More

    ಪಾಂಡ್ಯ ಅಭಿಮಾನಿಗಳ ಗಮನಸೆಳೆಯುತ್ತಿವೆ ನತಾಶಾ ಬೇಬಿ ಬಂಪ್​ ಪೋಸ್​

    ಬೆಂಗಳೂರು: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ಡ್ಯಾನ್ಸರ್​ ನತಾಶಾ ಸ್ಟ್ಯಾಕೊವಿಕ್​ ಜೋಡಿ ಶೀಘ್ರವೇ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಲಾಕ್​ಡೌನ್​ನಿಂದಾಗಿ ಸರಳವಾಗಿ ಮದುವೆಯಾದ ಈ ಜೋಡಿ, ಸೀಮಂತ ಕಾರ್ಯವನ್ನು ಇತ್ತೀಚೆಗೆ ಮುಗಿಸಿತ್ತು. ಇದೀಗ ನತಾಶಾ ಬೇಬಿ ಬಂಪ್​  ಪೋಸ್​ ನೀಡಿದ್ದಾರೆ. ಸರಳವಾಗಿ ಜೀವಿಸಿ, ಹೆಚ್ಚೆಚ್ಚು ಪ್ರೀತಿಸಿ, ನಿರಂತರವಾಗಿ ಕಲಿಯಿರಿ ಎಂದು ಬರೆದುಕೊಳ್ಳುವ ಮೂಲಕ ತಾಯ್ತನ ಹಂಬಲವನ್ನು ಹೊರಹಾಕಿದ್ದಾರೆ. ಮತ್ತೊಂದು ಪೋಸ್ಟ್ ನಲ್ಲಿ ಹ್ಯಾಪಿನೆಸ್ ಆನ್ ದ ವೇ ಎಂದಿದ್ದಾರೆ.

    ಇದನ್ನೂ ಓದಿ: ಸಲಿಂಗಿ ಟೆನಿಸ್ ಆಟಗಾರ್ತಿ ಸಮಂತಾ ಸ್ಟೋಸರ್‌ಗೆ ಹೆಣ್ಣು ಮಗು!

    ತಾಯಿಯಾಗುವ ಖುಷಿಯಲ್ಲಿರುವ ನತಾಶಾ ದಿನಂಪ್ರತಿ ಪತಿ ಹಾರ್ದಿಕ್​ ಪಾಂಡ್ಯ ಜತೆಗಿರುವ  ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿದ್ದಾರೆ. ಬೇಬಿ ಬಂಪ್​ ಫೋಟೋ ಅಭಿಮಾನಿಗಳ ಗಮನಸೆಳೆದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ಸಿಹಿ ಸುದ್ದಿಗಾಗಿ ಕಾಯುತ್ತಿದ್ದೇವೆ, ಚಾಂಪ್​ ಬರುವುದನ್ನು ಕಾಯುತ್ತಿದ್ದೇವೆ, ಆರೋಗ್ಯಕರ ಮಗು ಜನಿಸಲಿ ಎಂದು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮಷ್ಟೇ ಮುದ್ದಾದ ಮಗು ಜನಿಸಲಿ, ಮತ್ತಷ್ಟು ಫೋಟೋಗಳನ್ನು ಪ್ರಕಟಿಸಿ ಎಂದು ಕೆಲ ಮಂದಿ ಕೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಒಲಿಂಪಿಕ್ಸ್ ಚಿಂತೆ ಇಲ್ಲ, ಅಥ್ಲೀಟ್ ಹಿಮಾ ದಾಸ್ ಈಗ ಕ್ರಿಕೆಟ್​ನಲ್ಲಿ ಮಗ್ನ…!

    ಟೀಮ್​ ಇಂಡಿಯಾ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಹಾಗೂ ನತಾಶಾ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಮೇ 31 ರಂದು ಘೋಷಿಸಿದ್ದರು. ಈ ಕುರಿತು ಪ್ರತ್ಯೇಕವಾಗಿ ಫೋಟೋಗಳನ್ನು ಶೇರ್​ ಮಾಡಿಕೊಂಡಿತ್ತು. ಇದೇ ಜನವರಿ 1 ರಂದು ಈ ಜೋಡಿ ದುಬೈನಲ್ಲಿ ಹಡಗಿನಲ್ಲಿ ಎಂಗೇಜ್ಮೆಂಟ್​ ಮಾಡಿಕೊಂಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts