

ಗೋಳಿಯಂಗಡಿ: ಸಹಕಾರಿ ನಿಯಮಗಳನ್ನು ಪಾಲಿಸಿಕೊಂಡು ಸದಸ್ಯರ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿದೆ. ಗ್ರಾಹಕರು ಹೆಚ್ಚಿನ ವ್ಯವಾಹಾರದ ಜತೆಗೆ ಸಂಘದ ಏಳಿಗೆಗೂ ಕೈಜೋಡಿಸಬೇಕು ಎಂದು ಗೋಳಿಯಂಗಡಿ ಶ್ರೀದುರ್ಗಾ ವಿವಿಧೋದ್ದೇಶ ಸಹಕಾರ ಸಂಘ ಅಧ್ಯಕ್ಷ ಸುರೇಂದ್ರ ನಾಯ್ಕ ಯಳಂತೂರು ಹೇಳಿದರು.
ಹಿಲಿಯಾಣದಲ್ಲಿ ಭಾನುವಾರ ಗೋಳಿಯಂಗಡಿ ಶ್ರೀದುರ್ಗಾ ವಿವಿಧೋದ್ದೇಶ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪಾಧ್ಯಕ್ಷ ಬೆಳ್ವೆ ತೆಂಕಬೆಟ್ಟು ಕೃಷ್ಣ ನಾಯ್ಕ, ನಿರ್ದೇಶಕ ಕೃಷ್ಣನಾಯ್ಕ ಸೆಟ್ಟೋಳಿ, ಗಣಪತಿ ನಾಯ್ಕ ಬೆಳ್ವೆ, ಪ್ರಭಾಕರ ನಾಯ್ಕ ಹಾಡಿಮನೆ ತೊನ್ನಾಸೆ, ಕಾಳು ನಾಯ್ಕ ಎಲ್ಸೆಮನೆ ಹೆಂಗವಳ್ಳಿ, ಲಕ್ಷ್ಮಣ ನಾಯ್ಕ ಆರ್ಡಿ, ಜಾನಕಿ ಬೆಳನಬೆಟ್ಟು ಕಲ್ಲಾಟೆ, ಸೂರ್ಯಕಾಂತಿ ನಿಲ್ಸಕಲ್ ಹೆಂಗವಳ್ಳಿ ಉಪಸ್ಥಿತರಿದ್ದರು.
ನಿರ್ದೇಶಕ ಗಣಪತಿ ನಾಯ್ಕ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಲಲಿತಾ ಮರೂರು ವರದಿ ವಾಚಿಸಿದರು. ಅಕೌಂಟೆಂಟ್ ಕೃಷ್ಣ ನಾಯ್ಕ ವಂದಿಸಿದರು. ನಿರ್ದೇಶಕ ಪ್ರಭಾಕರ ನಾಯ್ಕ ತೊನ್ನಾಸೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ರವಿ ಸಹಕರಿಸಿದರು.
ಕುಂದಾಪುರ ಉಪವಿಭಾಗ ಸಹಕಾರಿ ಸಂಘಗಳ ನಿವೃತ್ತ ಉಪ ನಿಬಂಧಕ ಅರುಣ್‌ಕುಮಾರ್ ಎಸ್ ವಿ, ಸಂಘದ ಮಾಜಿ ನಿರ್ದೇಕರಾದ ಅಣ್ಣಪ್ಪ ನಾಯ್ಕ ಅಲ್ಬಾಡಿ, ಗಣಪ ನಾಯ್ಕ ಮರೂರು, ಸುಬ್ಬ ನಾಯ್ಕ ಹೆಂಗವಳ್ಳಿ, ಸುಜಾತ ಶೇಡಿಮನೆ, 2023-24ನೇ ಸಾಲಿನ ರಾಜ್ಯಶಾಸ್ತ್ರ ವಿಭಾಗದಲ್ಲಿ ಮಂಗಳೂರು ವಿಶ್ವ ವಿದ್ಯಾಲಯದಿಂದ ಚಿನ್ನದ ಪದಕ ವಿಜೇತರಾದ ಪ್ರಿಯಾಂಕಾ ಯಳಂತೂರು ಅವರುಗಳಿಗೆ ಸನ್ಮಾನ, ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.
ಸಹಕಾರಿ ಸಂಘವು ಸ್ವಂತಹ ಕಟ್ಟಡದೊಂದಿಗೆ ಆಧುನಿಕ ತಂತ್ರಜ್ಞಾನ ಹಾಗೂ ಉತ್ತಮ ವ್ಯವಸ್ಥೆಗಳನ್ನು ಹೊಂದಿದೆ. 41.70 ಕೋಟಿ ರೂ.ಗೂ ಅಧಿಕ ವ್ಯವಹಾರ ನಡೆಸಿದ್ದು, 32.86 ಲಕ್ಷ ರೂ.ಗೂ ಅಧಿಕ ಲಾಭ ಪಡೆದಿದೆ. ಸದಸ್ಯರಿಗೆ ಶೇ.14 ಶೇಕಡಾ ಡಿವಿಡೆಂಡ್ ನೀಡಲಾಗುವುದು.-ಸುರೇಂದ್ರ ನಾಯ್ಕ, ಅಧ್ಯಕ್ಷ, ಶ್ರೀದುರ್ಗಾ ವಿವಿಧೋದ್ದೇಶ ಸಹಕಾರ ಸಂಘ