ಗುರುಗಳ ಆದರ್ಶ ಪಾಲನೆ

billava
ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಕೆ.ಪಿ.ಕೋಟಿ ಪೂಜಾರಿ, ಪತ್ನಿ ಕೆ.ಎಸ್.ಪರಿಮಳ ಅವರನ್ನು ಗೌರವಿಸಲಾಯಿತು
Published on

ಕೋಟ: ವಡ್ಡರ್ಸೆ ಗ್ರಾಪಂ ವ್ಯಾಪ್ತಿಯ ಬ್ರಹ್ಮ ಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತ್ಯುತ್ಸವ ಸೋಮವಾರ ಜರುಗಿತು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಬ್ರಹ್ಮಶ್ರೀಗಳ ತತ್ವ, ಆದರ್ಶ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಬಿಲ್ಲವ ಸಮುದಾಯದ ಶ್ರೀಗಳಾದ ನಿಪ್ಪಾಣಿ ಶ್ರೀ ಶ್ರೀ ಅರುಣಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಗೌರವಾಧ್ಯಕ್ಷ, ಗ್ರಾಮ ಪಂಚಾಯಿತಿ ಸದಸ್ಯ ಕೆ.ಪಿ.ಕೋಟಿ ಪೂಜಾರಿ, ಪತ್ನಿ ಕೆ.ಎಸ್.ಪರಿಮಳ ಅವರನ್ನು ಗೌರವಿಸಲಾಯಿತು. ವಡ್ಡರ್ಸೆ ಬಿಲ್ಲವ ಸಂಘ ಅಧ್ಯಕ್ಷ ಸುಕೇಶ್ ಪೂಜಾರಿ, ಕುಂದಾಪುರ ಬಿಲ್ಲವ ಸಂಘ ಅಧ್ಯಕ್ಷ ಅಶೋಕ್‌ಪೂಜಾರಿ ಬೀಜಾಡಿ, ಗ್ರಾಪಂ ಅಧ್ಯಕ್ಷ ಲೋಕೇಶ್ ಕಾಂಚನ್, ವಡ್ಡರ್ಸೆ ಬಿಲ್ಲವ ಸಂಘ ಮಾಜಿ ಅಧ್ಯಕ್ಷೆ ಶಾರದಾರಾಮ ಪೂಜಾರಿ, ವಡ್ಡರ್ಸೆ ಗ್ರಾಪಂ ಸದಸ್ಯರಾದ ಹರೀಶ್ ಶೆಟ್ಟಿ, ರೇಖಾ ಶರತ್ ಶೆಟ್ಟಿ ಉಪಸ್ಥಿತರಿದ್ದರು. ಬಿಲ್ಲವ ಮುಖಂಡ ಭಾಸ್ಕರ್ ಪೂಜಾರಿ ಕುದುರಿಕಟ್ಟೆ ಸ್ವಾಗತಿಸಿದರು. ಸಂಘದ ಜತೆ ಕೋಶಾಧಿಕಾರಿ ಪ್ರದೀಪ್ ಪೂಜಾರಿ ಸನ್ಮಾನಪತ್ರ ವಾಚಿಸಿದರು. ಸದಸ್ಯೆ ಸರೋಜಾ ಪೂಜಾರಿ ನಿರೂಪಿಸಿದರು.

ಭಜನೆ ಕಾರ್ಯಕ್ರಮ

ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ, ವೇಣುಗೋಪಾಲ ಭಜನಾ ತಂಡ ಉಪ್ಲಾಡಿ, ಶ್ರೀ ಮಹಾಲಿಂಗೇಶ್ವರ ವಡ್ಡರ್ಸೆ ಅವರಿಂದ ಭಜನೆ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net