ದು, ಮೊದಲ ತಂಡ ವಿಶೇಷ ವಿಮಾನದ ಮೂಲಕ ಬಂದಿಳಿದಿದೆ.

ಮುಂಬೈ: ಯೂಕ್ರೇನ್​ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ಪೈಕಿ 219 ಜನರ ಮೊದಲ ತಂಡ ಶನಿವಾರ ರಾತ್ರಿ ಮುಂಬೈಗೆ ಬಂದಿಳಿಯಿತು. "ಆಪರೇಷನ್​ ಗಂಗಾ' ಹೆಸರಿನ ಈ ಕಾರ್ಯಾಚರಣೆಯಲ್ಲಿ ಭಾರತೀಯರನ್ನು ಹೊತ್ತ ಏರ್​ ಇಂಡಿಯಾ ವಿಮಾನ ರೊಮಾನಿಯಾದ ರಾಜಧಾನಿ ಬುಚಾರೆಸ್ಟ್​ನಿಂದ ಮುಂಬೈಗೆ ಆಗಮಿಸಿತು. ಇನ್ನೆರಡು ವಿಮಾನಗಳು ಕೂಡ ಸ್ಥಳಾಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಈ ಪೈಕಿ ಒಂದು ವಿಮಾನ ಬುಚಾರೆಸ್ಟ್​ ನಿಂದ, ಇನ್ನೊಂದು ವಿಮಾನ ಹಂಗರಿಯ ರಾಜಧಾನಿ ಬುಡಾಪೆಸ್ಟ್​ ನಿಂದ ಹೊರಡಲಿದೆ. ಶನಿವಾರ ತಡರಾತ್ರಿ ಅಥವಾ ಭಾನುವಾರ ಬೆಳಗ್ಗೆ ಭಾರತ ತಲುಪಲಿವೆ. ಯೂಕ್ರೇನ್​ನಲ್ಲಿ 16,000 ಭಾರತೀಯರಿದ್ದಾರೆ. ಈ ಪೈಕಿ ಬಹುತೇಕರು ವಿದ್ಯಾಥಿರ್ಗಳಾಗಿದ್ದಾರೆ.

ಗೋಯೆಲ್​ ಸ್ವಾಗತ: ವಿಮಾನ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಕೇಂದ್ರ ಸಚಿವ ಪಿಯೂಷ್​ ಗೋಯೆಲ್​ ವಿಮಾನ ಪ್ರವೇಶಿಸಿ ಭಾರತೀಯರನ್ನು ಬರಮಾಡಿಕೊಂಡರು. "ಯೂಕ್ರೇನ್​ನಲ್ಲಿರುವ ಎಲ್ಲ ಭಾರತೀಯರನ್ನು ವಾಪಸ್​ ಕರೆತರುವ ಪ್ರಯತ್ನ ಶುರುವಾಗಿದೆ. ಯೂಕ್ರೇನ್​ನಲ್ಲಿ ಬಾಕಿ ಉಳಿದವರಿಗೂ ಸರ್ಕಾರದ ಕಾರ್ಯದ ಬಗ್ಗೆ ತಿಳಿಸಿ ಧೈರ್ಯ ತುಂಬುವ ಕೆಲಸವನ್ನು ನೀವು ಮಾಡಬೇಕು. ಅವರನ್ನೂ ಹಂತ ಹಂತವಾಗಿ ಸ್ಥಳಾಂತರಿಸುವ ಕೆಲಸ ಮುಂದುವರಿಯಲಿದೆ. ರಷ್ಯಾ, ಯೂಕ್ರೇನ್​, ಸುತ್ತಮುತ್ತಲಿನ ರಾಷ್ಟ್ರಗಳು ಈ ನಿಟ್ಟಿನಲ್ಲಿ ನೆರವು ನೀಡುತ್ತಿವೆ' ಎಂದು ಗೋಯೆಲ್​ ಹೇಳಿದರು.

ಸ್ಮಶಾನವಾದ ಕಿಯೆವ್​

ಯೂಕ್ರೇನ್​ ರಾಜಧಾನಿ ಕಿಯೆವ್​ನಲ್ಲಿ ಶುಕ್ರವಾರ ತಡರಾತ್ರಿ ಗಗನಚುಂಬಿ ಅಪಾರ್ಟ್​ಮೆಂಟ್​ಗೆ ಪಣಿ ಬಡಿದು ಐದು ಅಂತಸ್ತುಗಳು ಹಾನಿಗೀಡಾಗಿವೆ. ರಷ್ಯಾ ದಾಳಿಗೆ ಇದುವರೆಗೆ 198 ಜನ ಮೃತಪಟ್ಟಿದ್ದಾರೆ. 1115 ಜನ ಗಾಯ ಗೊಂಡಿದ್ದು, ಈ ಪೈಕಿ 33 ಮಕ್ಕಳು ಸೇರಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಭಾರತ, ಚೀನಾ ತಟಸ್ಥ

