

ಹೆಬ್ರಿ: ಚಾರ ಮೆಲ್ಬೇಟ್ಟು ಇತಿಹಾಸ ಪ್ರಸಿದ್ಧ ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರಡಿ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಇತ್ತೀಚೆಗೆ ಸಮಿತಿಯವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮುಷ್ಟಿ ಕಾಣಿಕೆ ಸಮರ್ಪಿಸಿದರು.
ಪ್ರಶ್ನಾಚಿಂತನೆಯಲ್ಲಿ ಕೇಳಿ ಬಂದ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ, ಚಾರ ಮಹಿಷಮರ್ದಿನಿ ದೇವಸ್ಥಾನ ಮತ್ತು ಗರಡಿಯಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ಮುಷ್ಟಿ ಕಾಣಿಕೆ ಸರ್ಮಪಿಸಲಾಯಿತು.
ಗರಡಿ ಪರಿಚಾರಕ ವರ್ಗದವರು, ಗ್ರಾಮ ಪುರೋಹಿತರು, ಗುತ್ತಿನ ಮನೆಯವರು, ವಿವಿಧ ಸಮಿತಿ ಮುಖ್ಯಸ್ಥರು, ಪ್ರಮುಖರು, ಗಣ್ಯರು, ದಾನಿಗಳು, ಚಾರ ಮೆಲ್ಬೇಟ್ಟು ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಗೌರವಾಧ್ಯಕ್ಷ ಹರ್ಷ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ, ಆರ್ಥಿಕ ಸಮಿತಿ ಅಧ್ಯಕ್ಷ ವಾದಿರಾಜ ಶೆಟ್ಟಿ, ಆನುವಂಶಿಕ ಆಡಳಿತ ಮೊಕ್ತೇಸರ ತಾರಾಳಿ ಸುರೇಶ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.