ನವದೆಹಲಿ: ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ನಗುಮುಖದೊಂದಿಗೆ ತವರಿಗೆ ಮರಳಿದೆ. ತಾಯ್ನಾಡಿಗೆ ಆಗಮಿಸಿದ ವಿಶ್ವಕಪ್ ಚಾಂಪಿಯನ್‌ಗಳಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ಗುರುವಾರ (ಜುಲೈ 04) ಬೆಳಗ್ಗೆ ದೆಹಲಿ ತಲುಪಿದ ಆಟಗಾರರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು. ಬಳಿಕ ಆಟಗಾರರು ಐಟಿಸಿ ಮೌರ್ಯ ಹೋಟೆಲ್ ತಲುಪಿದರು. ಅಲ್ಲಿಂದ ನೇರವಾಗಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದರು. ಎಲ್ಲ ಆಟಗಾರರು ಮೋದಿ ಅವರೊಂದಿಗೆ ಉಪಾಹಾರ ಸೇವಿಸಿದರು. ಇದೇ ವೇಳೆ ಮೋದಿ ಅವರ ನಡೆಯೊಂದು ಎಲ್ಲರ ಗಮನ ಸೆಳೆದಿದೆ ಮತ್ತು ಚರ್ಚೆಗೂ ಗ್ರಾಸವಾಗಿದೆ. ಪ್ರಧಾನಿ ಮೋದಿ ವಿಶ್ವಕಪ್ ಮುಟ್ಟಲಿಲ್ಲ ಏಕೆ? ಅದಕ್ಕೆ ಕಾರಣವೇನು? ಪ್ರಶ್ನೆ ಕೇಳಿಬಂದಿದೆ.
ಭೇಟಿಯ ವೇಳೆ ಪ್ರತಿಯೊಬ್ಬ ಕ್ರಿಕೆಟಿಗರನ್ನು ಮೋದಿ ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಟೀಮ್ ಇಂಡಿಯಾ ಮೋದಿಗೆ ವಿಶ್ವಕಪ್ ಅನ್ನು ಉಡುಗೊರೆಯಾಗಿ ನೀಡಿತು. ಇದರ ನಡುವೆ ಸ್ವಾರಸ್ಯಕರ ಘಟನೆ ಸಹ ನಡೆಯಿತು. ಅದೇನೆಂದರೆ, ಮೋದಿ ಅವರು ವಿಶ್ವಕಪ್ ಮುಟ್ಟಲಿಲ್ಲ. ಹೆಡ್ ಕೋಚ್ ರಾಹುಲ್ ದ್ರಾವಿಡ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮ ವಿಶ್ವಕಪ್ ಹಿಡಿದರೆ, ಪ್ರಧಾನಿ ಮೋದಿ ಮಾತ್ರ ವಿಶ್ವಕಪ್ ಹಿಡಿಯಲಿಲ್ಲ. ಬದಲಾಗಿ ರೋಹಿತ್ ಹಾಗೂ ದ್ರಾವಿಡ್ ಕೈ ಹಿಡಿದಿದ್ದರು. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಧಾನಿ ಮೋದಿ ವಿಶ್ವಕಪ್ ಅನ್ನು ಏಕೆ ಮುಟ್ಟಲಿಲ್ಲ? ಎಂಬ ಪ್ರಶ್ನೆಯನ್ನು ನೆಟ್ಟಿಗರು ಎತ್ತುತ್ತಿದ್ದಾರೆ. ಆದರೆ, ಈ ವಿಚಾರದಲ್ಲೂ ಪ್ರಧಾನಿ ಮೋದಿ ದೊಡ್ಡತನ ಮೆರೆದಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶ್ವಕಪ್ ಗೆಲುವಿನಲ್ಲಿ ಆಟಗಾರರು ಮತ್ತು ತಂಡದ ಕೋಚ್ ಕಷ್ಟಪಟ್ಟು ಕೆಲಸ ಮಾಡಿರುವುದರಿಂದ ಆ ಕ್ರೆಡಿಟ್ ಅವರಿಗೆ ಮಾತ್ರ ಸಲ್ಲಬೇಕು ಎಂಬ ಕಾರಣಕ್ಕೆ ಅವರಿಂದಲೇ ಟ್ರೋಫಿಯನ್ನು ಹಿಡಿಸಿದ್ದಾರೆ ಹೊರತು ಬೇರೆ ಏನು ಇಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಪ್ರಧಾನಿ ಮೋದಿ ಬಗ್ಗೆ ಕೆಲವರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಪ್ರಧಾನಿ ಭೇಟಿ ಬಳಿಕ ಟೀಮ್ ಇಂಡಿಯಾ ಆಟಗಾರರು ಮುಂಬೈಗೆ ತೆರಳಿದರು. ಮುಂಬೈ ವಿಮಾನ ನಿಲ್ದಾಣದಿಂದ ನೇರವಾಗಿ ವಾಂಖೆಡೆ ಸ್ಟೇಡಿಯಂ ತಲುಪಿದರು. ವಾಂಖೆಡೆ ಸ್ಟೇಡಿಯಂ ಬಳಿ ತೆರೆದ ಬಸ್ನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಿತು. ಇದನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಮುಂಬೈ ಬೀದಿಗಳಲ್ಲಿ ಬೀಡುಬಿಟ್ಟಿದ್ದರು. ಟೀಮ್ ಇಂಡಿಯಾ ಆಗಮನದಿಂದ ಮುಂಬೈನಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನಗರಕ್ಕೆ ಆಗಮಿಸಿದ್ದರಿಂದ ಸಂಚಾರ ದಟ್ಟಣೆಯು ಉಂಟಾಯಿತು. ಬಳಿಕ ಬಿಸಿಸಿಐ ವಾಂಖೆಡೆ ಸ್ಟೇಡಿಯಂನಲ್ಲಿ ಆಟಗಾರರನ್ನು ಸನ್ಮಾನಿಸಿತು. (ಏಜೆನ್ಸೀಸ್)
Indian Cricket Team meets PM @narendramodi at his residence #T20WorldCupFinal #T20WorldCup #T20WorldCup2024 pic.twitter.com/Z5nJ1PcKBn
— DD News (@DDNewslive) July 4, 2024
ಆತ ಟೀಮ್ ಇಂಡಿಯಾದ ಪವಾಡ! ಭಾರತದಲ್ಲಿ ಇಂತಹ ಆಟಗಾರ ಮತ್ತೆ ಹುಟ್ಟಲ್ಲ ಅಂದ್ರು ಸೆಹ್ವಾಗ್
ಟಿ20 ವಿಶ್ವಕಪ್ ಗೆದ್ದ ರೋಹಿತ್ ಪಡೆ ಭಾರತಕ್ಕೆ ತಂದಿದ್ದು ಅಸಲಿಯಲ್ಲ ನಕಲಿ ಟ್ರೋಫಿ! ಇಲ್ಲಿದೆ ಅಚ್ಚರಿಯ ಮಾಹಿತಿ