More

    ರಾಯಿ ಸರ್ಕಾರಿ ಶಾಲೆಯಲ್ಲಿ ಪ್ರಾರಂಭೋತ್ಸವ

    ಬಂಟ್ವಾಳ: ಇಲ್ಲಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭೋತ್ಸವ ಶುಕ್ರವಾರ ನಡೆಯಿತು. ವಿದ್ಯಾರ್ಥಿಗಳಿಗೆ ಹೂವು ಮತ್ತು ಬೆಲೂನ್ ನೀಡಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

    ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಸಮವಸ್ತ್ರ, ಬ್ಯಾಗ್, ಕೊಡೆ ವಿತರಿಸಲಾಯಿತು. ದಾನಿ ಮನೋಜ್ ಶೆಟ್ಟಿ ಹೊಕ್ಕಾಡಿಗೋಳಿ ಉಚಿತ ಪುಸ್ತಕ ಹಸ್ತಾಂತರಿಸಿದರು.

    ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ ಗೌಡ, ವಿವೇಕಾನಂದ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಹರೀಶ ಆಚಾರ್ಯ ರಾಯಿ, ಟ್ರಸ್ಟಿ ಮಧುಕರ ಬಂಗೇರ, ನಿವೃತ್ತ ಶಿಕ್ಷಕ ಸೋಮಪ್ಪ ಮಡಿವಾಳ, ಪ್ರಮುಖರಾದ ವಸಂತ ಗೌಡ ಮುದ್ದಾಜೆ, ಹೇಮಾ ಎಚ್.ರಾವ್, ಪ್ರವೀಣ ಅಂಚನ್ ಕೊಯಿಲ, ಮೋಹನ್ ಕೆ.ಶ್ರೀಯಾನ್ ರಾಯಿ, ಪದ್ಮನಾಭ ಕಲ್ಲೇರಿ, ಶಿಕ್ಷಕ ಸಿದ್ಧಪ್ಪ ಕಡೂರು ಮತ್ತಿತರರು ಇದ್ದರು. ಮುಖ್ಯಶಿಕ್ಷಕಿ ಜಾನೆಟ್ ಕಾನ್ಸೆಸೊ ಸ್ವಾಗತಿಸಿ, ಸಹಶಿಕ್ಷಕಿ ಬೇಬಿ ಅರಳ ವಂದಿಸಿದರು.

    See also  ಕನ್ನಡ ಭಾಷಾ ಸಾಹಿತ್ಯಕ್ಕೆ ಅಪಾರ ಕೊಡುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts