More

  ನರೇಗಾ ಯೋಜನೆಯ ಸದುಪಯೋಗ ಪಡೆಯಿರಿ

  ಯಲಬುರ್ಗಾ: ನರೇಗಾ ಯೋಜನೆಯಡಿ ವಿವಿಧ ಕಾಮಗಾರಿ ನಿರ್ವಹಿಸಲು ಅವಕಾಶವಿದ್ದು, ಕೂಲಿಕಾರರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಿಡಿಒ ರೇಣುಕಾ ಟಂಕದ ಹೇಳಿದರು.

  ಇದನ್ನೂ ಓದಿ: ನರೇಗಾ ಯೋಜನೆಯ ಸದುಪಯೋಗ ಪಡೆಯಿರಿ

  ತಾಲೂಕಿನ ಕಲ್ಲೂರು ಗ್ರಾಮ ಪಂಚಾಯತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿದರು.
  ಗ್ರಾಮದ ಅಭಿವೃದ್ಧಿಗಾಗಿ ವಿವಿಧ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ.

  ಉದ್ಯೋಗ ಖಾತ್ರಿಯಡಿ ಬದು, ಕೃಷಿಹೊಂಡ, ಕೆರೆ ಹೂಳೆತ್ತುವುದು, ತಡೆಗೋಡೆ ನಿರ್ಮಿಸಲಾಗಿದೆ. 60 ಫಲಾನುಭವಿಗಳು ಸದುಪಯೋಗ ಪಡೆದುಕೊಂಡಿದ್ದಾರೆ. 32 ಲಕ್ಷ ರೂ. ವೆಚ್ಚದಲ್ಲಿ ಕೆಲಸ ಮಾಡಲಾಗಿದೆ ಎಂದರು.

  ಗ್ರಾಪಂ ಅಧ್ಯಕ್ಷ ನಾಗಯ್ಯ, ಉಪಾಧ್ಯಕ್ಷ ರಾಮಣ್ಣ, ಗಣ್ಯರಾದ ಕಲ್ಲಯ್ಯ, ಶಿವಪ್ಪ ಕುರಿ, ಮುರಾರಿ ಜಗತಾಪ, ಸಿದ್ದಲಿಂಗಮ್ಮ, ಶರಣಪ್ಪ ಕುರಿ, ವೀರಣ್ಣ ನಿಂಗೋಜಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts