More

    ಸಲಿಂಗಿ ಟೆನಿಸ್ ಆಟಗಾರ್ತಿ ಸಮಂತಾ ಸ್ಟೋಸರ್‌ಗೆ ಹೆಣ್ಣು ಮಗು!

    ಮೆಲ್ಬೋರ್ನ್: ಆಸ್ಟ್ರೇಲಿಯಾದ ಸ್ಟಾರ್ ಟೆನಿಸ್ ಆಟಗಾರ್ತಿ ಸಮಂತಾ ಸ್ಟೋಸರ್ ಅಮ್ಮನಾಗಿದ್ದಾರೆ. ಆದರೆ ಅವರು ಮಗುವಿಗೆ ಜನ್ಮ ನೀಡಿಲ್ಲ! ಅವರ ಸಲಿಂಗಿ ಜೀವನ ಸಂಗಾತಿಯಾಗಿರುವ ಲಿಜ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ! ಗೆಳತಿ ಲಿಜ್ ಕಳೆದ ಜೂನ್‌ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರುವುದನ್ನು 2011ರ ಯುಎಸ್ ಓಪನ್ ಚಾಂಪಿಯನ್ ಸ್ಟೋಸರ್ ಇನ್‌ಸ್ಟಾಗ್ರಾಂನಲ್ಲಿ ಸೋಮವಾರ ಪ್ರಕಟಿಸಿದ್ದಾರೆ. ಅದರ ಬೆನ್ನಲ್ಲೇ ಅವರಿಗೆ ಟೆನಿಸ್ ವಲಯದಿಂದ ಅಭಿನಂದನೆಗಳ ಸುರಿಮಳೆಯಾಗಿದೆ.

    ‘ಲಾಕ್‌ಡೌನ್ ಸಮಯದಲ್ಲಿ ಜೀವನ ಹಲವು ರೀತಿಯಲ್ಲಿ ಸವಾಲಿನದ್ದಾಗಿತ್ತು. ಆದರೆ ವೈಯಕ್ತಿಕವಾಗಿ ಇದು ನನಗೆ ಜೀವನದ ಅತ್ಯಂತ ಸಂತಸದ ಸಮಯ. ಕಳೆದ ಜೂನ್ 16ರಂದು ನನ್ನ ಸಂಗಾತಿ ಲಿಜ್ ನಮ್ಮ ಸುಂದರ ಪುಟ್ಟ ಹುಡುಗಿ ಜೆನೆವೀವ್‌ಗೆ ಜನ್ಮ ನೀಡಿದ್ದಾಳೆ. ಇದೊಂದು ಗೊಂದಲದ ಸಮಯ. ಆದರೆ ನಮಗೆ ಈಗ ಆಕೆ ಇಲ್ಲದ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಮ್ಮ ಮತ್ತು ಮಗಳು ಕ್ಷೇಮವಾಗಿದ್ದಾರೆ. ಅವರಿಬ್ಬರೊಂದಿಗೆ ಮನೆಯಲ್ಲಿ ಸಮಯ ಕಳೆಯುವುದು ಅಪೂರ್ವವಾಗಿದೆ. ಈ ಪುಟ್ಟ ಮಗುವನ್ನು ನಾವಿಬ್ಬರೂ ಪ್ರೀತಿಸುತ್ತಿದ್ದು, ಸಂತೋಷದ ಸಮಯ ಇದಾಗಿದೆ’ ಎಂದು 36 ವರ್ಷದ ಸಮಂತಾ ಸ್ಟೋಸರ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಮಾಸ್ಕ್ ಧರಿಸಿ ಬ್ರಾ ತ್ಯಜಿಸಿ, ಕರೊನಾಗೆ ಗಾಲ್ಫ್ ಆಟಗಾರ್ತಿ ಮದ್ದು!

    9 ವರ್ಷಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ಸೆರೇನಾ ವಿಲಿಯಮ್ಸ್‌ರನ್ನು ಮಣಿಸಿ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ಸಾಧನೆ ಮಾಡಿದ್ದ ಸ್ಟೋಸರ್, 2010ರ ಫ್ರೆಂಚ್ ಓಪನ್‌ನಲ್ಲಿ ರನ್ನರ್‌ಅಪ್ ಆಗಿದ್ದರು. ಅಲ್ಲದೆ ರೋಲ್ಯಾಂಡ್ ಗ್ಯಾರಸ್‌ನಲ್ಲಿ 3 ಬಾರಿ ಸೆಮಿೈನಲಿಸ್ಟ್ ಆಗಿದ್ದರು. ಡಬಲ್ಸ್‌ನಲ್ಲಿ ವಿಶ್ವ ನಂ. 1 ಪಟ್ಟವೇರಿದ್ದ ಸ್ಟೋಸರ್, 3 ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ. 2019ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಹಿಳಾ ಡಬಲ್ಸ್ ಪ್ರಶಸ್ತಿ ಒಲಿಸಿಕೊಂಡಿದ್ದರು. ಸಿಂಗಲ್ಸ್‌ನಲ್ಲಿ ಗರಿಷ್ಠ 4ನೇ ರ‌್ಯಾಂಕ್‌ಗೆ ಏರಿದ್ದ ಸ್ಟೋಸರ್, ಈಗ 97ನೇ ರ‌್ಯಾಂಕ್‌ಗೆ ಕುಸಿದಿದ್ದಾರೆ. ಕಳೆದ 6 ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲಿ ಅವರು 5ರಲ್ಲಿ ಮೊದಲ ಸುತ್ತಿನಲ್ಲೇ ಎಡವಿದ್ದಾರೆ.

    PHOTO | ಮಾಜಿ ಕ್ರಿಕೆಟಿಗ ಮೈಕೆಲ್ ಕ್ಲಾರ್ಕ್ ಜೀವನದಲ್ಲಿ ಹೊಸ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts