ಸ್ವಚ್ಛತೆಗಿಂತ ವೇಗವಾಗಿ ಬೆಳೆಯುವ ಮಾಲಿನ್ಯ : ತೇಜಸ್ವಿನಿ ಅನಂತ ಕುಮಾರ್ ವಿಷಾದ

national seminar
ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶನಿವಾರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅದಮ್ಯ ಚೇತನ ಫೌಂಡೇಷನ್‌ನ ಸಂಸ್ಥಾಪಕಿ ತೇಜಸ್ವಿನಿ ಅನಂತ ಕುಮಾರ್ ಉದ್ಘಾಟಿಸಿದರು.
Published on

ಬಂಟ್ವಾಳ: ಸ್ವಚ್ಛತೆ ಜಗತ್ತಿನಲ್ಲಿ ಹೆಚ್ಚು ಚರ್ಚೆ ಆಗುತ್ತಿರುವ ವಿಚಾರ. ಆದರೆ ಮಾಲಿನ್ಯ ಅದಕ್ಕೂ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿದೆ ಎಂದು ಅದಮ್ಯ ಚೇತನ ಫೌಂಡೇಷನ್‌ನ ಸಂಸ್ಥಾಪಕಿ ತೇಜಸ್ವಿನಿ ಅನಂತ ಕುಮಾರ್ ಹೇಳಿದರು.

ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶನಿವಾರ ಸ್ವಸ್ಥ ಭಾರತಕ್ಕಾಗಿ ಸ್ವಚ್ಛ ಪರಿಸರ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕಸದ ಬುಟ್ಟಿಗೆ ಕಸ ಹಾಕುವುದೇ ದೊಡ್ಡ ಸಾಧನೆ ಎನ್ನುವಂತೆ ಜೀವನ ಸಾಗುತ್ತಿದೆ. ಕಸ ಸೃಷ್ಟಿಯಾಗದಂತೆ ಎಚ್ಚರ ವಹಿಸುವ ಅನಿವಾರ್ಯತೆ ಬಂದಿದೆ. ಪರಿಸರದ ಮೇಲೆ ಮಾನವನ ದಬ್ಬಾಳಿಕೆ ನಿರಂತರವಾಗಿ ನಡೆಯುತ್ತಿದೆ, ಅದನ್ನು ಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲದೆ ಇದ್ದರೂ ಹೇಗೆ ಕಡಿಮೆ ಮಾಡಬಹುದು ಎನ್ನುವ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಸ್ವಚ್ಛ ಪರಿಸರ ಪುಸ್ತಕಕ್ಕೆ ಸೀಮಿತವಾಗಿ ಜೀವನದಲ್ಲಿ ಅನುಷ್ಠಾನವಾಗುತ್ತಿಲ್ಲ. ವಿಶ್ವಕ್ಕೆ ಮಾದರಿಯಾಗುವಂಥ ಪ್ರತಿಭೆ, ಅವಕಾಶ ಭಾರತದಲ್ಲಿದೆ. ಆದರೆ ಮಾದರಿಯಾಗಬೇಕಾದ ನಾವೇ ಭೂಮಿ ತಾಯಿಯನ್ನು ಅನಾಥ ಮಾಡುವ ಸ್ಥಿತಿ ನಿರ್ಮಾಣ ಮಾಡುತ್ತೇವೆಯೋ ಎನ್ನುವ ಆತಂಕವೂ ಎದುರಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಪ್ರಭಾಕರ ಭಟ್ ಪ್ರಾಸ್ತವಿಸಿದರು. ಪ್ರಕೃತಿಯಲ್ಲಿರುವ ಪ್ರಾಣಿ, ಪಕ್ಷಿಗಳನ್ನು. ಗಿಡ ಮರಗಳ ರಕ್ಷಣೆ ಮಾಡಬೇಕಾದುದು ಮನುಷ್ಯನ ಕರ್ತವ್ಯ. ಪರಿಸರ ಉಳಿದರೆ ನಾವು ಉಳಿಯುತ್ತೇವೆ. ಸ್ವಸ್ಥ ಜಗತ್ತಿಗಾಗಿ ಪರಿಸರ ಉಳಿಸುವ ಕಾರ್ಯ ಆಗಬೇಕಿದೆ. ಪರಿಸರ ಉಳಿಸುವುದು ದೇವರ ಕೆಲಸ ಎಂದರು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷ ನಾರಾಯಣ ಸೋಮಾಯಜಿ ಅಧ್ಯಕ್ಷತೆ ವಹಿಸಿದ್ದರು. ಪರಿಸರ ಚಿಂತಕ ಶಿವಾನಂದ ಕಳವೆ, ಸಾವಯವ ಕೃಷಿಕ ವಸಂತ ಕಜೆ, ಕರ್ನಾಟಕ ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರದ ನಿಕಟಪೂರ್ವಾಧ್ಯಕ್ಷ ಡಾ.ಕೆ.ಆರ್. ಶ್ರೀಹರ್ಷ, ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ, ಪರ್ಯಾವರಣ ಸಂರಕ್ಷಣ ಗತಿವಿಧಿ ಪ್ರಾಂತ ಸಂಯೋಜಕ್ ವೆಂಕಟೇಶ್ ಸಂಗನಾಳ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ಕಟ್ಟೆ ಸ್ವಾಗತಿಸಿ, ಪ್ರತೀಕಾ ಕಾರ್ಯಕ್ರಮ ನಿರೂಪಿಸಿದರು.

ಪ್ರಕೃತಿಯಲ್ಲಿರುವ ಪ್ರಾಣಿ, ಪಕ್ಷಿಗಳನ್ನು. ಗಿಡ ಮರಗಳ ರಕ್ಷಣೆ ಮಾಡಬೇಕಾದುದು ಮನುಷ್ಯನ ಕರ್ತವ್ಯ. ಪರಿಸರ ಉಳಿದರೆ ನಾವು ಉಳಿಯುತ್ತೇವೆ. ಸ್ವಸ್ಥ ಜಗತ್ತಿಗಾಗಿ ಪರಿಸರ ಉಳಿಸುವ ಕಾರ್ಯ ಆಗಬೇಕಿದೆ. ಪರಿಸರ ಉಳಿಸುವುದು ದೇವರ ಕೆಲಸ.- ಡಾ.ಪ್ರಭಾಕರ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net