ಗಂಗೊಳ್ಳಿ: ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದಲ್ಲಿ ಯುವ ಆಯೋಗದ ನೇತೃತ್ವದಲ್ಲಿ ರಾಷ್ಟ್ರೀಯ ಯುವಜನ ದಿನಾಚರಣೆ ಇತ್ತೀಚೆಗೆ ನಡೆಯಿತು. ಪ್ರಧಾನಗುರು ನೆಲ್ಸನ್ ಪಿಂಟೋ ಬಲಿಪೂಜೆ ನೆರವೇರಿಸಿದರು. ಧರ್ಮಗುರು ಎಡ್ವಿನ್ ಡಿಸೋಜ ಶುಭಹಾರೈಸಿದರು. ಬಸ್ರೂರು ಸಂತ ಫಿಲಿಪ್ ನೇರಿ ದೇವಾಲಯದ ರೊಯ್ ಲೋಬೊ ಮತ್ತು ರಿಜಿನಾಲ್ಡ್ ಪಿಂಟೋ ಆಶೀರ್ವಚನ ನೀಡಿದರು.
ರಾಷ್ಟ್ರ ಮಟ್ಟದ ಯುವ ತರಬೇತಿಯಲ್ಲಿ ಭಾಗವಹಿಸಿದ ಆಶಿಕಾ ಆಳ್ವ, ಆಡೋರಿಯನ್ ಮೆಂಡೋನ್ಸ ಹಾಗೂ ಪ್ರಿನ್ಸನ್ ಪಸನ್ನ, ಜೆನಿಫರ್ ಲೋಬೊ, ವಿನಿತಾ ಮೆಂಡೋನ್ಸ ಹಾಗೂ ಅನಿಶಾ ಮೆಂಡೋನ್ಸ, ರೋನ್ಸನ್ ಮಿನೆಜಸ್, ಜೋನಿಟಾ ಮೆಂಡೋನ್ಸ, ನೀತಾ ಮೆಂಡೋನ್ಸ ಹಾಗೂ ಜಾನ್ಸನ್ ಮಿನೆಜೆಸ್, ಜೂಡಿತ್ ಮೆಂಡೋನ್ಸ, ರಾಜೇಶ್ ಮೆಂಡೋನ್ಸ ಹಾಗೂ ಅಮಿತ್ ಅವರನ್ನು ಸನ್ಮಾನಿಸಲಾಯಿತು.