ಯೂಕ್ರೇನ್​ ಮೇಲಿನ ದಾಳಿ ನಿಲ್ಲಿಸುವಂತೆ ಹಾಗೂ ತನ್ನೆಲ್ಲ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ರಷ್ಯಾವನ್ನು ಒತ್ತಾಯಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶನಿವಾರ ನಿರ್ಣಯ ಅಂಗೀಕರಿಸುವುದಕ್ಕೆ ತುರ್ತು ಸಭೆ ನಡೆಯಿತು. ಭಾರತ, ಚೀನಾ ಹಾಗೂ ಯುಎಇ ಮತದಾನದಿಂದ ದೂರ ಉಳಿಯುವ ಮೂಲಕ ತಟಸ್ಥ ನಿಲುವು ಕೈಗೊಂಡವು. ವಿಶ್ವಸಂಸ್ಥೆಯಲ್ಲಿ ಕಾಯಂ ಸದಸ್ಯತ್ವ, ವಿಟೋ ಅಧಿಕಾರ ಹೊಂದಿರುವ ರಷ್ಯಾ ವಿರುದ್ಧ ಅಮೆರಿಕ, ಅಲ್ಬೇನಿಯ ಸಲ್ಲಿಸಿದ್ದ ನಿರ್ಣಯವನ್ನು ಮತದಾನಕ್ಕೆ ಹಾಕಲಾಯಿತು. ರಷ್ಯಾ ತನ್ನ ವಿಟೋ ಅಧಿಕಾರ ಚಲಾಯಿಸಿ ನಿರ್ಣಯವನ್ನು ತಡೆದಿದೆ.

ಯೂಕ್ರೇನ್​ನಲ್ಲಿ ಟ್ರಾಫಿಕ್​ಜಾಮ್​ ಸಮಸ್ಯೆ

ಚಿತ್ರದುರ್ಗ: ರೂಮ್​ನಲ್ಲೇ ಇದ್ದೇನೆ, ಭಾರತದ ರಾಯಭಾರಿ ಕಚೇರಿಯವರು ಹೊರಬರದಂತೆ ಸೂಚಿಸುತ್ತಿದ್ದಾರೆ ಎಂದು ಚಳ್ಳಕೆರೆ ತಾಲೂಕು ಜಾಜೂರಿನ ಎಂ.ವಿ. ನಿತೀಶ್​ಕುಮಾರ್​ ಹೇಳಿದರು. ಎಂಬಿಬಿಎಸ್​ ವಿದ್ಯಾಥಿರ್ ನಿತೀಶ್​, ಯೂಕ್ರೇನ್​ನಿಂದ ವಿಜಯವಾಣಿ ಯೊಂದಿಗೆ ಮಾತನಾಡಿ, ನಾನಿರುವ ಸ್ಥಳದಿಂದ ಪೋಲೆಂಡ್​ಗೆ ಹೋಗಬೇಕೆಂದರೆ 500 ಕಿ.ಮೀ. ಆಗುತ್ತದೆ. ರೊಮೆನಿಯಾ 350 ಕಿ.ಮೀ. ದೂರದಲ್ಲಿದೆ. ಈ ಸ್ಥಳಗಳ ಪೈಕಿ ಒಂದನ್ನು ತಲುಪಲು ಬಸ್​ ಅಥವಾ ಯಾವುದೇ ವಾಹನದಲ್ಲಿ ಹೋಗಲು ಟ್ರಾಫಿಕ್​ಜಾಮ್​ ಸಮಸ್ಯೆಯಿಂದ ಸಾಧ್ಯವಾಗುತ್ತಿಲ್ಲ. ಮಾರ್ಗಮಧ್ಯೆ ಒಂದೊಂದು ಕಡೆ ಕನಿಷ್ಠ 2&3 ತಾಸು ಕಾಯಬೇಕಾಗುತ್ತದೆ. ನೀರು, ಆಹಾರದ ಸಮಸ್ಯೆ ಕೂಡ ಎದುರಾಗುತ್ತಿದೆ. ಆದರೂ ಧೈರ್ಯಗೆಟ್ಟಿಲ್ಲ. ಸೈರನ್​ ಸದ್ದು ಕೇಳುತ್ತಿದ್ದಂತೆ ಬಂಕರ್​ ಸೇರಿಕೊಳ್ಳಬೇಕೆಂದು ಪೊಲೀಸರು ಸೂಚಿಸುತ್ತಿದ್ದಾರೆ ಎಂದರು.

ತಹಶೀಲ್ದಾರ್​ ಭೇಟಿ: ಹಿರಿಯೂರು ತಾಲೂಕಿನ ಪಟ್ರೇಹಳ್ಳಿ ವಿಷ್ಣು ಹಾಗೂ ಹಿರಿಯೂರು ನಗರದ ಶಕ್ತಿಶ್ರೀ ಮನೆಗಳಿಗೆ ತಹಸೀಲ್ದಾರ್​ ಶಿವಕುಮಾರ್​ ಹಾಗೂ ಜಾಜೂರು ವಿದ್ಯಾಥಿರ್ ಮನೆಗೆ ಚಳ್ಳಕೆರೆ ತಹಸೀಲ್ದಾರ್​ ರುಮೂತಿರ್ ಭೇಟಿ ನೀಡಿ, ವಿದ್ಯಾಥಿರ್ಗಳ ಪಾಲಕರಿಗೆ ಧೈರ್ಯ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net