ಹೃದಯ ಗೆದ್ದ ಪಾಂಡ್ಯ-ನತಾಶಾ ಸೆಲ್ಫಿ!

web_v
Published on

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಭಾವಿ ಪತ್ನಿ, ನಟಿ ಹಾಗೂ ರೂಪದರ್ಶಿ ನತಾಶಾ ಸ್ಟಾಂಕೋವಿಕ್ ಜತೆಗೆ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ಈಗ ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳ ‘ಹೃದಯ’ ಗೆದ್ದಿದೆ!

2020ರ ಮೊದಲ ದಿನವೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಲಾಕ್‌ಡೌನ್ ಸಮಯದಲ್ಲಿ ಈಗಾಗಲೆ ಗ್ಲಾಮರಸ್ ಪೋಸ್ಟ್‌ಗಳ ಮೂಲಕ ಅಭಿಮಾನಿಗಳ ಗಮನಸೆಳೆಯುತ್ತಿದೆ. ಹಾರ್ದಿಕ್‌ಗೆ ಕಿಸ್ ನೀಡುತ್ತಿರುವಾಗ ಕ್ಲಿಕ್ಕಿಸಿಕೊಂಡ ಸೆಲ್ಫಿಯನ್ನು ನತಾಶಾ ಭಾನುವಾರ ಇನ್ಸ್‌ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಅದರ ಬೆನ್ನಲ್ಲೇ ಪಾಂಡ್ಯ, ಹಾರ್ಟ್ ಇಮೋಜಿಯೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಕೆಲವೇ ಕ್ಷಣಗಳಲ್ಲಿ ಅವರ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ಕಮೆಂಟ್‌ಗಳು ಹರಿದುಬಂದಿವೆ.

ನಿಮ್ಮಿಬ್ಬರ ಜೋಡಿ ಅಪೂರ್ವವಾಗಿದೆ, ಅಮೋಘವಾಗಿದೆ, ಪ್ರೀತಿಪಾತ್ರವಾಗಿದೆ ಎಂದೆಲ್ಲ ಬಣ್ಣನೆಗಳ ಕಮೆಂಟ್‌ಗಳು ಅಭಿಮಾನಿಗಳಿಂದ ಬಂದಿದೆ. ಇತ್ತೀಚೆಗೆ ಹಾರ್ದಿಕ್ ಅಣ್ಣ ಹಾಗೂ ಕ್ರಿಕೆಟಿಗ ಕೃನಾಲ್ ಪಾಂಡ್ಯ ಜತೆಗೆ ಕರೋಕೆ ಸಂಗೀತಕ್ಕೆ ಹಿಂದಿ ಹಾಡು ಹಾಡಿ ಸಾಕಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net