ಕಳೆದ ವರ್ಷ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್‌ಗಳನ್ನು 75 ರೂಪಾಯಿಗಳಿಗೆ ಮಾರಾಟ ಮಾಡಿ ‘ನ್ಯಾಷನಲ್ ಸಿನಿಮಾ ಡೇ’ಯನ್ನು ಆಚರಿಸಲಾಗಿತ್ತು.
ದೊಡ್ಡ ಪರದೆಯಲ್ಲಿ ಸಿನಿಮಾ ನೋಡುವ ಅನುಭವವೇ ಬೇರೆ. ಆದರೆ ದುಬಾರಿ ಬೆಲೆ ಎಂಬ ಕಾರಣಕ್ಕೆ ಅನೇಕರು ಮಲ್ಟಿಪ್ಲೆಕ್ಸ್ಗೆ ಬರಲು ಹಿಂದೇಟು ಹಾಕುವುದುಂಟು. ಈಗ ‘ನ್ಯಾಷನಲ್ ಸಿನಿಮಾ ಡೇ’ ಪ್ರಯುಕ್ತ 99 ರೂಪಾಯಿಗೆ ಎಲ್ಲ ಸಿನಿಮಾಗಳ ಟಿಕೆಟ್ ಸಿಗುವುದರಿಂದ ಅಂದು ಬಹುತೇಕ ಕಡೆಗಳಲ್ಲಿ ಹೌಸ್ ಫುಲ್ ಆಗುವ ಸಾಧ್ಯತೆ ಇದೆ.
ಶಾರುಖ್ ಖಾನ್, ಸನ್ನಿ ಡಿಯೋಲ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಸಾಯಿ ಧರಂ ತೇಜ್, ಟೊವಿನೋ ಥಾಮಸ್ ಮುಂತಾದ ನಟರ ಸಿನಿಮಾಗಳು ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ತೆರೆಕಂಡಾಗ ಎಲ್ಲವನ್ನೂ ಚಿತ್ರಮಂದಿರಕ್ಕೆ ಹೋಗಿ ನೋಡುವುದು ಕಷ್ಟ. ಯಾಕೆಂದರೆ ಟಿಕೆಟ್ ದರ ದುಬಾರಿ ಆಗಿರುತ್ತದೆ. ಅದರಲ್ಲೂ ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ನೋಡುವುದರಿಂದ ಜೇಬಿಗೆ ದೊಡ್ಡ ಕತ್ತರಿಯೇ ಅಂದುಕೊಳ್ಳುವವರಿಗಾಗಿಯೇ ಆಫರ್ ನೀಡಲಾಗಿದೆ. ‘ನ್ಯಾಷನಲ್ ಸಿನಿಮಾ ಡೇ’ ಆಚರಣೆಯ ಪ್ರಯುಕ್ತ ಕೇವಲ 99 ರೂಪಾಯಿಗೆ ಸಿನಿಮಾ ಟಿಕೆಟ್ ಮಾರಲಾಗುತ್ತಿದೆ.
ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲು ಕೆಲವು ಪ್ಲ್ಯಾನ್ ಮಾಡಲಾಗಿತ್ತು. ಅದರಲ್ಲಿ ‘ನ್ಯಾಷನಲ್ ಸಿನಿಮಾ ಡೇ’ ಆಚರಣೆ ಕೂಡ ಪ್ರಮುಖವಾದದ್ದು. ಒಂದು ನಿರ್ದಿಷ್ಟ ದಿನದಂದು ದೇಶಾದ್ಯಂತ ಬಹುತೇಕ ಮಲ್ಟಿಪ್ಲೆಕ್ಸ್ ಮತ್ತು ಆಯ್ದ ಚಿತ್ರಮಂದಿರಗಳಲ್ಲಿ ಎಲ್ಲ ಸಿನಿಮಾಗಳ ಟಿಕೆಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದು ಇದರ ಉದ್ದೇಶ.
ಈ ವರ್ಷ ಅಕ್ಟೋಬರ್ 13ರಂದು ‘ನ್ಯಾಷನಲ್ ಸಿನಿಮಾ ಡೇ’ ಆಚರಿಸಲಾಗುತ್ತದೆ. ಅದರಲ್ಲಿ ಪಿವಿಆರ್, ಐನಾಕ್ಸ್, ಸಿನಿಪೊಲಿಸ್, ಮಿರಾಜ್, ಸಿಟಿಪ್ರೈಡ್, ಏಷ್ಯನ್, ಮೂವೀ ಟೈನ್ ಮುಂತಾದ ಮಲ್ಟಿಪ್ಲೆಕ್ಸ್ಗಳು ಇದರಲ್ಲಿ ಭಾಗವಹಿಸುತ್ತಿವೆ. ಅ.13ರಂದು ದೇಶಾದ್ಯಂತ ಎಲ್ಲ ಸಿನಿಮಾಗಳ ಟಿಕೆಟ್ಗಳು ಕೇವಲ 99 ರೂಪಾಯಿಗೆ ಸಿಗಲಿವೆ. ಅಂದು ತಿಂಡಿ ಮತ್ತು ಪಾನೀಯಗಳ ಬೆಲೆಯಲ್ಲೂ ಇಳಿಕೆ ಮಾಡಲಾಗುತ್ತದೆ. ಇದರಿಂದ ಸಿನಿಪ್ರಿಯರಿಗೆ ಅನುಕೂಲ ಆಗಲಿದೆ.
ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿವೆ. ಆದರೆ ದುಬಾರಿ ಬೆಲೆ ಎಂಬ ಕಾರಣಕ್ಕೆ ಅನೇಕರು ಮಲ್ಟಿಪ್ಲೆಕ್ಸ್ಗೆ ಬರಲು ಹಿಂದೇಟು ಹಾಕುವುದುಂಟು. ಈಗ ‘ನ್ಯಾಷನಲ್ ಸಿನಿಮಾ ಡೇ’ ಪ್ರಯುಕ್ತ 99 ರೂಪಾಯಿಗೆ ಟಿಕೆಟ್ ಸಿಗುವುದರಿಂದ ಅಂದು ಬಹುತೇಕ ಕಡೆಗಳಲ್ಲಿ ಹೌಸ್ ಫುಲ್ ಆಗುವ ಸಾಧ್ಯತೆ ಇದೆ.